
ಬಳ್ಳಾರಿ/ ಕುರುಗೋಡು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಪಂಚಾಯತ್, ತಾಲೂಕ ಆರೋಗ್ಯ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ ಕುರುಗೋಡು, ಗ್ರಾಮ ಪಂಚಾಯತ್, ಆಯುಷ್ಮಾನ್ ಆರೋಗ್ಯ ಮಂದಿರ ಗೆಣಿಕೆಹಾಳ
ಇವರ ಸಂಯುಕ್ತಾಶ್ರಯದಲ್ಲಿ ಆರೋಗ್ಯದ ನಡಿಗೆ,ಜನರ ಬಳಿಗೆ ಎಂಬ ಧ್ಯೇಯ ವಾಕ್ಯದೊಂದಿಗೆ
ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತವಾಗಿ ಉಚಿತ ದಂತ ತಪಾಸಣೆ ಮತ್ತು ಕಣ್ಣಿನ ಆರೋಗ್ಯ ತಪಾಸಣೆ ಶಿಬಿರವನ್ನು ತಪಾಸಣೆಯನ್ನು ಗೆಣಕೆಹಾಳ್ ಗ್ರಾಮದ ಉಪ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಶಿಬಿರದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಮಂಜುನಾಥ ಜವಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕ್ಯಾನ್ಸರ್ ಎನ್ನುವುದು ದೇಹದ ಕೋಶಗಳು ಅನಿಯಂತ್ರಿತವಾಗಿ ಬೆಳೆದು, ಸುತ್ತಲಿನ ಅಂಗಗಳಿಗೆ ಹರಡುವ ನೂರಕ್ಕೂ ಹೆಚ್ಚು ರೋಗಗಳ ಒಂದು ಗುಂಪು. DNA ನಲ್ಲಿನ ರೂಪಾಂತರಗಳಿಂದಾಗಿ ಈ ಕೋಶಗಳು ಸಾಮಾನ್ಯ ಜೀವಕೋಶಗಳಿಗಿಂತ ಭಿನ್ನವಾಗಿ ವರ್ತಿಸುತ್ತವೆ. ಹೆದರಿಕೆ ಬೇಡ ಜಾಗೃತಿ ಇರಲಿ, ಆರೋಗ್ಯಕರ ಜೀವನಶೈಲಿ, ಧೂಮಪಾನ ತ್ಯಜಿಸುವುದು, ನಿಯಮಿತ ವ್ಯಾಯಾಮ, ಪೌಷ್ಟಿಕ ಆಹಾರ, ಮತ್ತು ಮುನ್ನೆಚ್ಚರಿಕೆ ತಪಾಸಣೆಗಳು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು. ಕ್ಯಾನ್ಸರ್ ಕುರಿತು ಮಾಹಿತಿ ನೀಡಿದರು.
ಆರೋಗ್ಯ ತಪಾಸಣಾ ಶಿಬಿರದಲ್ಲಿ 103ಕ್ಕೂ ಹೆಚ್ಚಿನ ಹದಿಹರೆಯದವರಿಗೆ, ಗರ್ಭಿಣಿಯರಿಗೆ, ಚಿಕ್ಕ ಮಕ್ಕಳಿಗೆ, ಮಹಿಳೆಯರಿಗೆ, ಹಿರಿಯರಿಗೆ, ವೃದ್ಧರಿಗೆ ಮುಂತಾದವರಿಗೆ ಆರೋಗ್ಯ ತಪಾಸಣೆ ಕೈಗೊಂಡು ಔಷಧಿಗಳನ್ನು ವಿತರಿಸಲಾಯಿತು.
ನಮ್ಮ ಕ್ಲಿನಿಕ್ ನ ವೈದ್ಯಾಧಿಕಾರಿಗಳಾದ ಡಾ. ಸುನಿಲ್
ದಂತ ವೈದ್ಯಾಧಿಕಾರಿ ಗಾಯಿತ್ರಿ,
ನೇತ್ರಾಧಿಕಾರಿ ಜಿ.ಪಲ್ಲವಿ.
PHCO ರೇಣುಕಾ, H.I.O ಷಡಕ್ಷರಯ್ಯ ಸ್ವಾಮಿ, CHO ಕುಮಾರಿ ಸೈಯದ್ ಸುಲ್ತಾನ, ICTC ಆಪ್ತ ಸಮಾಲೋಚಕರಾದ ಎನ್.ಕರಿಬಸವ, NCD ಲ್ಯಾಬ್ ಟೆಕ್ನಿಯಿಷನ್, ಅಬ್ದುಲ್ ಸುಭಾನ್ ಕೆ, ಎನ್ .ಸಿ.ಡಿ ಆಪ್ತ ಸಮಾಲೋಚಕರಾದ ನೇತ್ರಾವತಿ, ಎನ್.ಸಿ.ಡಿ. ಡಾಟಾ ಎಂಟ್ರಿ ಆಪರೇಟರ್ ಶೇಖರ್ ಹೆಚ್, ಆಶಾ ಕಾರ್ಯಕರ್ತರು, ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಗ್ರಾಮದ ಸಾರ್ವಜನಿಕರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















