ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ತುಮಕೂರು : ಲೋಕಾಯುಕ್ತ ದಾಳಿ

4 ಲಕ್ಷಕ್ಕೆ ಬೇಡಿಕೆ ಇಟ್ಟು 40,000 ಕ್ಕೆ ಒಪ್ಪಿದ ಆಸಾಮಿ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಚೇತನ್ ಕುಮಾರ್ ಲೋಕಾ ಬಲೆಗೆ.

ತುಮಕೂರು : ಬೆಂಗಳೂರಿನ ನಾಗದೇವನಹಳ್ಳಿಯ ಶ್ರೀ ನಾಗೇಶ್ ಎಸ್ ಕೆ ರವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದು ಸ್ವಂತ ಫ್ರಾಕ್ಟೇಲ್ ಅಕಾಡೆಮಿ ನಡೆಸುತ್ತಿರುತ್ತಾರೆ. ವಾರಂತ್ಯವಾದ್ದರಿಂದ ದಿನಾಂಕ 17-1 2026ರಂದು ಸ್ನೇಹಿತರೊಂದಿಗೆ ಸುತ್ತಾಡಿಕೊಂಡು ಬರಲು ತಮ್ಮ ಕೆಎ 41ಎಮ್ಇ 8328 ನಂಬರ್ ನ ಕಿಯಾ ಸೋನೆಟ್ ಕಾರಿನಲ್ಲಿ ತುಮಕೂರು ನಗರದ ಕೆಸರುಮಡುಗೆ ಬಂದಿದ್ದು. ಅದೇ ದಿನ ಸಂಜೆ ವಾಪಸ್ ತೆರಳುವಾಗ ಸಂಜೆ 6:30 ಗಂಟೆಗೆ ಸಮಯದಲ್ಲಿ ಕೆಸರುಮಡುವಿನ ಹತ್ತಿರದ ದರ್ಗಾ ಸರ್ಕಲ್ ನಲ್ಲಿ ಟೀ ಕುಡಿಯಲು ಕಾರು ನಿಲ್ಲಿಸಿದಾಗ ದೂರುದಾರರಾದ ಶ್ರೀನಿವಾಸ್ ರವರ ಕಾರನ್ನು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಚೇತನ್ ಕುಮಾರ್ ಎಸ್ ಎಸ್ ರವರು ಟೋಲ್ ಮಾಡಿಕೊಂಡು ತೆಗೆದುಕೊಂಡು ಹೋಗಿ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ಆವರಣದಲ್ಲಿ ನಿಲ್ಲಿಸಿಕೊಂಡಿರುತ್ತಾರೆ.

ದೂರುದಾರ ಶ್ರೀನಿವಾಸ್ ರವರು ಪಿಎಸ್ಐ ಚೇತನ್ ಕುಮಾರ್ ಎಸ್ಎಸ್ ರವರನ್ನು ಭೇಟಿ ಮಾಡಿ ಕಾರಣ ಬಿಡುಗಡೆಗೊಳಿಸುವಂತೆ ಕೇಳಿಕೊಂಡಾಗ ನೀವು ಗಾಂಜಾ ಹೊಡ್ದಿದ್ದೀರಿ ಎಂದು ಕೇಸ್ ಬುಕ್ ಮಾಡುತ್ತೇನೆ. ಕಾರನ್ನು ಕೋರ್ಟ್ ನಲ್ಲಿ ಬಿಡಿಸಿಕೊಳ್ಳಿ ಇಲ್ಲವಾದರೆ 5,00,000 ಹಣ ಕೊಟ್ಟು ಕಾರನ್ನು ತೆಗೆದುಕೊಂಡು ಹೋಗಿ ಎಂದು ಲಂಚಕ್ಕೆ ಒತ್ತಾಯ ಮಾಡಿರುತ್ತಾರೆ. ಅಂದಿನಿಂದ ದಿನಾಂಕ 29.1.2026ರ ವರೆಗೆ ದೂರುದಾರರಾದ ಶ್ರೀನಿವಾಸ್ ಎಸ್ ಕೆ ರವರು ತನಗೆ ಅಷ್ಟೊಂದು ಹಣ ನೀಡಲು ಸಾಧ್ಯವಿಲ್ಲ ಕಡಿಮೆ ಮಾಡಿಕೊಳ್ಳಿ ಎಂದು ಹಲವು ಬಾರಿ ಮನವಿ ಮಾಡಿಕೊಂಡಾಗ ಕೊನೆಗೆ ಪಿಎಸ್ಐ ಚೇತನ್ ಕುಮಾರ್ 40,000 ಕ್ಕೆ ಒಪ್ಪಿ ಹಣ ನೀಡಿ ಕಾರು ತೆಗೆದುಕೊಂಡು ಹೋಗಲು ತಿಳಿಸಿರುತ್ತಾರೆ.

