ಇಂದು ಹುಬ್ಬಳ್ಳಿಯ ಜನತಾ ಬಜಾರದ ಆಶ್ರಯ ಲಾಡ್ಜ್ ನಲ್ಲಿ ಅನುಮಾನಾತ್ಮಕವಾಗಿ ಓಡಾಡುತ್ತಿದ್ದ ಇಬ್ಬರು ಕಾಶ್ಮೀರಿ ವ್ಯಕ್ತಿಗಳನ್ನು ಪರಿಶೀಲಿಸಿದಾಗ ಬ್ಯಾಗಿನಲ್ಲಿ ನಶೆ ನೀಡುವ ವಸ್ತುಗಳು ಸಿಕ್ಕಿವೆ ಆ ಇಬ್ಬರು ವ್ಯಕ್ತಿಗಳ ವಿಚಾರಣೆ ಮಾಡುವಾಗ ಒಬ್ಬರು ಕಟ್ಟಿಗೆ ವ್ಯಾಪಾರಕ್ಕೆ, ಇನ್ನೊಬ್ಬರು ಮರದ ವ್ಯಾಪಾರಕ್ಕೆ ಬಂದಿದ್ದೇವೆ ಎಂದು ಬೇರೆ ಬೇರೆ ಉತ್ತರ ಕೊಡುತ್ತಿದ್ದರು ಆಮೇಲೆ ಕಾಶ್ಮೀರಕ್ಕಾಗಿ ಚಂದಾ ಕಲೆಕ್ಟ್ ಮಾಡಲು ಬಂದಿದ್ದೇವೆ ಎಂದು ಹೇಳಿದರು ಆಮೇಲೆ ಹುಬ್ಬಳ್ಳಿಗೆ ಭಿಕ್ಷೆ ಬಿಡಲು ಬಂದಿದ್ದೇವೆ ಎಂದರು ಇವರ ಮೇಲೆ ನಂಬಿಕೆಯಿಲ್ಲದಂತಾಗಿ ಆಗ ತಕ್ಷಣ ಬ್ಯಾಗ್ ಚೆಕ್ ಮಾಡಿದರೆ ಇವರ ಬ್ಯಾಗಿನಲ್ಲಿ ನಶೆ ಬರಿಸುವ ಪ್ಯಾಕೆಟ್ಟುಗಳು ಸಿಕ್ಕಿವೆ ಒಬ್ಬನ ಕೈಯಲ್ಲಿ ದುಬೈನ ಬೆಲೆ ಬಾಳುವ ವಾಚು ಇದೆ ಇನ್ನೊಬ್ಬನ ಹತ್ತಿರ ಸಾವಿರಾರು ರೂಪಾಯಿಗಳ ನೋಟಿನ ಕಂತೆ ಸಿಕ್ಕಿದೆ ಇವರ ಇಬ್ಬರ ಹತ್ತಿರ ಆಧಾರ್ ಕಾರ್ಡ್ ಬಿಟ್ಟು ಬೇರೆ ಯಾವುದೇ ತರಹದ ಐಡಿ ಕಾರ್ಡ್ ಇಲ್ಲ ಒಂದು ತಿಂಗಳವರೆಗೆ ಇವರು ತಿರುಗಾಡಿದ್ದಾರೆ ಎಂದು ಹೇಳಿಕೆಯನ್ನು ಕೊಟ್ಟಿದ್ದಾರೆ ಆದರೆ ಇಬ್ಬರ ಹತ್ತಿರ ಒಂದೇ ಜೊತೆ ಬಟ್ಟೆಗಳಿವೆ ಹಾಗೂ ಒಂದು ಚಿಕ್ಕ ಬ್ಯಾಗ್ ಇದೆ ಆಮೇಲೆ ಬೆಳಿಗ್ಗೆ ಹೋದರೆ ರಾತ್ರಿನೇ ಬರುತ್ತಿದ್ದರು . ಲಾಡ್ಜಿಂಗ್ ನ ಯಾರ ಜೊತೆನೂ ಕೂಡ ಸ್ವಲ್ಪನೂ ಮಾತಾಡುತ್ತಿರಲಿಲ್ಲ ಯಾವಾಗಲೂ ಗಂಭೀರ ಮುಖದಲ್ಲಿ ಇರುತ್ತಿದ್ದರು ಹೀಗಾಗಿ ಈ ಅನುಮಾನಾಸ್ಪದ ವ್ಯಕ್ತಿಗಳ ಮಾಹಿತಿ ಪಡೆದ ಭಜರಂಗದಳದ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದರು.
ವರದಿ ಬಸವರಾಜ ಎಸ್. ಎನ್



















