ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಎಂಪಿಎಲ್-9 ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ವಿಜಯಶಾಲಿಯಾಗಿ ಹೊರ ಹೊಮ್ಮಿದ ದ ಕಿಂಗ್ಸ್ ತಂಡ : ಯುವಕರ ಕ್ರಿಕೆಟ್ ಪ್ರತಿಭೆ ಅನಾವರಣಕ್ಕೆ ಕ್ರಿಕೆಟ್ ಟೂರ್ನಿಮೆಂಟ್ ಮುಖ್ಯ ವೇದಿಕೆ : ಚಾನಾಳ್ ರಾಜಶೇಖರ

ಕಂಪ್ಲಿ: ಎಂಪಿಎಲ್-9 ಕ್ರಿಕೆಟ್ ಟೂರ್ನಮೆಂಟ್ ಆಯೋಜನೆಯೊಂದಿಗೆ ಕ್ರೀಡೆಗೆ ಪ್ರೋತ್ಸಾಹ ನೀಡಿದ್ದಾರೆ. ಇದರಿಂದ ಪ್ರತಿಭಾವಂತ ಯುವಕರು ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಕರವೇ (ಟಿ.ನಾರಾಯಣಗೌಡ ಬಣ) ರಾಜ್ಯ ಉಪಾಧ್ಯಕ್ಷ ಚಾನಾಳ್ ರಾಜಶೇಖರ ಹೇಳಿದರು.
ತಾಲೂಕಿನ ನಂ.10 ಮುದ್ದಾಪುರ ಗ್ರಾ.ಪಂ. ಯ ಯಲ್ಲಮ್ಮಕ್ಯಾಂಪಿನಲ್ಲಿರುವ ಬಯಲು ಕ್ರೀಡಾಂಗಣದಲ್ಲಿ ಕರವೇ ರಾಜ್ಯ ಉಪಾಧ್ಯಕ್ಷ ಚಾನಾಳ್ ರಾಜಶೇಖರ ಅವರ ಜನ್ಮದಿನದ ಅಂಗವಾಗಿ ಗುರುವಾರ ಆಯೋಜಿಸಿದ್ದ ಎಂಪಿಎಲ್-9 ಕ್ರಿಕೆಟ್ ಟೂರ್ನಮೆಂಟ್ ಫೈನಲ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಕೇಕ್ ಕತ್ತರಿಸಿ, ತಮ್ಮ ಜನ್ಮದಿನ ಆಚರಿಸಿದ ನಂತರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆಗಳು ಅಗತ್ಯವಾಗಿವೆ. ಆದ್ದರಿಂದ ಕಂಪ್ಲಿಯ ಯಲ್ಲಮ್ಮ ಕ್ಯಾಂಪಿನಲ್ಲಿ ಕ್ರಿಕೆಟ್ ಆಯೋಜನೆ ಮಾಡುವ ಮೂಲಕ ಯುವಕರ ಪ್ರತಿಭೆ ಹೊರ ತರಲು ಮುಖ್ಯ ವೇದಿಕೆಯಾಗಿದೆ. ಕ್ರೀಡೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತಾಲೂಕು ಅಧ್ಯಕ್ಷ ಬಳೆ ಮಲ್ಲಿಕಾರ್ಜುನ ಅವರ ಪಾತ್ರ ಅತಿ ಮುಖ್ಯವಾಗಿದೆ ಎಂದರು.
ವೀರಶೈವ ಲಿಂಗಾಯತ ಮಹಾ ವೇದಿಕೆಯ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯವಾಗಿರುತ್ತದೆ. ಇಂತಹ ಸೋಲು ಮುಂದಿನ ಗೆಲುವಿಗೆ ನಾಂದಿಯಾಗುತ್ತದೆ. ಪ್ರತಿಯೊಬ್ಬರು ಕ್ರೀಡಾ ಮನೋಭಾವ ಹೊಂದಬೇಕು ಎಂದರು.
