ಚಾಮರಾಜನಗರ ಜಿಲ್ಲೆಯ ಯಳಂದೂರು
ತಾಲೂಕಿನ ಯರಿಯೂರು ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಶಾಸಕ ಎ.ಆರ್. ಕೃಷ್ಣಮೂರ್ತಿ ಭೂಮಿಪೂಜೆ ನೆರವೇರಿಸಿ ಬಳಿಕ ಮಾತನಾಡಿ, ಗ್ರಾಮ ಪಂಚಾಯಿತಿ ಕಟ್ಟಡವನ್ನು ರಾಷ್ಟ್ರೀಯ ಹೆದ್ದಾರಿ ಭೂ-ಸ್ವಾಧೀನ ಪರಿಹಾರ, ರಾಜೀವ್ ಗಾಂಧಿ ಪಂಚಾಯಿತಿ ಅಭಿಯಾನ ಮತ್ತು ಇತರ ಅನುದಾನದಲ್ಲಿ ನೂತನ ಕಟ್ಟಡದ ಶಂಕು ಸ್ಥಾಪನೆ ಮಾಡಲಾಗುತ್ತಿದ್ದು, ಅಂದಾಜು 50 ಲಕ್ಷ ರೂಪಾಯಿಗಳ ಮೊತ್ತದಲ್ಲಿ ಕಾಮಗಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಟ್ಟಡವನ್ನು ಬಹಳ ಅಚ್ಚುಕಟ್ಟಾಗಿ ಮಾಡಬೇಕು ಉತ್ತಮ ಗುಣಮಟ್ಟದಲ್ಲಿ ಕಟ್ಟಡ ನಿರ್ಮಿಸಬೇಕು ಎಂದು ಸಲಹೆ ನೀಡಿದರು.
ಸದಸ್ಯರಾದ ಮಹದೇವಯ್ಯ, ವೈ.ಎಂ. ಈ ವೇಳೆ ಯರಿಯೂರು ಗ್ರಾಪಂ ಅಧ್ಯಕ್ಷರಾದ ಲಾವಣ್ಯ, ಉಪಾಧ್ಯಕ್ಷ ಚಿನ್ನಸ್ವಾಮಿ, ಪ್ರವೀಣ್, ದೊಡ್ಡಮ್ಮ, ಲಕ್ಷ್ಮೀ, ಚಂದ್ರಮ್ಮ, ಮಹೇಶ್, ನಾರಾಯಣಸ್ವಾಮಿ, ಕಪ್ಪಣ್ಣ, ಪದ್ಮ, ರಮೇಶ್, ರಾಜೇಶ್, ಕೆಂಪಮ್ಮ, ರತ್ನಮ್ಮ, ಶಾಂತಿ, ಪಿಡಿಒ ಶಿವಕುಮಾರ್, ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್, ಜಿಲ್ಲಾ ಗ್ಯಾರಂಟಿ ಅಧ್ಯಕ್ಷ ಹೊಂಗನೂರು ಚಂದ್ರು, ಜಿ. ಪಂ ಮಾಜಿ ಉಪಾಧ್ಯಕ್ಷ ಯೋಗೇಶ್, ನಿರ್ಮಿತಿ ಕೇಂದ್ರ ಇಂಜಿನಿಯರ್ ನಂದೀಶ್, ಶಾಸಕರ ಆಪ್ತ ಕಾರ್ಯದರ್ಶಿ ಚೇತನ್ ಸೇರಿದಂತೆ ಇತರರು ಹಾಜರಿದ್ದರು.
ವರದಿ : ಉಸ್ಮಾನ್ ಖಾನ್.




