ದೂರುದಾರ ನಾಗೇಶ್ ಎಸ್ ಕೆ ರವರಿಗೆ ಲಂಚ ನೀಡಿ ಕಾರು ಬಿಡಿಸಿಕೊಳ್ಳಲು ಇಷ್ಟವಿಲ್ಲದೆ ದಿನಾಂಕ 31/1/ 2026 ರಂದು ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದು. ಪೊಲೀಸ್ ಅಧೀಕ್ಷಕರಾದ ಶ್ರೀ ಲಕ್ಷ್ಮಿ ನಾರಾಯಣ ಎ ವಿ ರವರು ಠಾಣಾ ಮೋ ನಂ: 01/2026 ಕಲಾಂ – 7(a ) ಭ್ರಷ್ಟಾಚಾರ ಪ್ರತಿ ಬಂದ ಕಾಯ್ದೆ 1988 ತಿದ್ದುಪಡಿ 2008ರಂತೆ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲು ಶ್ರೀ ಮಂಜುನಾಥ ಎಂ ಪೋಲಿಸ್ ಉಪಾಧೀಕ್ಷಕರು ರವರಿಗೆ ಆದೇಶಿಸಿರುತ್ತಾರೆ.

ಟ್ರ‍್ಯಾಪ್ ಕಾರ್ಯಾಚರಣೆ ವೇಳೆ ನಿನ್ನೆ ದಿನ ರಾತ್ರಿ ಸುಮಾರು 10: 10 ಗಂಟೆ ಸಮಯದಲ್ಲಿ ಪಿಎಸ್ಐ ಚೇತನ್ ಕುಮಾರ್ ಅವರ ಸೂಚನೆಯಂತೆ ಪಿರ್ಯಾದಿ ಶ್ರೀ ನಾಗೇಶ್ ಎಸ್ ಕೆ ರವರು 40,000 ಲಂಚದ ಹಣವನ್ನು ಜಾಸ್ ಟೋಲ್ ಬಳಿ ಇರುವ ನಮಸ್ತೆ ತುಮಕೂರು ಹೋಟೆಲನ ಕ್ಯಾಶಿಯರ್ ಸಪ್ಧರ್ ಅಲ್ಲಿ ಖಾನ್ ಗೆ ನೀಡಿರುತ್ತಾರೆ. ಕೂಡಲೇ ತನಿಖಾ ಅಧಿಕಾರಿ ಶ್ರೀ ಮಂಜುನಾಥ ಪೊಲೀಸ್ ಉಪಾಧೀಕ್ಷಕರು ರವರ ನೇತೃತ್ವದ ತಂಡ ಲಂಚದ ಹಣದ ಸಮೇತ ಕ್ಯಾಶಿಯರ್ ಅನ್ನು ವಶಕ್ಕೆ ಪಡೆದಿದ್ದು. ನಂತರ ರಾತ್ರಿ 2 ಗಂಟೆಯಲ್ಲಿ ಪಿಎಸ್ಐ ಚೇತನ್ ಕುಮಾರ್ ರವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿ ದಸ್ತಗಿರಿ ಮಾಡಿ ತನಿಖಾ ಪ್ರಕ್ರಿಯೆಯನ್ನು ಕೈಗೊಂಡಿರುತ್ತಾರೆ.

ಈ ದಿನ ದಿನಾಂಕ 31/01/2026 ರಂದು ಆರೋಪಿ ಚೇತನ್ ಕುಮಾರ್ ಪಿಎಸ್ಐ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ಅವರನ್ನು ಗೌರವಾನ್ವಿತ 7ನೇ ಅಪಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಘನ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಆದೇಶವನ್ನು ನೀಡಿರುತ್ತದೆ.

ತುಮಕೂರು ಲೋಕಾಯುಕ್ತ ಘಟಕದ ಪೊಲೀಸ್ ಅಧೀಕ್ಷಕರಾದ ಲಕ್ಷ್ಮೀನಾರಾಯಣ್ ಎ ವಿ ರವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕರಾದ ಮಂಜುನಾಥ್ ಎಂ ಮತ್ತು ಸಂತೋಷ್ ಕೆ.ಎಂ ರವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಸುರೇಶ್ ಕೆ. ಅಹ್ಮದ್ ಸಲೀಂ ಬಿ ಮತ್ತು ರಾಜು ಟಿ ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಲಂಚ ಸ್ವೀಕರಿಸಿದ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿರುತ್ತಾರೆ.

ವರದಿ ದಿನೇಶ್ ಕೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!