ತಾಲೂಕು ಅಧ್ಯಕ್ಷ ಬಳೆ ಮಲ್ಲಿಕಾರ್ಜುನ ಕ್ರಿಕೆಟ್ ನೇತೃತ್ವವಹಿಸಿ ಮಾತನಾಡಿ, ನಾಡು ನುಡಿಗಾಗಿ ಚಾನಾಳ್ ರಾಜಶೇಖರ ಅವರು ಕಳೆದ 20 ವರ್ಷದಿಂದ ಹಗಲಿರುಳು ಶ್ರಮಿಸುತ್ತಾ ಬಂದಿದ್ದಾರೆ. ಅವರ ಆದರ್ಶಗಳು ನಮಗೆ ಪ್ರೇರಣೆಯಾಗಿವೆ. ಇಲ್ಲಿನ ಕ್ಯಾಂಪಿನಲ್ಲಿ ಕ್ರಿಕೆಟ್ ಟೂರ್ನಿಮೆಂಟ್ ಮೂಲಕ ರಾಜಶೇಖರ ಅಣ್ಣನವರ ಜನ್ಮದಿನ ಆಚರಣೆಗೆ ಹರ್ಷ ತಂದಿದೆ ಎಂದರು.
ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ರಮೇಶ ಶಿವಪುರ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಂತರದ ಫೈನಲ್ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದ ಯು.ಎಸ್.ನಾಗರಾಜ ನಾಯಕತ್ವದ ದ ಕಿಂಗ್ಸ್ ತಂಡವು 20 ಸಾವಿರ ಬಹುಮಾನದೊಂದಿಗೆ ಆಕರ್ಷಕ ಕಪ್ ಪಡೆದುಕೊಂಡರು. ದ್ವಿತೀಯ ಸ್ಥಾನ ಪಡೆದ ಸಿದ್ದು ನೇತೃತ್ವದ ಬಿಆರ್ ತಂಡವು 10 ಸಾವಿರ ನಗದು ಬಹುಮಾನದೊಂದಿಗೆ ಕಪ್ ಸ್ವೀಕರಿಸಿದರು. ಪ್ರತಿಯೊಂದು ಹಂತದಲ್ಲಿ ತಂಡದ ಗೆಲುವಿಗೆ ರೂವಾರಿಯಾಗಿದ್ದ ಉಮೇಶ್ ಮ್ಯಾನ್ ಆಪ್ ದಿ ಮ್ಯಾಚ್ ತನ್ನದಾಗಿಸಿಕೊಂಡರು. ಇಲ್ಲಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಕಂಪ್ಲಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನಿರ್ದೇಶಕ ವಿ.ಬಿ.ನಾಗರಾಜ, ಕರವೇ ತಾಲೂಕು ಪ್ರಧಾನ ಕಾರ್ಯದರ್ಶಿ ಮನೋಜ್ ಗೌಡ, ಮುಖಂಡರಾದ ಮ್ಯಾದರ್ ಸೀನಪ್ಪ, ಮಹಾದೇವಪ್ಪ, ಕೆ.ರಾಜ, ವಾಸು, ಎಚ್.ನಿಂಗೇಶ, ಪ್ರಮೋದ್‌ಗೌಡ, ತಿಪ್ಪೇಸ್ವಾಮಿ, ರಮೇಶ, ಕಟ್ಟೆ ಮಂಜು, ಕಟ್ಟೆ ಅಮರೇಶ, ಹೆಚ್.ಶಿವುಕುಮಾರ ಟೈಲರ್, ಮುತ್ತಣ್ಣ, ಹೊನ್ನಳ್ಳಿ ಶ್ರೀದೇವಿ, ವಿಜಯಲಕ್ಷ್ಮಿ, ಮಮತಾ ಮುಕ್ಕುಂದಿ ಸೇರಿದಂತೆ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!