
ತುಮಕೂರು/ ಮಧುಗಿರಿ ಮಂಡಲದ ಐಡಿ ಹಳ್ಳಿ ಹೋಬಳಿಯಲ್ಲಿ ಇಂದು ನಡೆದ ವಿಬಿ-ಜಿ ರಾಮ್ ಜಿ ಕುರಿತ ಜಾಗೃತಿ ಮೂಡಿಸಿ ಕೇಂದ್ರದ ನರೇಂದ್ರ ಮೋದಿಯವರ ಸರ್ಕಾರ ತಂದಿರುವ ಈ ಯೋಜನೆಯ ಕುರಿತ ಮಾಹಿತಿ, ಕೂಲಿ ಕಾರ್ಮಿಕರಿಗೆ ಹೇಗೆ ಉಪಯೋಗ ಎಂಬುದನ್ನು ಬಿಜೆಪಿ ಮಧುಗಿರಿ ಮಂಡಲ ಪ್ರಧಾನ ಕಾರ್ಯದರ್ಶಿ ರಮೇಶ್ ಎಸ್ ಆರ್ ವಿವರಿಸಿದರು. ಹಾಗೂ ಇದೇ ಸಂದರ್ಭದಲ್ಲಿ ನೂತನ ಐಡಿ ಹಳ್ಳಿ ಶಕ್ತಿ ಕೇಂದ್ರ ಪ್ರಮುಖರಾದ ರಾಮಚಂದ್ರ ಅವರನ್ನ ಕಾರ್ಯಕರ್ತರೊಂದಿಗೆ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮಂಡಲ ಉಪಾಧ್ಯಕ್ಷರಾದ ಶ್ರೀ ಚಂದ್ರಶೇಖರ ರೆಡ್ಡಿ, ಕಾರ್ಯದರ್ಶಿಗಳಾದ ಶ್ರೀ ನಾರಾಯಣಪ್ಪ. ಗಂಗಧಾರ.ಎಸ್ ಟಿ ಮೋರ್ಚಾ ಅಧ್ಯಕ್ಷರಾದ ಶ್ರೀ ಪುಟ್ಟರಾಜು, ಒಬಿಸಿ ಮೋರ್ಚಾ ಅಧ್ಯಕ್ಷರಾದ ಶ್ರೀ ಮಂಜುನಾಥ, ಮುಖಂಡರುಗಳಾದ ಕೃಷ್ಣಪ್ಪ, ಜನಾರ್ದನ ರೆಡ್ಡಿ, ಕೃಷ್ಣ ಬಂಗಾರಿ ರವಿಚಂದ್ರನ್, ರಾಜಣ್ಣ ಮುಂತಾದವರು ಉಪಸ್ಥಿತರಿದ್ದರು.
ವರದಿ ದಿನೇಶ್ .ಕೆ.




















