ಬಳ್ಳಾರಿ / ಕಂಪ್ಲಿ : ಗಂಗಾವತಿಯಿಂದ ಕಂಪ್ಲಿ ಮೂಲಕ ದರೋಜಿ ಸಂಪರ್ಕಿಸುವ ಬ್ರಾಡ್ಗೇಜ್ ರೈಲು ಮಾರ್ಗ ನಿರ್ಮಾಣಕ್ಕೆ ನವೀಕರಿಸಿದ ಕಾರ್ಯಸಾಧ್ಯತಾ ವರದಿಯನ್ನು ಶೀಘ್ರ ರೈಲ್ವೆ ಬೋರ್ಡ್ಗೆ ಸಲ್ಲಿಸುವುದಾಗಿ ನೈರುತ್ಯ ರೈಲ್ವೆ ವಲಯದ ನಿರ್ಮಾಣ ವಿಭಾಗದ ಮುಖ್ಯ ಆಡಳಿತಾಧಿಕಾರಿ ಪತ್ರ ಬರೆದು ತಿಳಿಸಿದ್ದಾರೆ ಎಂದು ರೈಲ್ವೆ ಬಳಕೆದಾರರ ಸಮಿತಿ ಸದಸ್ಯ ಅಶೋಕಸ್ವಾಮಿ ಹೇರೂರು ತಿಳಿಸಿದ್ದಾರೆ.
ರೈಲ್ವೆ ಮಂಡಳಿ ಕಾರ್ಯ ಸಾಧ್ಯತಾ ಸಮೀಕ್ಷಾ ವರದಿ ಅವಲೋಕಿಸಿ 2024ರ ಆ.9ರಂದು ಯೋಜನಾ ವೆಚ್ಚವನ್ನು 705.45 . ಕೋಟಿ ರೂಪಾಯಿ ಮಾಡಿದ್ದು, ಶೀಘ್ರ ಗಂಗಾವತಿ-ದರೋಜಿ ಬ್ರಾಡ್ಗೇಜ್ ಕಾಮಗಾರಿಗೆ ಚಾಲನೆ ದೊರೆಯಲಿದೆ ಎನ್ನುವ ಆಶಾಭಾವನೆಯಿದೆ ಎಂದು ತಿಳಿಸಿದ್ದಾರೆ.
ರೈತರು, ವರ್ತಕರು ಹಾಗೂ ದೇಶದ ವಿವಿಧೆಡೆಯಿಂದ ಅಂಜನಾದ್ರಿಗೆ ಬರುವ ಭಕ್ತರ ಅನುಕೂಲಕ್ಕಾಗಿ ಗಂಗಾವತಿ-ದರೋಜಿ ಬ್ರಾಡ್ಗೇಜ್ ರೈಲು ಮಾರ್ಗ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ನಾನು ಪತ್ರ ಬರೆದಿದ್ದೆ ಎಂದು ತಿಳಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್



















