ಕಮಿಷನ್ ವಸೂಲಿಗೆ ನಿಂತ ನಿರ್ದೇಶಕ ಸಿದ್ದಲಿಂಗಪ್ಪ – ಪಂಚಾಕ್ಷರಿ ಆರೋಪ
ತುಮಕೂರು – ಸಹಕಾರ ಸಂಘಗಳು ರೈತರ ಜೀವನಾಡಿ ಶ್ರೀಮಂತರ ಕಪಿಮುಷ್ಟಿಗೆ ಬಡ ರೈತರು ಸಿಲುಕಬಾರದು ಎಂಬ ಕಾರಣಕ್ಕಾಗಿ ತಮ್ಮ ತಮ್ಮಲ್ಲಿ ಸಹಾಯ ಸಹಕಾರದಿಂದ ರೈತರು ಅಭಿವೃದ್ಧಿ ಹೊಂದಬೇಕು ಎಂಬ ಕಾರಣಕ್ಕಾಗಿ ಸಹಕಾರ ಸಂಘಗಳು ಪ್ರಾರಂಭವಾದವು.
ಇಂತಹ ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಮೂಲಕ ಸರ್ಕಾರದ ಯೋಜನೆಗಳು ಜಾರಿಯಾದರೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸವಲತ್ತು ಸಿಗಲು ಸಾಧ್ಯವೆಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಲವು ಯೋಜನೆಗಳನ್ನು ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಮೂಲಕ ಜಾರಿಗೆ ತರುತ್ತೇವೆ.
ಆದರೆ ತುಮಕೂರು ಡಿಸಿಸಿ ಬ್ಯಾಂಕಿನಲ್ಲಿ ರೈತರ ಸುಲಿಗೆ ನಡೆಯುತ್ತಿದೆ. ರೈತರ ಬೆವರಹನಿಗೆ ಕನ್ನ ಹಾಕುತ್ತಿದ್ದಾರೆ. ತುರುವೇಕೆರೆ ನಿರ್ದೇಶಕ ಸಿದ್ದಲಿಂಗಪ್ಪ ಕೃಷಿ ಸಹಕಾರ ಸಂಘಗಳ ಮೂಲಕ ರೈತರಿಗೆ ನೀಡುವ ಬಡ್ಡಿ ರಹಿತ ಕೆಸಿಸಿ ಸಾಲಕ್ಕಾಗಿ ಪ್ರತಿ ರೈತರಿಂದ 250 ರೂ. ಗಳ ಕಮಿಷನ್ ಪಡೆಯುತ್ತಿದ್ದಾರೆ ಎಂದು ತೊರಮಾವಿನಹಳ್ಳಿ ಸಹಕಾರ ಸಂಘದ ನಿರ್ದೇಶಕ ಪಂಚಾಕ್ಷರಿ ಗಂಭೀರ ಆರೋಪ ಮಾಡಿದ್ದಾರೆ.
ರೈತರು ಬೆಳೆ ಬೆಳೆಯಲು ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಮೂಲಕ ರೈತರಿಗೆ ಬಡ್ಡಿ ರಹಿತ ಕೆಸಿಸಿ ಸಾಲ ನೀಡುತ್ತಿದ್ದು, ರೈತರ ಪರವಾಗಿ ಈ ಸಾಲದ ಬಡ್ಡಿಯನ್ನು ಸರ್ಕಾರ ತುಂಬಿ ಕೊಡುತ್ತಿದೆ. ಆದರೆ ತುರುವೇಕೆರೆ ತಾಲೂಕಿನಲ್ಲಿ ಪ್ರತಿ ವರ್ಷ ಬೆಳೆ ಸಾಲದ ರಿನಿವಲ್ ಮಾಡಲೆಂದು ಪ್ರತಿ ರೈತರಿಂದ 250 ರೂಗಳ ಕಮಿಷನ್ ಪಡೆಯುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತುರುವೇಕೆರೆ ತಾಲೂಕು ಒಂದರಲ್ಲಿ ಸುಮಾರು 25 ಸಾವಿರ ರೈತರಿಗೆ ಕೆಸಿಸಿ ಬೆಳೆ ಸಾಲ ನೀಡಿದ್ದು ಪ್ರತಿ ರೈತರಿಂದ 250 ರೂ. ಗಳಂತೆ ಸಿದ್ಧಲಿಂಗಪ್ಪನವರು ತಮ್ಮ 5 ವರ್ಷದ ಅಧಿಕಾರ ಅವಧಿಯಲ್ಲಿ ಕೋಟಿಗಟ್ಟಲೆ ಕಮಿಷನ್ ಪಡೆದು ಭ್ರಷ್ಟಾಚಾರ ನಡೆಸಿದ್ದಾರೆ. ಇದರಲ್ಲಿ ಬ್ಯಾಂಕಿನ ಸೂಪರ್ ವೈಸರ್ ಹರ್ಷ ನೇರ ಪಾಲುದಾರರಾಗಿದ್ದು ಬ್ಯಾಂಕಿನ ಅಧ್ಯಕ್ಷರಾದ ಕೆಎನ್ ರಾಜಣ್ಣನವರು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪಂಚಾಕ್ಷರಿ ಆಗ್ರಹಿಸಿದ್ದಾರೆ. ಈ ರೀತಿ ತಾನು ಕೂಡ ತೊರೆಮಾವಿನಹಳ್ಳಿ ಸಹಕಾರ ಸಂಘದ ಪರವಾಗಿ 80,000 ರೂಗಳ ಲಂಚ ನೀಡಿರುವುದಾಗಿ ತಿಳಿಸಿದ್ದಾರೆ.
ಇಷ್ಟೇ ಅಲ್ಲದೆ ಮರಣ ಹೊಂದಿರುವ ರೈತರ ಹೆಸರಲ್ಲಿ ಕೆಸಿಸಿ ಸಾಲ ನೀಡಿ ಆ ಹಣವನ್ನು ಅಧಿಕಾರಿಗಳು ಹಾಗೂ ನಿರ್ದೇಶಕರು ಲಪಟಾಯಿಸಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದು, ಇದಕ್ಕಾಗಿ ಸುದ್ದಿಗೋಷ್ಠಿಯಲ್ಲಿ ದಾಖಲಾತಿಗಳನ್ನು ಬಿಡುಗಡೆ ಮಾಡಿದರು. ತೊರೆಮಾವಿನಹಳ್ಳಿ ಪ್ರಾಥಮಿಕ ಕೃಷಿ ಸಹಕಾರ ಸಂಘದಲ್ಲಿ ಎನ್ ಮಾವಿನಹಳ್ಳಿಯ ಚಿತ್ತಮ್ಮ ಎಂಬುವರು 16 ಜೂನ್ 2024ರಲ್ಲಿ ಮರಣ ಹೊಂದಿದ್ದು , ಇವರ ಹೆಸರಲ್ಲಿ 17 ಜೂನ್ 2025ರಲ್ಲಿ ಸಾಲ ನೀಡಿದ್ದಾರೆ ಹೀಗೆ ಹಲವಾರು ರೈತರ ಹೆಸರಲ್ಲಿ ಸುಳ್ಳು ಲೆಕ್ಕ ಬರದಿದ್ದು ಈ ಕೆಲಸದಲ್ಲಿ ಡಿಸಿಸಿ ಬ್ಯಾಂಕ್ ಸೂಪರ್ ವೈಸರ್ ರವರ ಪಾತ್ರವಿದೆ ಎಂದು ದಾಖಲೆ ಸಮೇತ ಪ್ರದರ್ಶಿಸಿ ಆರೋಪ ಮಾಡಿದ್ದಾರೆ.
ಈ ಸುದ್ದಿಗೋಷ್ಠಿಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ರೇಣುಕಪ್ಪ ತಂಡಗ ಪ್ರಾಥಮಿಕ ಕೃಷಿ ಸಹಕಾರ ಸಂಘದ ನಿರ್ದೇಶಕ ಕೊಳಲ ರಘು ಸೇರಿದಂತೆ ಹಲವರು ಹಾಜರಿದ್ದರು.
ವರದಿ ✍️ : ಮನು ಸಿಡ್ಲೆಹಳ್ಳಿ




















