ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

‘ಯೋಗದೂತ’ ‘ ಯೋಗಪ್ರದರ್ಶನದ ಗಾರುಡಿಗ’ ‘ಯೋಗ ತಿರುಕ’ ಪ್ರೊ. ಲಕ್ಷ್ಮಣಕುಮಾರ ಸಣ್ಣೆಲ್ಲಪ್ಪನವರ.

ದೆಹಲಿಯ ‘ಭಾರತ ಮಂಟಪಮ್ ‘ದಲ್ಲಿ ೧೯-೧೨-೨೦೨೫ ರಂದು ಜರುಗಿದ ದ್ವಿತೀಯ ‘ವಿಶ್ವ ಆರೋಗ್ಯ ಸಂಸ್ಥೆ’ಯ ಜಾಗತಿಕ ಶೃಂಗಸಭೆ (2 nd WHO Global Summit) ಯಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರು ಕರ್ನಾಟಕ ವಿಶ್ವವಿದ್ಯಾಲಯದ ಯೋಗ ಅಧ್ಯಯನ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಯೋಗದೂತ ಪ್ರೊ. ಲಕ್ಷ್ಮಣ ಕುಮಾರ್ ಸಣ್ಣೆಲ್ಲಪ್ಪನವರ ಅವರಿಗೆ ಜೀವಮಾನದ ಯೋಗ ಸಾಧನೆಗಾಗಿ ಭಾರತ ಸರಕಾರದ ‘ಪಿ ಎಂ ಯೋಗ ಪ್ರಶಸ್ತಿ (‘ PM YOGA AWARD’)ಯನ್ನು ಪ್ರದಾನಿಸಿ ಗೌರವಿಸಿದರು. ಪ್ರೊ. ಲಕ್ಷ್ಮಣ ಕುಮಾರವರು ಕಳೆದ 78 ವರ್ಷ, (1948 ರಿಂದ ಇಂದಿನವರೆಗೂ) ಗಳಿಂದ ನಿರಂತರವಾಗಿ ದೇಶ, ವಿದೇಶಗಳಲ್ಲಿ ವಿವಿಧ ಬಗೆಗಳಲ್ಲಿ ಉಚಿತವಾಗಿ ಯೋಗ ಕ್ಷೇತ್ರಕ್ಕೆ ತ್ರಿಕರಣ ಪೂರ್ವಕವಾಗಿ ಸಲ್ಲಿಸಿದ ಸೇವೆಗೆ ಸಂದ ಪ್ರಶಸ್ತಿಯಿದು.
ಅವರ ಊರು ಯರೇಕುಪ್ಪಿ, ಇವರ ಗುರುಗಳ ಹೆಸರು ಶ್ರೀ ನೀಲಕಂಧರ.

ಈ ಜನವರಿ ತಿಂಗಳಿಗೆ ತಮ್ಮ ಜೀವನದ 90 ವಸಂತಗಳನ್ನು ಪೂರ್ಣಗೊಳಿಸಿ 91ನೇ ವಯಸ್ಸಿಗೆ ಪಾದಾರ್ಪಣೆ ಮಾಡುತ್ತಿರುವ ಲಕ್ಷ್ಮಣ ಕುಮಾರವರು ತಮ್ಮ 12 ನೆಯ ವಯಸ್ಸಿನಿಂದ ಯೋಗ ಅಭಿಯಾನವನ್ನು ಆರಂಭಿಸಿರುವರು. ತಮ್ಮ ಹಳ್ಳಿಯಿಂದ ದೇಶದ ರಾಜಧಾನಿ ದಿಲ್ಲಿಯವರೆಗೆ ಅವರು ಕೈಕೊಂಡ ಬಹುಮುಖ ಯೋಗ ಸೇವೆಯು ಅವರಿಗೆ ಆಗ ‘ಯೋಗ ತಿರುಕ’ ಎಂಬ ಬಿರುದನ್ನು ನೀಡಿತು.

