ವಿಶ್ವಶಾಂತಿ ಯುವ ಸೇವಾ ಸಮಿತಿ (ರಿ.)ಬೆಂಗಳೂರು. ಇವರ ನೇತೃತ್ವದಲ್ಲಿ ಮತ್ತು ನಾಡಿನ ಸಕಲ ಜೈನ ಸಮಾಜದ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆಯಲಿರುವ. ” ಬೃಹತ್ ಸಮೋಸರಣದಲ್ಲಿ “
” ಶ್ರೀ ಜಿನ ಸಹಸ್ರಾಷ್ಟ ನಾಮಾರ್ಚನೆ ” ಕಾರ್ಯಕ್ರಮವು
ದಿನಾಂಕ : 31/01/2026ರಂದು ಶನಿವಾರ ಬೆಳಿಗ್ಗೆ 9 ಘಂಟೆಗೆ ಸರಿಯಾಗಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಆಶ್ರಮದ ವೇದ ವಿಜ್ಞಾನ ಮಹಾವಿದ್ಯಾಪೀಠ ಶಾಲೆಯ ಕ್ರೀಡಾಂಗಣ ಕನಕಪುರ ರಸ್ತೆ ಬೆಂಗಳೂರಿನಲ್ಲಿ ನಡೆಯಲಿದೆ.
ಏಕಕಾಲಕ್ಕೆ ರಾಜ್ಯದ ಸುಮಾರು 26ಕ್ಕೂ ಹೆಚ್ಚು ಕಡೆಗಳಲ್ಲಿ ಹಾಗೂ ವಿದೇಶದಲ್ಲೂ ಸಹ ಈ ಕಾರ್ಯಕ್ರಮ ನಡೆಯಲಿದೆ.
ನಮ್ಮ ಹಾವೇರಿ ಜಿಲ್ಲೆಯ ಶಿಗ್ಗಾವ್ ತಾಲೂಕಿನ ಅರಟಾಳ ಗ್ರಾಮದ ಭಗವಾನ್ ಶ್ರೀ 1008 ಶ್ರೀ ಪಾರ್ಶ್ವನಾಥ ಜಿನಮಂದಿರದ ಸಭಾಭವನದಲ್ಲಿ ಅಭಿಕ್ಷಣ ವಾತ್ಸಲ್ಯಮೂರ್ತಿ ಆಚಾರ್ಯ ಶ್ರೀ ಪರಮ ಪೂಜ್ಯ 108ಪುಣ್ಯಸಾಗರ ಮುನಿ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ವಿಶ್ವ ದಾಖಲೆಗೆ ಸೇರ್ಪಡೆಯಾಗುತ್ತಿರುವ ಶ್ರೀ ಜಿನ ಸಹಸ್ರಾಷ್ಟ ನಾಮಾರ್ಚನೆ ಕಾರ್ಯಕ್ರಮ ನೆರವೇರಲಿದೆ. ಈ ಪೂಜಾ ವಿಧಿಯಲ್ಲಿ ಹಾವೇರಿ ಜಿಲ್ಲೆಯ ಜೈನ ಸ್ರಾವಕ ಶ್ರಾವಕಿಯರು ಸುಮಾರು 500ಕ್ಕೂ ಹೆಚ್ಚು ಜನ ಪೂಜೆಗೆ ಕೂರಲಿದ್ದು ವೀಕ್ಷಿಸಲು ಸಾವಿರಾರು ಜನ ಬರಲಿದ್ದಾರೆ ಅರಟಾಳ ಕ್ಷೇತ್ರದ ಕಮಿಟಿಯ ಅಧ್ಯಕ್ಷರು ಸರ್ವ ಸದಸ್ಯರು ಹಾಗೂ ಶಿಗ್ಗಾವ್ ತಾಲೂಕಿನ ಜೈನ ಕಮಿಟಿಯ ಅಧ್ಯಕ್ಷರು ಸರ್ವ ಸದಸ್ಯರು ಹಾಗೂ ಸುತ್ತಮುತ್ತಲು ಗ್ರಾಮದ ಜೈನ ಕಮಿಟಿಯ ಅಧ್ಯಕ್ಷರು ಸರ್ವ ಸದಸ್ಯರುಗಳು ಎಲ್ಲರೂ ಈ ಭವ್ಯ ಕಾರ್ಯಕ್ರಮದ ಸಿದ್ಧತೆಗಾಗಿ ಹಗಲಿರುಳೆನ್ನದೆ ಶ್ರಮಿಸುತ್ತಿದ್ದಾರೆ. ಸುತ್ತಮುತ್ತಲ ಗ್ರಾಮದ ಸಮಸ್ತ ಜೈನ ಸ್ರಾವಕ ಸ್ರಾವಕಿಯರು ಈ ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತ ಕೋರಿದ್ದಾರೆ.
ವರದಿ ಬಸವರಾಜ ಎಸ್. ಎನ್.



















