ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಿಷ್ಕಿಂಧ ಪ್ರೀಮಿಯರ್ ಲೀಗ್-2026ರ (KPL) – 2026 ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

ಮಾಜಿ ಸಚಿವರು ಹಾಗೂ ಶಾಸಕರಾದ ಶ್ರೀ ಗಾಲಿ ಜನಾರ್ದನ್ ರೆಡ್ಡಿ ಅವರಿಂದ ಕಿಷ್ಕಿಂಧ ಪ್ರೀಮಿಯರ್ ಲೀಗ್-2026ರ (KPL) – 2026 ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

ಕೊಪ್ಪಳ : ಗಂಗಾವತಿ ವಿಧಾನಸಭಾ ಕ್ಷೇತ್ರದ ಸಂಗಾಪುರ್ ಗ್ರಾಮದ ಮೈದಾನದಲ್ಲಿ ಸ್ಥಳೀಯ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮತ್ತು ಕ್ರೀಡಾ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಗಂಗಾವತಿ ವಿಧಾನಸಭಾ ಕ್ಷೇತ್ರದ ಆನೆಗುಂದಿ ಕ್ಷೇತ್ರದ ಸಂಗಾಪುರ್ ಗ್ರಾಮದಲ್ಲಿ ನಡೆಯುವ ಕಿಷ್ಕಿಂಧ ಪ್ರೀಮಿಯರ್ ಲೀಗ್-2026ರ (KPL) – 2026 ಕ್ರಿಕೆಟ್ ಪಂದ್ಯಾವಳಿಗೆ ಮಾಜಿ ಸಚಿವರು ಹಾಗೂ ಜನಪ್ರಿಯ ಶಾಸಕರಾದ ಶ್ರೀ ಗಾಲಿ ಜನಾರ್ಧನ್ ರೆಡ್ಡಿರವರು ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಕ್ರೀಡೆ ನಮ್ಮ ಮಾನಸಿಕ ಆರೋಗ್ಯವನ್ನು ಸುಧಾರಣೆ ಮಾಡುವ ಮೂಲಕ ಉತ್ತಮ ಚಟುವಟಿಕೆಗಳಿಗೆ ನಾಂದಿ ಹಾಡುತ್ತದೆ, ಕ್ರಿಕೆಟ್ ಪಂದ್ಯದಲ್ಲಿ ಸೋಲು ಗೆಲುವು ಮುಖ್ಯವಲ್ಲ. ಉತ್ತಮ ಪ್ರದರ್ಶನವೇ ಗೆಲುವು ಎಂಬ ಭಾವನೆ ಬೆಳೆಸಿಕೊಳ್ಳಿ ಈ ಪಂದ್ಯಾವಳಿಯು ಈ ಭಾಗದ ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಲಿದೆ ಎಂದು ಆಟಗಾರರಿಗೆ ಶುಭ ಹಾರೈಸಿದರು.

ನಂತರ ಯುವ ಮುಖಂಡರಾದ
ಬಿ. ಮಂಜುನಾಥ ಕಲಾಲ್ ಮಾತಾನಾಡಿ ಕ್ರಿಕೆಟ್ ಕೇವಲ ಆಟವಲ್ಲ, ಅದೊಂದು ಭಾವನೆ ಮತ್ತು ಎಲ್ಲರನ್ನು ಒಗ್ಗೂಡಿಸುವ ಪ್ರಮುಖ ಕ್ರೀಡೆಯಾಗಿದೆ. ಇದು ದೈಹಿಕ ಫಿಟ್‌ನೆಸ್, ಶಿಸ್ತು, ತಂಡದ ಕೆಲಸ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ. ರೋಮಾಂಚಕ ಮನರಂಜನೆಯ ಜೊತೆಗೆ, ಇದು ಕ್ರೀಡಾ ಮನೋಭಾವ ಮತ್ತು ಸಂವಹನ ಕೌಶಲ್ಯಗಳನ್ನು ಕಲಿಸುತ್ತದೆ. ಗ್ರಾಮೀಣ ಭಾಗದಲ್ಲಿ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ಸಿಗಬೇಕಿದ್ದು, ಅಗತ್ಯ ಸೌಲಭ್ಯ ಒದಗಿಸುವ ಮೂಲಕ ಕ್ರೀಡಾಪಟುಗಳನ್ನು ಗುರುತಿಸುವ, ಪ್ರೋತ್ಸಾಹಿಸುವ ಕೆಲಸವನ್ನು ನಮ್ಮ ಜನಪ್ರಿಯ ಶಾಸಕರಾದ ಶ್ರೀ ಗಾಲಿ ಜನಾರ್ದನ್ ರೆಡ್ಡಿರವರು ಮಾಡುತ್ತಿದ್ದಾರೆ ಎಂದರು.

ಗಂಗಾವತಿ ತಾಲೂಕಿನ ಆನೆಗೊಂದಿ ಕ್ಷೇತ್ರದ ಸಂಗಾಪುರ ಗ್ರಾಮದಲ್ಲಿ ಪ್ರದೇಶದಲ್ಲಿ ಈ ಪಂದ್ಯಗಳು ಜರುಗುತ್ತಿವೆ. ಈ ಲೀಗ್‌ನ ಅಧ್ಯಕ್ಷರಾಗಿ ರಾಘವೇಂದ್ರ ಮಲ್ಲಾಪುರ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ಇದು ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಾಗಿದ್ದು, ಹಲವಾರು ಸ್ಥಳೀಯ ತಂಡಗಳು ಭಾಗವಹಿಸಿವೆ.

ಈ ಸಂದರ್ಭದಲ್ಲಿ ಮೈದಾನದ ಮಾಲೀಕರಾದ ಡಾ. ಶಶಿಧರ್, ಮುಖಂಡರಾದ ಮನೋಹರ ಗೌಡ ಹೇರೂರು, ಮಲ್ಲಿಕಾರ್ಜುನ್ ಹಿರೇಮಠ್, ಕೃಷ್ಣ ನಾಯಕ್ ಚಂದ್ರಪ್ಪ, ಬಂಡಿ ಮಲ್ಲಿಕಾರ್ಜುನ, ಮಲ್ಲಾಪುರ, ಹೊನ್ನಪ್ಪ ನಾಯಕ್ ಕೊರಮ್ಮ ಕ್ಯಾಂಪ್, ರಾಜ್ ಶೇಖರ್, ಮಂಜುನಾಥ್ ಜಂಗರ್, ದಂಜಪ್ಪ ರಂಗಾಪುರ, ಕಾಶಿರಾವ್ ರಾಂಪುರ, ಕೃಷ್ಣ, ಚತ್ರಪ್ಪ, ದನ್ ಜಪ್ಪ ಲಂಬಾಣಿ ಭೋವಿ ಸಮಾಜದ ಮುಖಂಡರಾದ ಹುಲಿಗೇಶ್, ಹನುಮೇಶ್ ಮಲ್ಲಾಪುರ ಹಾಗೂ ಇನ್ನಿತರ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!