ಕಂಪ್ಲಿ: ಸಮಾಜ ಸೇವೆಯೊಂದಿಗೆ ಜನರ ಮೆಚ್ಚುಗೆಗೆ ಪಾತ್ರರಾಗಿರುವ ಯುವ ನಾಯಕ ವಿ.ವಿವೇಕ್ಗೌಡ ಅವರ ಜನ್ಮದಿನದ ಅಂಗವಾಗಿ ಅವರ ಸಮ್ಮುಖದಲ್ಲಿ ಅಭಿಮಾನಿ ಬಳಗದಿಂದ ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ಶನಿವಾರ ವಿತರಿಸಿದರು.
ನಂತರ ಯುವ ನಾಯಕ ವಾಸು ನಾಯಕ ಮಾತನಾಡಿ, ಚಿಕ್ಕ ವಯಸ್ಸಿನಿಂದಲೇ ಸಮಾಜ ಸೇವೆಯೊಂದಿಗೆ ಜನರ ಪ್ರೀತಿ, ವಿಶ್ವಾಸ ಗಳಿಸುವ ಜೊತೆಗೆ ಸಾಕಷ್ಟು ಮಹಿಳೆಯರಿಗೆ ಚಾರಿಟೇಬಲ್ ಟ್ರಸ್ಟ್ ಮೂಲಕ ತರಬೇತಿ ನೀಡುವುದರೊಂದಿಗೆ ಸ್ವಯಂ ಉದ್ಯೋಗಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಇಂತಹ ಇನ್ನಷ್ಟು ಸೇವೆಗಳ ಮೂಲಕ ದೊಡ್ಡ ಮಟ್ಟದಲ್ಲಿ ಬೆಳೆಯಲಿ. ಹಾಗೂ ಇವರಿಗೆ ಸದಾ ಆರೋಗ್ಯ, ಆಯಸ್ಸು, ಸಮೃದ್ಧಿ, ಸಂಪತ್ತು ದೊರಕಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಡಾ.ಹಾರಿಕಾ, ಯುವ ಮುಖಂಡರಾದ ಮುದ್ದಾಪುರ ಯಲ್ಲಪ್ಪ, ಮಂಜುನಾಥ್, ಜಡೇಶ, ಸುಂದರ, ಪ್ರವೀಣ, ದುರುಗೇಶ, ರಾಘವೇಂದ್ರ, ಮಂಜು, ತರುಣ್, ವಂಶಿ, ಉಮೇಶ್, ಹರ್ಷ, ಆಕಾಶ, ಮರಿಸ್ವಾಮಿ, ರಾಜ, ರಮೇಶ, ರಘು, ತಿಪ್ಪೇಸ್ವಾಮಿ, ರವಿ, ತಿಮಪ್ಪ, ನಾಗ ಸೇರಿದಂತೆ ಇತರರು ಇದ್ದರು.
ಸೀರೆ ವಿತರಣೆ : ಜನ್ಮದಿನದ ಪ್ರಯುಕ್ತ ಯುವ ಮುಖಂಡ ವಿ.ವಿವೇಕ್ ಗೌಡ ಇವರು ಇಲ್ಲಿನ 4ನೇ ವಾರ್ಡಿನಲ್ಲಿರುವ ಕೆಂಚಮ್ಮ ಗುಡಿ ಬಳಿಯಲ್ಲಿ 30-40 ಜನ ದೇವದಾಸಿ ಮಹಿಳೆಯರಿಗೆ ಉಚಿತವಾಗಿ ಸೀರೆಗಳನ್ನು ವಿತರಿಸಿದರು.
ಪವಿತ್ರಾ ಚಾರಿಟೇಬಲ್ : ಪಟ್ಟಣದ ಎಂ.ಡಿ.ಕ್ಯಾಂಪಿನ ಶಿರಡಿ ಸಾಯಿಬಾಬ ದೇವಸ್ಥಾನ ಬಳಿ ಇರುವ ಪವಿತ್ರ ಚಾರಿಟೇಬಲ್ ಟ್ರಸ್ಟ್ ಕೋಳೂರು ವತಿಯಿಂದ ಯುವ ನಾಯಕ ವಿ.ವಿವೇಕ್ ಗೌಡ ಅವರ ಜನ್ಮದಿನದ ಅಂಗವಾಗಿ ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ಜನ್ಮದಿನವನ್ನು ಶನಿಚಾರ ಆಚರಿಸಿದರು. ಜನ್ಮದಿನದ ನಿಮಿತ್ಯ ಮಹಿಳೆಯರಿಗೆ ಹತ್ತು ದಿನಗಳ ಕಾಲ ಉಚಿತವಾಗಿ ತರಬೇತಿ ನೀಡಿದರು. ಮತ್ತು ಉಚಿತವಾಗಿ ಸೀರೆ ಕುಚ್ ಅನ್ನು ನೀಡಿದರು.
ಈ ಸಂದರ್ಭದಲ್ಲಿ ಟ್ರಸ್ಡ್ ಅಧ್ಯಕ್ಷೆ ವಿ.ಪವಿತ್ರಗೌಡ, ಉಪಾಧ್ಯಕ್ಷ ವಿ.ಶಿವನಗೌಡ ಸೇರಿದಂತೆ ಮಹಿಳಾ ಮಣಿಗಳು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















