ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬುದ್ಧಿಮಾಂದ್ಯ ಮಕ್ಕಳು ಎಲ್ಲರಂತೆ ನೆಮ್ಮದಿ ಜೀವನ ನಡೆಸಬೇಕು : ಬಳೆ ಮಲ್ಲಿಕಾರ್ಜುನ

ಕಂಪ್ಲಿ: ಬುದ್ಧಿಮಾಂದ್ಯ ಮಕ್ಕಳನ್ನು ಒಂದು ಸೂರಿನಡಿ ಸೇರಿಸಿ ಅವರಿಗೆ ವಿದ್ಯಾಭ್ಯಾಸ, ಚಿಕಿತ್ಸೆ ನೀಡುತ್ತಾ, ವಾತ್ಸಲ್ಯದಿಂದ ನೋಡಿಕೊಳ್ಳುತ್ತಿರುವ ಕಂಪ್ಲಿಯ ಕಂಪಲಿರಾಯ ಬುದ್ದಿಮಾಂದ್ಯ ಶಾಲೆ ತಾಲೂಕಿನ ಬುದ್ಧಿಮಾಂದ್ಯ ಮಕ್ಕಳ ಪಾಲಿಗೆ ಆಶಾಕಿರಣವಾಗಿದೆ ಎಂದು ಕ.ರ.ವೇ ತಾಲೂಕು ಅಧ್ಯಕ್ಷ ಬಳೆ ಮಲ್ಲಿಕಾರ್ಜುನ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಕೊಟ್ಟಾಲ್ ರಸ್ತೆಯ ತಹಶೀಲ್ದಾರ್ ಕಛೇರಿ ಎದುರುಗಡೆಯಲ್ಲಿರುವ ಕಂಪಲಿರಾಯ ಬುದ್ದಿಮಾಂದ್ಯ ಶಾಲೆಯಲ್ಲಿ ಕರವೇ (ಟಿ.ನಾರಾಯಣಗೌಡ ಬಣ)ಯ ಕಂಪ್ಲಿ ತಾಲೂಕು ಘಟಕದಿಂದ ಗುರುವಾರ ಹಮ್ಮಿಕೊಂಡಿದ್ದ ರಾಜ್ಯ ಉಪಾಧ್ಯಕ್ಷ ಚಾನಾಳ ರಾಜಶೇಖರ್ ಜನ್ಮದಿನದ ಅಂಗವಾಗಿ ಇಲ್ಲಿನ ಬುದ್ದಿಮಾಂದ್ಯ ಮಕ್ಕಳಿಗೆ ಉಚಿತವಾಗಿ ಸಿಹಿ ಹಾಗೂ ಊಟ ವಿತರಿಸಿದ ನಂತರ ಮಾತನಾಡಿ, ಬುದ್ಧಿಮಾಂದ್ಯ ಮತ್ತು ಅನಾಥ ಮಕ್ಕಳು ಎಲ್ಲರಂತೆ ನೆಮ್ಮದಿ ಜೀವನ ನಡೆಸುವಂತಾಗಬೇಕು. ಸಮಾಜದ ಪ್ರತಿಯೊಬ್ಬರೂ ಅವರ ಆರೋಗ್ಯ ಮತ್ತು ಶಿಕ್ಷಣ ಪ್ರಗತಿಗೆ ನೆರವು ನೀಡಬೇಕು. ಜೀವನದಲ್ಲಿ ಯಾವ ತಪ್ಪನ್ನು ಮಾಡದ ಈ ಮಕ್ಕಳು ದೈಹಿಕ ಮತ್ತು ಮಾನಸಿಕ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇವರ ಯೋಗ ಕ್ಷೇಮವನ್ನು ಸಮಾಜದ ಬುದ್ಧಿವಂತರು, ಯುವಕರು, ವಿಚಾರವಂತರು ವಿಚಾರಿಸಿ ತಮ್ಮಿಂದಾಗಿ ಸಹಕಾರ ನೀಡಿದರೆ ಈ ಮಕ್ಕಳ ಜೀವನಕ್ಕೆ ಅನುಕೂಲವಾಗುತ್ತದೆ. ವಿಶೇಷವಾಗಿ ಯುವಕರು ಸ್ವಪ್ರೇರಣೆಯಿಂದ ಮಕ್ಕಳ ಆರೋಗ್ಯ ರಕ್ಷಣೆಯ ಬಗ್ಗೆ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ತಾಲೂಕ ಪ್ರಧಾನ ಕಾರ್ಯದರ್ಶಿ ಮನೋಜ್ ಗೌಡ, ಗೌರವಾಧ್ಯಕ್ಷ ಮೇದರ ಶ್ರೀನಿವಾಸ, ಮಹಿಳಾ ಘಟಕದ ತಾಲೂಕಾಧ್ಯಕ್ಷೆ ಮುಕ್ಕುಂದಿ ಮಮತಾ, ಹೊನ್ನಳ್ಳಿ ಶ್ರೀದೇವಿ, ವಿಜಯಲಕ್ಷ್ಮಿ, ತುಳಸಿ, ಉಮಾ, ಶ್ವೇತ, ಲಿಂಗೇಶ, ಗೌಳಿ ಮಂಜುನಾಥ, ಬಡಿಗೇರ್ ಜಿಲಾನಸಾಬ್, ರಮೇಶ್, ಕಟ್ಟೆ ಮಂಜುನಾಥ, ಎನ್.ವಾಸು, ಕಟ್ಟೆ ಅಮರೇಶ, ತಿಪ್ಪೇಸ್ವಾಮಿ, ನಬಿಸಾಬ್, ರಾಘು, ರಾಜ ಹೊಸಗೆರೆ ಸೇರಿದಂತೆ ಬುದ್ದಿಮಾಂದ್ಯ ಶಾಲೆಯ ಶಿಕ್ಷಕರು, ಮಕ್ಕಳು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!