
ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕು ಜಿ.ಆರ್. ನಗರದಲ್ಲಿ ದಲಿತ ಮಹಿಳೆ ಕಣ್ಣಮ್ಮನನ್ನು ದಿನಾಂಕ 24.01.2026 ಶನಿವಾರ ಮಧ್ಯಾಹ್ನ 12.20 ಕ್ಕೆ ಕಂಬಕ್ಕೆ ಕಟ್ಟಿ ಜಾತಿ ನಿಂದನೆ ಮಾಡಿ ಥಳಿಸಿದ ಘಟನೆಯಿಂದ ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತವಾಗಿತ್ತು.
ಘಟನೆ ಹಿನ್ನೆಲೆ : ಕಣ್ಣಮ್ಮ ತನ್ನ ಜಮೀನಿನಲ್ಲಿ ಬೆಳೆಸಿದ ಹುರುಳಿಗಳನ್ನು ಸೆಲ್ವಿ ಅವರ ಜಾನುವಾರುಗಳು ನಾಶಪಡಿಸಿದ್ದು, ರಾಮಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸೆಲ್ವಿ ಅವರನ್ನು ಕರೆದಾಗ, ಅವರು ಕಣ್ಣಮ್ಮ ಮತ್ತು ಮಗ ಪೆರುಮಾಳ್ ಅವರನ್ನು ಮನೆಯಿಂದ ಎಳೆದುತಂದು ಜಾತಿ ಆಧಾರಿತ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಣ್ಣಮ್ಮನನ್ನು ಕಂಬಕ್ಕೆ ಕಟ್ಟಿ ಹೊಡೆದರು ಈ ಹಿನ್ನಲೆ ರಾಮಪುರ ಪೊಲೀಸ್ ಠಾಣೆಯಲ್ಲಿ ಮಂಜು ಮತ್ತು ಅಂಗಮುತ್ತು ಎಂಬ ಮೂವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಸೆಲ್ವಿ ತಪ್ಪಿಸಿಕೊಂಡಿದ್ದರು ಈಗ ಅವರನ್ನು ಪೊಲೀಸರು ಸೆರೆ ಹಿಡಿದು ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್ ಮುಖ್ಯ ಸುಪರಿಂಟೆಂಡೆಂಟ್ ಮುತ್ತುರಾಜ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ಕೈಗೊಂಡಿದ್ದರು ಇದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗು ಹೋಗಿದ್ದ ಕಣ್ಣಮ್ಮ ಅವರನ್ನು ಕೊಳ್ಳೇಗಾಲ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ಸೇರಿಸಲಾಗಿತ್ತು ದಿನಾಂಕ 25.01.2026 ರಿಂದ ದಿನಾಂಕ 02.02. 2026 ರ ವರೆಗೆ ಕಣ್ಣಮ್ಮ ಅವರು ಆಸ್ಪತ್ರೆಯಲ್ಲಿ ಇದ್ದರು ಈಗ ಚಿಕಿತ್ಸೆಯನ್ನು ಪಡೆದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯಲ್ಲಿ ಇದ್ದ ಸಮಯದಲ್ಲಿ ಪೊಲೀಸ್ ವರಿಷ್ಠ ಅಧಿಕಾರಿ ಮುತ್ತುರಾಜ್ ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿ ಶ್ರೀ
ರೂಪ ಹಾಗೂ ಎಸಿ ಹಾಗೂ ಜನಪ್ರತಿನಿಧಿಗಳು ಶಾಸಕರುಗಳು ಭೇಟಿ ಮಾಡಿ ಸಾಂತ್ವನ ಹೇಳಿರುತ್ತಾರೆ ಇಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟನೆಯು ಭೇಟಿ ಮಾಡಿ ಪೂರ್ವ ಪರ ವಿಚಾರಿಸಿ ಸಾಂತ್ವನ ಹೇಳಿದ್ದಾರೆ..
ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರು ಸಿದ್ದರಾಜು ದೊಡ್ಡಿಂದ್ವಾಡಿ, ಜಿಲ್ಲಾ ಅಧ್ಯಕ್ಷರು ಹಿಂಡಯ್ಯ ,ಕೊಳ್ಳೇಗಾಲ ತಾಲೂಕು ಅಧ್ಯಕ್ಷ ಚಿಕ್ಕ ದೊಡ್ಡಯ್ಯ,ಹನೂರು ತಾಲ್ಲೂಕು ಅಧ್ಯಕ್ಷ ಮಾದೇಶ್, ಮುರುಗೇಶ್, ನಾಗರಾಜು ಹನೂರು
ಕಣ್ಣಮ್ಮ ಅವರ ಮಕ್ಕಳಾದ ಪೆರುಮಾಳ್ ಇನ್ನಿತರರು ಇದ್ದರು.
ವರದಿ :ಉಸ್ಮಾನ್ ಖಾನ್.




















