ದೇವಲಾಪುರ ಸೊಸೈಟಿಯ ನೂತನ ಅಧ್ಯಕ್ಷರಾಗಿ ಗೊರವರ ಹನುಮಂತಪ್ಪ ಹಾಗೂ ಉಪಾಧ್ಯಕ್ಷರಾಗಿ ವಿ.ಮುಕ್ಕಣ್ಣ ಅವಿರೋಧ ಆಯ್ಕೆ.
ಕಂಪ್ಲಿ: ಪ್ರತಿಯೊಬ್ಬರ ಸಹಕಾರದಿಂದ ಸಹಕಾರ ಸಂಘದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ದೇವಲಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಗೊರವರ ಹನುಮಂತಪ್ಪ ಹೇಳಿದರು.
ಅವರು ಗುರುವಾರ ತಾಲೂಕಿನ ದೇವಲಾಪುರ ಗ್ರಾಮದ ಸಹಕಾರ ಸಂಘದ ಕಛೇರಿಯಲ್ಲಿ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡ ನಂತರ ಮಾತನಾಡಿ, ಸರ್ಕಾರವು ರೈತರಿಗೆ ಸಾಕಷ್ಟು ಸೌಲಭ್ಯಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳನ್ನು ರೈತರಿಗೆ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಇಲ್ಲಿನ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಗೊರವರ ಹನುಮಂತಪ್ಪ ಹಾಗೂ ಉಪಾಧ್ಯಕ್ಷರಾಗಿ ವಿ.ಮುಕ್ಕಣ್ಣ ಇವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ರಮೇಶ ಘೋಷಿಸಿದರು. ಈ ಚುನಾವಣಾ ಪ್ರಕ್ರಿಯೆಯಲ್ಲಿ ಎಸ್.ಹನುಮಂತಪ್ಪ, ಗೌಡ್ರು ಷಣ್ಮುಕಪ್ಪ, ಗೌಡ್ರು ಮಲ್ಲಿಕಾರ್ಜುನ, ಕಾರಿಗನೂರು ಹನುಮಂತಪ್ಪ, ಗೌಡ್ರು ಕೆ.ಸಿದ್ದಪ್ಪ, ಕೆ.ಮಹಾದೇವಪ್ಪ, ಪೂಜಾರಿ ರಮೇಶ, ಗೌಡ್ರು ಮಲ್ಲಮ್ಮ, ಗುಬಾಜಿ ಶಿಲ್ಪಮ್ಮ, ಕುರಿ ವಿಶ್ವನಾಥ ಹಾಗೂ ಪ್ರಭಾರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೌಡ್ರು ಲಿಂಗನಗೌಡ ಇದ್ದರು.
ನಂತರ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಮಾಲಾರ್ಪಣೆ ಮೂಲಕ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಪಿ.ಮೂಕಯ್ಯಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ವಿಎಸ್ಕೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ವಕೀಲ ಕೆ.ಶಿವುಕುಮಾರ, ಮುಖಂಡರಾದ ಜಿ.ಮರೇಗೌಡ, ಗೌಡ್ರು ಅಂಜಿನಪ್ಪ, ಪೂಜಾರಿ ರಮೇಶ, ಉಮೇಶಗೌಡ, ಗುಬಾಜಿ ರಾಮಾಂಜಿನಿ, ಜಿ.ಮರೇಗೌಡ, ಸುರೇಶಗೌಡ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















