ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬ್ರೈಟ್ ವೇ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳಿಂದ ರಾಷ್ಟ್ರ ಧ್ವಜಾರೋಹಣ : 200 ಆಡಿಗಳ ತ್ರಿವರ್ಣ ಧ್ವಜದ ಮೆರವಣಿಗೆ

ಕಂಪ್ಲಿ: ಪಟ್ಟಣದ ನಿವೇದಿತ ಶಿಕ್ಷಣ ಸಂಸ್ಥೆಯ ಬ್ರೈಟ್‌ವೇ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಶಾಲೆಯ ಹಳೇ ವಿದ್ಯಾರ್ಥಿಗಳಿಂದ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರಲ್ಲದೆ, ವೈದ್ಯಕೀಯ ಸೀಟುಗಳನ್ನು ಪಡೆದ ವಿದ್ಯಾರ್ಥಿಗಳಿಗೆ, ಪಾಲಕರಿಗೆ ಸನ್ಮಾನಿಸಿ, ಪಟ್ಟಣದ ಪ್ರಮುಖ ಬೀದಿಯಲ್ಲಿ 200 ಅಡಿಗಳ ಬೃಹತ್ ತ್ರಿವರ್ಣ ಧ್ವಜವನ್ನು ಮೆರವಣಿಗೆ ಮಾಡಿದರು.
ಪಟ್ಟಣದ ಬ್ರೈಟ್‌ವೇ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿದರು. ತಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಎಂಬಿಬಿಎಸ್ ಸೇರಿದಂತೆ ವಿವಿಧ ವೈದ್ಯಕೀಯ ಸೀಟುಗಳನ್ನು ಹಲವಾರು ವಿದ್ಯಾರ್ಥಿಗಳಿಂದ ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸುವ ಮೂಲಕ ವಿದ್ಯಾರ್ಥಿಗಳಿಗೆ ಗೌರವವನ್ನು ಸಲ್ಲಿಸಿದ್ದು ವಿಶೇಷವಾಗಿತ್ತು.
ಪಟ್ಟಣದ ಪ್ರಮುಖ ಬೀದಿಯಲ್ಲಿ ಸುಮಾರು 200 ಅಡಿಗಳಷ್ಟು ಬೃಹತ್ ತ್ರಿವರ್ಣ ಧ್ವಜವನ್ನು ವಿದ್ಯಾರ್ಥಿಗಳು ತಮ್ಮ ಭುಜದ ಮೇಲೆ ಹೊತ್ತು ಪಟ್ಟಣದ ಶ್ರೀ ಉದ್ಬವ ಮಹಾಗಣಪತಿ ದೇವಸ್ಥಾನದಿಂದ ಕುರುಗೋಡು ರಸ್ತೆಯಲ್ಲಿರುವ ಬ್ರೈಟ್ ವೇ ಶಾಲೆಯವರೆಗೂ ಜಾನಪದ ಕಲಾತಂಡಗಳೊಂದಿಗೆ ಅದ್ದೂರಿ ಮೆರವಣಿಗೆ ನಡೆಸಿದರು.
ನಂತರ ನಡೆದ ಸಮಾರಂಭದಲ್ಲಿ ತಮ್ಮ ಶಾಲೆಯಲ್ಲಿ ಹತ್ತನೇ ತರಗತಿರೆಗೆ ವಿದ್ಯಾಭ್ಯಾಸ ಮಾಡಿ ಎಂಬಿಬಿಎಸ್ ಸೇರಿದಂತೆ ವಿವಿಧ ವೈದ್ಯಕೀಯ ಸೀಟುಗಳನ್ನು ಪಡೆದ ಹಲವಾರು ವಿದ್ಯಾರ್ಥಿಗಳನ್ನು ಮತ್ತು ಆವರ ಪಾಲಕರನ್ನು ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಯು.ವಿನುತಾ ಶಿವರಾಜ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಯು.ಶಿವರಾಜ, ಮುಖ್ಯ ಗುರುಗಳಾದ ಕೆ.ಚಂದ್ರಶೇಖರ್, ಸಹ ಶಿಕ್ಷಕರಾದ ಮಹಮದ್ ಷರೀಫ್ ಕಲಂದರ್, ಭವ್ಯ, ಭಾಗ್ಯ, ರಜನಿ, ಪ್ರಿಯಾಂಕ್, ಭುವನೇಶ್ವರಿ, ಶ್ರೀಲತಾ, ವಿದ್ಯಾರ್ಥಿಗಳ ಪಾಲಕರಾದ ಡಾ.ಮಂಜುನಾಥ್, ಅಶೋಕ ಹಂದ್ರಾಳ್, ವಿರೇಶ್, ನಾಗರಾಜ, ಎಸ್.ಎಸ್. ಅಜ್ಜಪ್ಪ, ವಿಶ್ವನಾಥ್, ಶ್ರೀಧರ ಶೆಟ್ಟಿ, ಅನುಪಮಾ, ಸ್ಮಿತಾ, ವೈದ್ಯಕೀಯ ವಿದ್ಯಾರ್ಥಿಗಳಾದ ತನು, ಶ್ರಾವಣಿ, ಸಂಜನಾ, ಮನೋಜ, ಪ್ರೀತಮ್, ಸಾನಿಕ, ಜ್ಯೋತಿ, ಉಗಾದಿ ವೈಶಾಕ್, ಗುಂಡಿಧೀರಜ್ ಸೇರಿದಂತೆ ಇತರರು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!