ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹಣಕ್ಕಾಗಿ ತಂದೆ ತಾಯಿ ಮತ್ತು ತಂಗಿಯನ್ನು ಕೊಲೆ ಮಾಡಿದ ಸೈಕೋ ಕಿಲ್ಲರ್ ಮಗ

ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಹರಪನಹಳ್ಳಿ ರಸ್ತೆಯ ಬ್ರಿಡ್ಜ್ ಹತ್ತಿರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಈ ಕುಟುಂಬ ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ದೊಡ್ಡ ಕೆಟ್ಟದಹಳ್ಳಿ ಪಟ್ಟಣ ವಾಸಿಗಳಾಗಿದ್ದು ಭೀಮರಾಜ್, ಜಯಲಕ್ಷ್ಮಿ, ಮತ್ತು ಮಗಳು ಅಮೃತ ಹಾಗೂ ಆರೋಪಿ ಅಕ್ಷಯ್ ಕೊಟ್ಟೂರಿಗೆ ವಲಸೆ ಬಂದಿದ್ದರು. ಕೊಟ್ಟೂರಿಗೆ ಬಂದ ಇವರು ಹರಪನಹಳ್ಳಿ ರಸ್ತೆಯಲ್ಲಿ ಟೈಯರ್ ರಿಮೋಲ್ಡ್ ಕೆಲಸವನ್ನು ಮಾಡುತ್ತಿದ್ದು, ತುಂಬಿದ ಸಂಸಾರವಾಗಿ ಪಟ್ಟಣದಲ್ಲಿ ಚೆನ್ನಾಗಿ ಜೀವನ ಮಾಡುತ್ತಿದ್ದರು. ಇತ್ತೀಚೆಗೆ ಆರೋಪಿ ಅಕ್ಷಯ್ ಅವರ ತಂದೆ ಭೀಮರಾಜ್ ಇವರು ಸುಮಾರು ಒಂದುವರೆ ಕೋಟಿ ಮೌಲ್ಯದ ಆಸ್ತಿಯನ್ನು ಮಾರಾಟ ಮಾಡಿದ್ದಕ್ಕೆ ಮೃಗೀಯ ವರ್ತನೆಯಿಂದ ಮಗನೇ ತನ್ನ ತಂದೆ ತಾಯಿ ಮತ್ತು ತಂಗಿಯನ್ನು ಕೊಲೆ ಮಾಡಿ ಮನೆಯಲ್ಲಿ ಹೂತುಹಾಕಿ ಎರಡು ದಿನಗಳ ನಂತರ ತಾನೇ ಬೆಂಗಳೂರಿಗೆ ಹೋಗಿ ಬೆಂಗಳೂರಿನ ತಿಲಕ ನಗರ ಪೊಲೀಸ್ ಠಾಣೆಗೆ ಹೋಗಿ ತನ್ನ ತಂದೆ ತಾಯಿ ಮತ್ತು ತಂಗಿ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದಾನೆ ಅಕ್ಷಯನ ವರ್ತನೆಯನ್ನು ಕಂಡ ಪೊಲೀಸರಿಗೆ ಅನುಮಾನ ಬಂದು ತೀರಾ ವಿಚಾರಣೆಗೆ ಒಳಪಡಿಸಿದಾಗ ಅಕ್ಷಯ್ ಪೊಲೀಸರಿಗೆ ತಾನು ಮಾಡಿರುವ ಕೊಲೆಗಳನ್ನು ಒಪ್ಪಿಕೊಂಡಿದ್ದಾನೆ ಅಲ್ಲದೇ ತಾನೇ ಕೊಲೆ ಮಾಡಿದ ಮೃತ ದೇಹಗಳನ್ನು ಮನೆಯಲ್ಲಿ ಹೂತು ಹಾಕಿದ್ದೇನೆ ಎಂದು ಒಪ್ಪಿಕೊಂಡಿದ್ದು, ನಂತರ ತಿಲಕ ನಗರ ಪೊಲೀಸ್ ಠಾಣೆ ಯಿಂದ ಕೊಟ್ಟೂರು ಪೊಲೀಸ್ ಠಾಣೆಗೆ ತಿಳಿಸಿದ್ದಾರೆ, ಕೊಟ್ಟೂರು ಪೊಲೀಸ್ ಠಾಣೆ ಸಿಬ್ಬಂದಿ ಅವನ ಮನೆಯನ್ನು ಹುಡುಕಿ ವೀಕ್ಷಿಸಿದಾಗ ಅವನು ಕೊಲೆ ಮಾಡಿರುವುದು ಗೊತ್ತಾಗಿ ಸ್ಥಳಕ್ಕೆ ವಿಜಯನಗರ ಜಿಲ್ಲೆಯ ಎಸ್ ಪಿ ಎಸ್. ಜಾಹ್ನವಿ ಮತ್ತು ಅಡಿಷನಲ್ ಎಸ್ ಪಿ ಮಂಜುನಾಥ ಮತ್ತು ಕೂಡ್ಲಿಗಿ ಡಿವೈ ಎಸ್ ಪಿ ಮಲ್ಲೇಶಪ್ಪ ದೊಡ್ಡಮನಿ ಕೊಟ್ಟೂರು ಪೊಲೀಸ್ ಠಾಣೆಯ ಸಿಪಿಐ ಡಿ ದುರುಗಪ್ಪ ಪಿಎಸ್ಐ ಗೀತಾಂಜಲಿ ಶಿಂಧೆ ಮತ್ತು ಮತ್ತು ಪೊಲೀಸ್ ಸಿಬ್ಬಂದಿಗಳಾದ ಚಿಮ್ಮನಹಳ್ಳಿ ಕೊಟ್ರೇಶ್, ಎನ್.ಎಂ. ಸ್ವಾಮಿ, ಶಶಿಧರ್, ಕುಮಾರ ಪತ್ರಿ ಹಾಗೂ ಇಲಾಖೆಯ ಸಿಬ್ಬಂದಿ ವರ್ಗದವರು ಶೋಧ ಕಾರ್ಯವನ್ನು ನಡೆಸಿ ಮೃತದೇಹಗಳನ್ನು ಆರೋಪಿಯ ನೇರವಾಗಿ ಬೆಂಗಳೂರಿನ ತಿಲಕ ನಗರ ಪೊಲೀಸ್ ಠಾಣೆ ಸಿಬ್ಬಂದಿಯವರು ಬೆಂಗಳೂರಿನಿಂದ ಕೊಟ್ಟೂರಿಗೆ ಕರೆತಂದು ಆರೋಪಿಯ ಮಹಜರು ಮೂಲಕ ಮೃತ ದೇಹಗಳನ್ನು ಹೊರತೆಗೆದು ಕೊಟ್ಟೂರು ತಾಲೂಕು ಆಸ್ಪತ್ರೆಗೆ ರವಾನಿಸಲಾಯಿತು. ಪೋಸ್ಟ್ ಮಾರ್ಟಂ ಮಾಡಿದ ಮೇಲೆ ಮೃತರಿಗೆ ಸಂಬಂಧಪಟ್ಟ ಸಂಬಂಧಿಕರನ್ನು ಕರೆಸಿ ಮೃತದೇಹಗಳನ್ನು ಅವರಿಗೆ ರವಾನೆ ಮಾಡಲಾಗಿದೆ, ಮತ್ತು ಆರೋಪಿ ಸೈಕೋ ಕಿಲ್ಲರ್ ಆದ ಅಕ್ಷಯನನ್ನು ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ವರದಿಗಾರರು- ಚಂದ್ರಗೌಡ ಎನ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!