ಹಾವೇರಿ: “ಜನರು ಸರ್ಕಾರಿ ನೌಕರಿ ಬೇಕು ಎಂದು ಹಾತೊರೆಯುತ್ತಿರುವ ಸಂದರ್ಭದಲ್ಲಿಯೂ ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಯೇ ತನ್ನ ಗುರಿಯೆಂದು ತಿಳಿದು, ತನಗೆ ದೊರೆತ ಸರ್ಕಾರಿ ನೌಕರಿಯನ್ನೇ ತ್ಯಾಗ ಮಾಡಿದ ಬಡ ಕುಟುಂಬದ ವ್ಯಕ್ತಿಯೇ ಡಾ. ಸಂಜಯಗಾಂಧಿ ಸಂಜೀವಣ್ಣನವರ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.
ನಗರದ ಇಜಾರಿಲಕ್ಮಾಪುರದ ಜ್ಯೋತಿ ಬುದ್ದಿಮಾಂದ್ಯ ಶಿಕ್ಷಣ ಸಂಸ್ಥೆಯ ವಿಶೇಷ ಚೇತನ ಮಕ್ಕಳೊಂದಿಗೆ ಗುರುವಾರ ಆಯೋಜಿದ್ದ “ಕೆಪಿಸಿಸಿ ಜಿಲ್ಲಾ ವಕ್ತಾರ ಹಾಗೂ ಅಹಿಂದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಸಂಜಯಗಾಂಧಿ ಸಂಜೀವಣ್ಣನವರ ಅವರ 45ನೇ ವರ್ಷದ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಡಾ.ಸಂಜಯಗಾಂಧಿ ಅವರು ಸಮಾಜ ಸೇವೆಗೆ ಇನ್ನಷ್ಟು ಶ್ರಮಿಸುವ ಜೊತೆಗೆ ಅದಕ್ಕೆ
ತಕ್ಕಂತೆ ಇನ್ನಷ್ಟು ಉನ್ನತ ಹುದ್ದೆಗಳು ದೊರೆಯಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ವಕ್ತಾರ ಡಾ.ಸಂಜಯಗಾಂಧಿ ಸಂಜೀವಣ್ಣವರ ಅವರ ಅಭಿಮಾನಿಗಳಾದ ಸುಮಂಗಲಾ ರಾರವಿ, ಮಂಜು ದಡ್ಡೂರ, ಪುಟ್ಟಪ್ಪ ಗುಡ್ಡಣ್ಣನವರ, ನಾಗರಾಜ್ ಮಡಿವಾಳರ, ಮಾರುತಿ ಬಾರಕ , ಅಣ್ಣಪ್ಪ ಕಣ್ಣಪ್ಪನವರ, ಪ್ರವೀಣ ಪೂಜಾರ, ಪ್ರಕಾಶ್ ಮರಬದ, ಮರಿಯಪ್ಪ ಬಂದಮ್ಮನವರ, ಮಾರುತಿ ಸಿ. ಎಮ್, ಅಶೋಕ್ ಮುಗದೂರ್, ಆನಂದ್ ಮುರಡೆಪ್ಪನವರ ಹಾಗೂ ಡಾ . ಅಂಬೇಡ್ಕರ್ ಅಭಿಮಾನಿಗಳು, ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಸಿಬ್ಬಂದಿಗಳು ಇದ್ದರು.
ಹುಟ್ಟು ಹಬ್ಬದ ನಿಮಿತ್ತ ಮಕ್ಕಳಿಗೆ ಹಣ್ಣು ಹಂಪಲನ್ನು ವಿತರಿಸಿ, ಮಧ್ಯಾಹ್ನದ ಸಿಹಿ ಭೋಜನವನ್ನು ಸವಿದರು.
ವರದಿ ಬಸವರಾಜ ಎಸ್. ಎನ್.




