‘ ವಿವರಣಾತ್ಮಕ-ಯೋಗ-ಪ್ರದರ್ಶನ’ (‘Lecture Cum Demonstration’)ದ ‘ಗಾರುಡಿಗ’ ಎಂಬ ಹೆಸರನ್ನೂ ಪಡೆದ ಪ್ರೊ ಲಕ್ಷ್ಮಣಕುಮಾರವರು ತಮ್ಮ ಅಪ್ರತಿಮ ಕಲೆಯಿಂದ ‘ಯೋಗಜಾಗೃತಿ’ಯನ್ನುಂಟು ಮಾಡಿದರು.

‘ಎಲ್ಲರಿಗೂ ಯೋಗ’ (‘YOGA FOR ALL’) ಎಂಬ ಘೋಷವಾಕ್ಯದ ಧ್ಯೇಯದೊಂದಿಗೆ ತಮ್ಮ’ ಉತ್ಸಾಹಿ’ ಯೋಗ ಮಂದಿರದ ಮೂಲಕ ಯೋಗಜ್ಯೋತಿಯನ್ನು ಬೆಳಗಿಸಿದರು. ಯೋಗದ ಬಗ್ಗೆ ಅನೇಕ ತಪ್ಪು ತಿಳುವಳಿಕೆಗಳಿದ್ದ 50 ರ ದಶಕದಲ್ಲಿ ಹಲವಾರು ಸ್ಥಳಗಳಿಗೆ ಸಂಚರಿಸಿ ಎಲ್ಲಾ ಕ್ಷೇತ್ರಗಳ ಜನ ಎಲ್ಲ ಜನರಿಗೆ ಯೋಗ ವಿಭಿನ್ನ ವಿಧಗಳಲ್ಲಿ ಹೇಗೆ ಪ್ರಯೋಜನಕಾರಿ ಎಂಬುದನ್ನು ವೈಜ್ಞಾನಿಕವಾಗಿ ಮನದಟ್ಟು ಮಾಡಿದರು.

ಇವರು 1989 ರಲ್ಲಿ ಭಾರತ ಸರಕಾರದಿಂದ ವಿದೇಶ ಸೇವೆಗೆ ರಾಷ್ಟ್ರ ಮಟ್ಟದಲ್ಲಿ ನಡೆದ ಸಂದರ್ಶನದಲ್ಲಿ ಪ್ರಥಮ ರಾಗಿ ಆಯ್ಕೆಯಾಗಿ ಆಗಿನ ಸೋವಿಯತ್ ದೇಶ (USSR) ಕ್ಕೆ ಅಂದಾಜು ನಾಲ್ಕು ವರ್ಷಗಳ ಕಾಲ ಯೋಗ ಬೋಧನೆಗೆ ಕಳುಹಿಸಲ್ಪಟ್ಟ ಭಾರತ ಸರಕಾರದ ಪ್ರಥಮ ಅಂತರಾಷ್ಟ್ರೀಯ ಖ್ಯಾತಿಯ ಯೋಗ ಶಿಕ್ಷಕ (First International Yoga Teacher Selected by Government of INDIA) ರೂ ಆಗಿರುವರು. ಪ್ರಪಂಚದ ಅತಿ ಬಲಿಷ್ಠ ಕಮ್ಯುನಿಸ್ಟ್ ರಾಷ್ಟ್ರವಾದ ಸೋವಿಯತ್ ದೇಶದ ಜನತೆಯಿಂದ “We will die without yoga”) ಎಂಬ ಸ್ಲೋಗನ್ ಹೊರಡಿಸಿದ ಸಾಹಸದ ಕೀರ್ತಿಗೂ ಭಾಜನರಾಗಿರುವರು.

