ಚಾಮರಾಜನಗರ/ಕೊಳ್ಳೇಗಾಲ :
ಸಂತೇಮರಹಳ್ಳಿ ಕ್ಷೇತ್ರ ವ್ಯಾಪ್ತಿಯ ಕಮರವಾಡಿ ಗೇಟ್ ನಿಂದ ಕಾವುದವಾಡಿ ಗೇಟ್ ಬಳಿಯವರೆಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ರಸ್ತೆಗೆ ಮರು ಡಾಂಬರೀಕರಣ ಕಾಮಗಾರಿ ಹಾಗೂ ದೇಮಹಳ್ಳಿ ಮರು ಡಾಂಬರೀಕರಣಕ್ಕೆ ಚಾಲನೆ ನೀಡಿದ ಕೊಳ್ಳೇಗಾಲ ವಿಧಾನಸಭಾಕ್ಷೇತ್ರದ ಶಾಸಕ ಎ ಆರ್ ಕೃಷ್ಣ ಮೂರ್ತಿ ಮಾತನಾಡಿ ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 50 ಕೋಟಿ ರೂ. ವಿಶೇಷ ಅನುದಾನ ನೀಡಿದ್ದು, ರಸ್ತೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅನುದಾನ ಬಳಕೆ ಮಾಡಿಕೊಳ್ಳಬೇಕು ಎನ್ನುವ ಸೂಚನೆ ನೀಡಿದ್ದಾರೆ. ಈ ನಿಮಿತ್ತ ರಾಜ್ಯ ಹೆದ್ದಾರಿ ಹಾಗೂ ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಹೆಚ್ಚು ಒತ್ತು ನೀಡಲಾಗುತ್ತಿದೆ. ಕಮರವಾಡಿ ಗೇಟ್ ನಿಂದ ಕಾವುದವಾಡಿ ಗೇಟ್ ಬಳಿ ವರೆಗೆ ಸಂಪರ್ಕ ಕಲ್ಪಿಸುವ 2 ಕಿ.ಮೀ. ರಸ್ತೆಯನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ಒಂದು ಕೋಟಿ ರೂ. ವೆಚ್ಚದಲ್ಲಿ ಮರು ಡಾಂಬರೀಕರಣ ಮಾಡಲಾಗುತ್ತಿದೆ,” ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಚ್.ವಿ.ಚಂದ್ರು, ಚಾಮುಲ್ ನಿರ್ದೇಶಕರಾದ ಕಮರವಾಡಿ ರೇವಣ್ಣ , ಸಂತೇಮರಹಳ್ಳಿ ಗ್ರಾ.ಪಂ.ಅಧ್ಯಕ್ಷೆ ತಾಯಮ್ಮ, ದೇಮಹಳ್ಳಿ ಗ್ರಾ.ಪಂ. ಉಪಾಧ್ಯಕ್ಷೆ ರಾಜಮ್ಮ ಸದಸ್ಯರಾದ ಕುಮಾರ್, ಲತಾ, ಸುಮಿತ್ರಾ, ಡಿ.ಕೆ. ಶಿವಕುಮಾರ್, ಅಭಿವೃದ್ಧಿ ಅಧಿಕಾರಿ ವೆಂಕಟಚಲಮೂರ್ತಿ, ಪ್ರಜಾ ಪ್ರತಿನಿಧಿ ಅಧ್ಯಕ್ಷರಾದ ಸಂತೇಮರಹಳ್ಳಿ ಪಶಿ, ಮುಖಂಡರಾದ ಕೆ.ಪಿ. ಮಹದೇವಸ್ವಾಮಿ, ಕೆ.ಸಿ.ರಾಜು, ನಂಜುಂಡಪ್ಪ, ವಿಶ್ವ, ಗಣಗನೂರು ನಾಗಯ್ಯ, ಮಾಯಪ್ಪ, ಮಲ್ಲಿಕಾರ್ಜುನ, ಕಂದಹಳ್ಳಿನಂಜುಂಡಸ್ವಾಮಿ, ಶಂಕರ್, ಶ್ರೀನಿವಾಸ್, ಶಿವನಂಜಯ್ಯ, ಬಾಣಹಳ್ಳಿ ಬಸವಣ್ಣ, ನಟರಾಜಪ್ಪ, ಪ್ರಭು, ನಾಗೇಶ್, ಸುಗಂಧರಾಜು, ಶಂಕರಪ್ಪ ಗುತ್ತಿಗೆದಾರ ಗಿರೀಶ್, ತೆಳ್ಳನೂರು ಲೋಕೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ ಉಸ್ಮಾನ್ ಖಾನ್




















