
ತುಮಕೂರು/ ಕೊರಟಗೆರೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ತಾಲ್ಲೂಕು ಆಡಳಿತ ಹಾಗೂ ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ “77ನೇ ಗಣರಾಜ್ಯೋತ್ಸವ” ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮಂಜುನಾಥ್ ರವರು ಕಾರ್ಯಕ್ರಮದ ಅಧ್ಯಕತೆಯನ್ನು ವಹಿಸಿಕೊಂಡು ಪೋಲಿಸ್ , ಹೋಮ್ ಗಾರ್ಡ್, ಎನ್.ಸಿ.ಸಿ,ಭಾರತ್ ಸ್ಕೌಟ್ಸ್ ಅಂಡ್ ಗೈಡ್,ಹಾಗೂ ವಿವಿಧ ಶಾಲೆಗಳ ವಿಧ್ಯಾರ್ಥಿಗಳ ಪಥಸಂಚಲನ ದ ಗೌರವವನ್ನು ಸ್ವೀಕರಿಸಿ
ಭಾರತ ಸಂವಿಧಾನ ಕುರಿತು ಮಾತನಾಡಿ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ನೃತ್ಯ ಪ್ರದರ್ಶನವನ್ನು ವೀಕ್ಷಿಸಿದರು.
ಭಾರತದ ಸಂವಿಧಾನ ಜಾರಿಗೆ ಬಂದು ಇಂದಿಗೆ 77 ವರ್ಷಗಳು, ಭಾರತ ದೇಶದ ಎಲ್ಲಾ ನಾಗರೀಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ಚಿಂತನೆ, ಅಭಿವ್ಯಕ್ತಿ, ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ್ಯ ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆಯನ್ನು ಖಾತರಿಪಡಿಸಿ, ಎಲ್ಲರಲ್ಲೂ ಭ್ರಾತೃತ್ವವನ್ನು ಮೂಡಿಸುವುದು ಸಂವಿಧಾನದ ಮೂಲ ಆಶಯವಾಗಿದೆ. ವಿಶ್ವಕ್ಕೆ ಮಾದರಿ ಸ್ವರೂಪದ ಸಂವಿಧಾನವನ್ನು ನಮಗೆ ನೀಡಿದ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಈ ಸಂದರ್ಭದಲ್ಲಿ ನೆನೆದು, ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಹಾಗೂ ದೇಶದ ರೈತರು, ಪೌರ ಕಾರ್ಮಿಕರು, ವಿಜ್ಞಾನಿಗಳು, ಶಿಕ್ಷಕರು, ಮಕ್ಕಳು ದೇಶದ ಮೂಲ ಎಂದು. ಗಣರಾಜ್ಯ ಭಾರತವು ಹೊಂದಾಣಿಕೆಯಿಂದ ಉನ್ನತ ಅತ್ಯಾಧುನಿಕ ಜ್ಞಾನಗಳನ್ನು ಹಿಡಿದುಕೊಂಡು ಸದೃಢ ದೇಶವನ್ನು ಕಟ್ಟೋಣ ಎಂದು ಅಂಬೇಡ್ಕರ್,ನೆಹರೂ, ಗಾಂಧಿ ಸುಭಾಷ್ ಚಂದ್ರ ಬೋಸ್, ಮಾರ್ಗ ಆದರ್ಶಗಳನ್ನು ಪಾಲಿಸುತ್ತಾ ದೇಶವನ್ನು ಸಂರಕ್ಷಿಸೋಣ ಎಂದು ಸಂದೇಶವನ್ನು ಹೇಳಿದರು. ತಾಲೂಕಿನಲ್ಲಿ ಎಸ್ ಎಸ್ ಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ನಗದು ಮತ್ತು ಪ್ರಶಸ್ತಿ ನೀಡಿದರು. ಹಿರಿಯ ಸ್ವಾತಂತ್ರ ಹೋರಾಟಗಾರರು ಮತ್ತು ನಾಟಿ ವೈದ್ಯರಿಗೆ ಸನ್ಮಾನ ಪ್ರಶಸ್ತಿ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಅಧಿಕಾರಿಗಳಾದ ತಹಸೀಲ್ದಾರ್ ಮಂಜುನಾಥ್.ಕೆ , ಉಪ ತಹಸೀಲ್ದಾರ್, ಇ.ಓ ಅಪೂರ್ವ ಸಿ ಮೇಡಮ್, ಅನಿಲ್ ಆರ್ ಪಿ, ಸಿ.ಓ. ಉಮೇಶ್ ಕೆ. ಎಸ್, ಶ್ರೀ ಮತಿ ಫೈರೋಜ್ ಬೇಗo , ಚಿಕ್ಕರಂಗಯ್ಯ, ನಯಾಜ್ ಅಹಮದ್, ರುದ್ರೇಶ್, ಈರಣ್ಣ, ರಂಗರಾಜು ಓಬಲರಾಜು, ನಾಗರಾಜು, ಬಸವರಾಜು,ರಘು ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಮುಖಂಡರುಗಳು,ಪತ್ರಕರ್ತರು ವಿದ್ಯಾರ್ಥಿಗಳು, ಸಾರ್ವಜನಿಕರು 77ನೇ ಗಣರಾಜ್ಯೋತ್ಸವದಲ್ಲಿ ಉಪಸ್ಥಿತರಿದ್ದರು.
ವರದಿ: ಪ್ರಸನ್ನಕುಮಾರ್. ಎಸ್ ಕೊರಟಗೆರೆ




