ಪ್ರೊ.ಲಕ್ಷ್ಮಣಕುಮಾರ.ಸಣ್ಣೆಲ್ಲಪ್ಪನವರ ಇವರು ಧಾರವಾಡ ಜಿಲ್ಲೆಯ ಯರಗುಪ್ಪಿ ಗ್ರಾಮದ ವೀರಪ್ಪ-ಗೌರಮ್ಮ ದಂಪತಿಗಳ ಕುಲದೀಪಕರು. ಬಾಲ್ಯದಿಂದಲೂ ಕಠಿಣ ಪರಿಶ್ರಮಿಗಳ.ಫಿಲಾಸಫಿ ವಿಷಯ ಆಯ್ಕೆಮಾಡಿ ಎಂ.ಎ.ಮುಗಿಸಿದರು.
1973 ರಲ್ಲಿ ಪ್ರತಿಷ್ಠಿತ ಯೋಗ ಸಂಸ್ಥೆಯಾದ ಕೖವಲ್ಯಧಾಮ ಲೋನಾವಳ (ಮಹಾರಾಷ್ಪ)ದಲ್ಲಿ ಡಿಪ್ಲೋಮಾ ಯೋಗ ಪದವಿ ಪಡೆದರು. ಇವರ ಯೋಗ ಪ್ರಯಾಣವು 1948 ರಿಂದಲೇ ಪ್ರಾರಂಭವಾಯಿತು. ನೀಲಕಂದಹರಾ ಮೇಲಿನಮನಿ ಅವರು ಯೋಗ ಗುರುವರ್ಯರ ಮಾರ್ಗದರ್ಶನದಲ್ಲಿ ಯೋಗ ಪರಿಣಿತರಾದರು.ತಮ್ಮ ಯೋಗದ ಕೌಶಲ್ಯವನ್ನು ಜಗತ್ತಿನಾದ್ಯಂತ 32 ರಾಷ್ಟ್ರಗಳಲ್ಲಿ ಪಸರಿಸಿದರು.
1975 ರಲ್ಲಿ ಕವಿವಿ ಧಾರವಾಡದಲ್ಲಿ ‘ಯೋಗ ಅಧ್ಯಯನ ಕೇಂದ್ರ’ ಪ್ರಾರಂಭಿಸಿ ‘ ಸರ್ಟಿಫಿಕೆಟ್ ಕೋರ್ಸ್ ಇನ್ ಯೋಗ ಕೋರ್ಸ್’ ನ್ನು ಸಂಸ್ಥಾಪಿಸಿದರು. ಇವರು ಕವಿವಿ ಯೋಗ ಅಧ್ಯಯನ ವಿಬಾಗದ ಸಂಸ್ಥಾಪಕ ಚೇರ್ ಮನ್ನರಾಗಿ,ರಾಣಿ ಚನ್ನಮ್ಮ ವಿವಿ ಬಳ್ಳಾರಿಯಲ್ಲಿ ಯೋಗ ವಿಭಾಗದ ಸಂಸ್ಥಾಪಕರೆಂಬ ಕೀರ್ತಿಶಾಲಿಗಳೆನಿಸಿರುವದು ಅಭಿಮಾನದ ಸಂಗತಿ. ಇವರ ಕುಟುಂಬದ ಸದಸ್ಯರೆಲ್ಲರೂ ಇವರ ಸಾಧನೆಗೆ ಉತ್ಸಾಹಕ್ಕೆ ಸ್ಪೂರ್ತಿಯಸೆಲೆಯಾಗಿರುವ ಯೋಗ ಗಾರುಡಿಗರಿಗೆ ಸರ್ವ ಅಭಿಮಾನಿಗಳು ತೊಂಭತ್ತೊಂದನೆಯ ಹುಟ್ಟುಹಬ್ಬದ ಹ್ರೃತ್ಪೂರ್ವಕ ಶುಭಾಶಯಗಳನ್ನು ಸಮರ್ಪಿಸಿ ಶತವರುಷಕ್ಕಿಂತ ಮಿಗಿಲಾಗಿ ಆಯುರಾರೋಗ್ಯ ಸೌಭಾಗ್ಯವನ್ನು ಭಗವಂತನು ಕರುಣಿಸಲಿ ಎಂದು ಮನದುಂಬಿ ಶುಭಹಾರೖಸಿರುವರು.

  • ಪ್ರೊ.ಶಕುಂತಲಾ.ಚನ್ನಪ್ಪ.ಸಿಂಧೂರ.
    ಸಾಹಿತ್ಯ ಚಿಂತಕರು,ಗದಗ.
    9980711435, 9902841651.
    svkundgol@gmail.com
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!