ಬಾಗಲಕೋಟೆ/ ಹುನಗುಂದ: ನಗರದ ಹೊನ್ನಕುಸುಮ ಸಾಹಿತ್ಯ ವೇದಿಕೆಯ ವತಿಯಿಂದ ಹೊಸ ವರ್ಷದ ಪ್ರಯುಕ್ತ ಕಾವ್ಯೋತ್ಸವವನ್ನು ವಿಜಯ ಮಹಾಂತೇಶ ಪದವಿಪೂರ್ವ ಕಾಲೇಜಿನಲ್ಲಿ ದಿನಾಂಕ: ೨೫.೦೧.೨೦೨೬ರ ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಎಲ್ಲಾ ತಲೆಮಾರುಗಳ ಹನ್ನೊಂದು ಜನ ಕವಿಗಳಿಂದ ಸ್ವರಚಿತ ಕವನವಾಚನ ಹಾಗೂ ಕನ್ನಡ ಕಾವ್ಯಲೋಕವನ್ನು ಪ್ರತಿನಿಧಿಸುವ ಆಯ್ದ ಹನ್ನೊಂದು ಮಾದರಿ ಕವಿತೆಗಳ ವಾಚನ ನಡೆಯಲಿದೆ. ಗಂಗಾವತಿಯ ಸಾಹಿತಿ ಹಾಗೂ ಕನ್ನಡ ಪ್ರಾಧ್ಯಾಪಕರಾದ ಡಾ. ಮಮ್ತಾಜಬೇಗಂ ಹಾಗೂ ಇಳಕಲ್ಲಿನ ಸಾಹಿತಿ ಡಾ. ಶ್ರೀದೇವಿ ಕರ್ಜಗಿಯವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಉಳಿದಂತೆ ಹೊನ್ನಕುಸುಮ ಸಾಹಿತ್ಯ ವೇದಿಕೆಯ ಎಲ್ಲಾ ಪದಾಧಿಕಾರಿಗಳು, ಹುನಗುಂದ-ಇಳಕಲ್ ತಾಲೂಕಿನ ಹಿರಿಯ-ಕಿರಿಯ ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆಂದು ಹೊನ್ನಕುಸುಮ ಸಾಹಿತ್ಯ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ ಮೊದಲ ಬಾರಿಗೆ ಪುಸ್ತಕಸಂತೆಯಲ್ಲಿ ಎಲ್ಲಾ ಪುಸ್ತಕಗಳ ಮೇಲೆ ೫೦% ರಿಯಾಯಿತಿಯನ್ನು ಘೋಷಿಸಲಾಗಿದ್ದು ಕಾವ್ಯಾಸಕ್ತರು ಹಾಗೂ ಪುಸ್ತಕಪ್ರಿಯರು ಇದರ ಸದುಪಯೋಗ ಪಡೆದುಕೊಳ್ಳಲು ವೇದಿಕೆಯ ಪರವಾಗಿ ಕೋರಲಾಗಿದೆ.
- ಕರುನಾಡ ಕಂದ ಪತ್ರಿಕೆ




















