ಗುರುಮಠಕಲ್ : ಕುಟುಂಬದ ಸದಸ್ಯರು ಮರಣಹೊಂದಿ ಬಹು ವರ್ಷಗಳು ಕಳೆದರೂ ಜಮೀನು ಖಾತೆಗಳನ್ನು ಪೌತರ ಹೆಸರಿಗೆ ವರ್ಗಾಯಿಸದ ನಿರ್ಲಕ್ಷ್ಯ ತಪ್ಪಿಸಿ, ತಕ್ಷಣ ಮನವಿ ಸಲ್ಲಿಸಿ ಖಾತೆ ಬದಲಾಯಿಸಿಕೊಳ್ಳಿ ಎಂದು ಗುರುಮಠಕಲ್ ತಾಲೂಕ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಮಂಗಳವಾರ ಸಾರ್ವಜನಿಕರಿಗೆ ಸೂಚಿಸಿದರು.
ತಾಲೂಕಿನ ಎಲ್ಲಾ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಮೂಲಕ ಈ ಸೌಲಭ್ಯ ಲಭ್ಯವಿದೆ. ಅಗತ್ಯ ದಾಖಲೆಗಳೆಂದರೆ ಮೃತರ ಮರಣ ಪ್ರಮಾಣಪತ್ರ, ವಂಶವೃಕ್ಷ ಅಥವಾ ಕುಟುಂಬ ವಿವರಗಳ ನೋಟರೈಸ್ಡ್ ಕಾಗದ, ಆಧಾರ್ ಕಾರ್ಡ್, ಇತ್ತೀಚಿನ RTC (ಪಹಣಿ) ಮತ್ತು ಹಕ್ಕುಪತ್ರ, ರೇಷನ್ ಕಾರ್ಡ್, ಮತದಾರರ ಐಡಿ ಕಾರ್ಡ್ ಮತ್ತು ಭಾವಚಿತ್ರಗಳು.ಡಿಜಿಟಲ್ ಸೌಲಭ್ಯಕ್ಕೆ ಕರೆ ನೀಡಿದರು.
ತಾಲೂಕ ಕೊಂಕಲ್ ನಾಡಕಚೇರಿಯಲ್ಲಿ ದಾಖಲೆಗಳ ಅಭಿಲೇಖನ ಮತ್ತು ಡಿಜಿಟಲೀಕರಣ ಕಾರ್ಯ ಚುರುಕಾಗಿ ನಡೆಯುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ತಹಶೀಲ್ದಾರ್ ತಿಳಿಸಿದರು.
ವರದಿ: ಜಗದೀಶ್ ಕುಮಾರ್ ಭೂಮಾ




















