ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಫೆ.8 ಮತ್ತು 9ರಂದು ವಾಲ್ಮೀಕಿ‌ ಜಾತ್ರೆ : ಹೆಚ್ಚಿನ ಸಂಖ್ಯೆಯಲ್ಲಿ ವಾಲ್ಮೀಕಿ‌ ಸಮಾಜದ ಬಾಂಧವರು ಭಾಗವಹಿಸುವಂತೆ ಕರೆ ನೀಡಿದ ತಾಲೂಕಾಧ್ಯಕ್ಷ ನೀರಗಂಟಿ ವಿರೇಶ

ಬಳ್ಳಾರಿ/ ಕಂಪ್ಲಿ : ಫೆ. 8 ಮತ್ತು 9ರಂದು ಹರಿಹರದ ರಾಜನಳ್ಳಿಯಲ್ಲಿ ವಾಲ್ಮೀಕಿ ಜಾತ್ರೆ ನಡೆಯಲಿದ್ದು ಜಾತ್ರೆಯ ಯಶಸ್ವಿಗಾಗಿ ವಾಲ್ಮೀಕಿ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಅಧ್ಯಕ್ಷ ನೀರಗಂಟಿ ವಿರೇಶ ಕರೆ ನೀಡಿದರು.
ಪಟ್ಟಣದ ಅತಿಥಿ ಗೃಹದ ಆವರಣದಲ್ಲಿ ಗುರುವಾರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಾಲ್ಮೀಕಿ ಸಂಸ್ಥಾನ ಮಠದ ಗುರುಗಳಾದ ಪ್ರಸನ್ನಾನಂದಪುರಿ ಮಹಾಸ್ವಾಮಿ‌ ದಿವ್ಯ ಸಾನಿಧ್ಯದಲ್ಲಿ ಎರಡು ದಿನ ವಾಲ್ಮೀಕಿ‌ ಜಾತ್ರೆ ನಡೆಯಲಿದೆ. ಶ್ರೀಮಠದ 28 ನೇ ವಾರ್ಷಿಕೋತ್ಸವ, ಲಿಂಗೈಕ್ಯ ಜಗದ್ಗುರು ಶ್ರೀ ಪುಣ್ಯಾನಂದಪುರಿ ಮಹಾಸ್ವಾಮೀಜಿಯವರ 19ನೇ ವರ್ಷದ ಪುಣ್ಯಾರಾಧನೆ ಹಾಗೂ ಜಗದ್ಗುರು ಡಾ. ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿಯವರ 18 ನೇ ವರ್ಷದ ಪಟ್ಟಾಧಿಕಾರ ಮಹೋತ್ಸವದೊಂದಿಗೆ ಅದ್ಧೂರಿಯಾಗಿ ವಾಲ್ಮೀಕಿ‌ ಜಾತ್ರಾ ಮಹೋತ್ಸವ ನೆರವೇರಲಿದೆ. ಆದ್ದರಿಂದ ಕಂಪ್ಲಿ ತಾಲೂಕಿನ ವಾಲ್ಮೀಕಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಾತ್ರೆಯಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಬೇಕೆಂದು ಕೋರುವ ಜೊತೆಗೆ ಬಳ್ಳಾರಿ ನಗರದಲ್ಲಿ ನಿರ್ಮಾಣಗೊಂಡ ನೂತನ ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ರಾಜ್ಯ ಸರ್ಕಾರ ಅನಾವರಗೊಳಿಸಬೇಕಾಗಿದೆ ಎಂದರು.
ನಂತರ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಕರಪತ್ರವನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಮುಖಂಡರಾದ ಬಿ.ನಾರಾಯಣಪ್ಪ, ಹೆಚ್.ಈರಣ್ಣ, ಸುಗ್ಗೇನಹಳ್ಳಿ ಜಡೆಪ್ಪ, ಟ್ಯಾಕ್ಸಿ ಈರಣ್ಣ, ಬೆಳಗೋಡ್ ಹಾಳ್ ನಾಗರಾಜ, ದೇವಸಮುದ್ರ ನಾಯಕರ ವೆಂಕೋಬ, ನಾಗಭೂಷಣ, ವೆಂಕಟೇಶ, ಸುಧಾಕರ, ರಂಗಪ್ಪ, ದುರುಗಣ್ಣ, ಪೈಲ್ವಾನ್ ವಿರೇಶ, ತಿಮ್ಮಲಾಪುರ ದೇವ, ಕರಿ ವಿರುಪಾಕ್ಷಿ, ದೇವಲಾಪುರ ದುರುಗಪ್ಪ, ಬಿ.ವೆಂಕಟೇಶ ರಾಮಸಾಗರ, ಮೆಟ್ರಿ ಲೋಕೇಶ, ಜಾನೂರು ಗೋವಿಂದರಾಜ, ಮುದ್ದಾಪುರ ನಾಗಪ್ಪ, ದೇವರಾಜ, ಭಾವೈಕ್ಯ ವೆಂಕಟೇಶ ಸೇರಿದಂತೆ ಸಮಾಜದವರು ಉಪಸ್ಥಿತರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!