
ಮುಂಡಗೋಡ : ಪ್ರೋ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ಮತ್ತು ಡಾ ll ಬಿ. ಆರ್. ಅಂಬೇಡ್ಕರ್ ಸಹಕಾರಿ ಸಂಘ ಮುಂಡಗೋಡ. (ಉ. ಕ.) ಇವರ ವತಿಯಿಂದ ಇಂದು ದಿನಾಂಕ :30-01-2026 ರಂದು ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಮುಂಡಗೋಡ ಗೋಮಾಂಗ್ ಬೌದ್ಧ ಮಂದಿರ ಟಿಬೇಟಿಯನ್ ಕ್ಯಾಂಪ್ ನಂ. 6 ರಲ್ಲಿ ಶಾಂತಿ ನೋಬೆಲ್ ಪ್ರಶಸ್ತಿ ಪುರಸ್ಕೃತರು ಬೌದ್ಧ ಧರ್ಮದ ಧರ್ಮಗುರುಗಳಾದ ಪರಮ ಪೂಜ್ಯ ದಲಾಯಿ ಲಾಮಾ ರವರನ್ನು ಪರಮ ಪೂಜ್ಯ ನಿಜಗುಣಾನಂದ ಸ್ವಾಮೀಜಿಗಳು ನಿಸ್ಕಲ್ ಮಂಟಪ ಮಠ ಬೈಲೂರು ಚನ್ನಮ್ಮನ ಕಿತ್ತೂರ್ ಬೆಳಗಾವಿ ಇವರ ಮುಂದಾಳತ್ವದಲ್ಲಿ ಮತ್ತು ಎಸ್. ಪಕ್ಕೀರಪ್ಪ ಇವರ ತಂಡ ದಲಾಯಿ ಲಾಮಾ ರವರ ಭೇಟಿಯಾಗಿ ದರ್ಶನ ಪಡೆದು ಸವಿ ನೆನಪಿನ ಸ್ಮರಿಣಿಕೆಯನ್ನು ಅರ್ಪಿಸಿ ಸನ್ಮಾನ ಮಾಡಿ ಗೌರವಿಸಲಾಯಿತು.

ವರದಿ ಬಸವರಾಜ ಎಸ್. ಎನ್.



















