
ಕಲಬುರಗಿ /ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮದ ಯುವ ಉದ್ಯಮಿಗಳು ಹಾಗೂ ಶ್ರೀ ವಾಸವಿ ಬಟ್ಟೆ ಅಂಗಡಿ ಮಾಲೀಕರು ಶ್ರೀ ರಾಘವೇಂದ್ರ S. ಗುಂಡನೋರ ಅವರ ಹುಟ್ಟುಹಬ್ಬದ ನಿಮಿತ್ಯ ಇಂದು ಮಹಾಗಾವ ಕ್ರಾಸ್ ತಾ. ಕಮಲಾಪುರ ಚಿಗುರು ನಿರ್ಗತಿಕ ಮತ್ತು ಅನಾಥಾಶ್ರಮ ಮಕ್ಕಳ ನಿಲಯದ ವೃದ್ಧರಿಗೆ ಬಟ್ಟೆಗಳು, ಧೋತಿ, ಸೀರೆ, ಲುಂಗಿ, ವಿತರಣೆ ಮತ್ತು ನೋಟ್ ಬುಕ್ ಪೆನ್ನು ಮತ್ತು ಚಾಕಲೇಟ್ ಮಕ್ಕಳಿಗೆ ನೀಡಿ ಅವರ ಇಷ್ಟದ ಊಟದ ವ್ಯವಸ್ಥೆ ಮಾಡಿಸಿದರು. ಸುಮಾರು ವರ್ಷಗಳಿಂದ ಹುಟ್ಟುಹಬ್ಬ ಆಚರಣೆ ಮಾಡಿಕೊಂಡು ಬಡಬಗ್ಗರಿಗೆ ಆಶ್ರಯಾಗುತ್ತಿರುವ ಶ್ರೀ ರಾಘವೇಂದ್ರ ಗುಂಡನೋರ, ಚಿಗುರು ಆಶ್ರಮದ ಮಕ್ಕಳೊಂದಿಗೆ ಮತ್ತು ಹಿರಿಯರೊಂದಿಗೆ ವಿಶೇಷವಾಗಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡರು.
ಈ ಕಾರ್ಯಕ್ರಮದಲ್ಲಿ ಅವರ ಆತ್ಮೀಯ ಸಹೋದರರು ಮತ್ತು ಸ್ನೇಹಿತರಾದ ರೈತ ಸಂಘ ಅಧ್ಯಕ್ಷರಾದ ಶರಣಬಸಪ್ಪ ಮಮಶೆಟ್ಟಿ, ಆಕಾಶ ಸಾಲಿಮಠ, ವಿನೋದ್ ಸಿಗಿ, ಶಿವ ಕುರಕೋಟಿ, ಸಿದ್ದು ಮಮಶೆಟ್ಟಿ , ಸತೀಶ್ ರಾವೂರ ಮತ್ತು ಈ ಆಶ್ರಮದ ಅಧ್ಯಕ್ಷರು ಮಾತನಾಡಿ ಈ ಬಡ ಮಕ್ಕಳ ಆಶ್ರಮದಲ್ಲಿ ತಮ್ಮ ಹಿರಿಯರೊಂದಿಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದು ಬಹಳ ಸಂತೋಷವಾಯಿತು. ಮತ್ತು ತಮ್ಮ ಜೀವನದುದ್ದಕ್ಕೂ ದಾನ ಧರ್ಮ ಮಾಡುವ ಶಕ್ತಿ ಆ ಭಗವಂತ ಕರುಣಿಸಲಿ ಹಾಗೆಯೇ ಆ ಭಗವಂತ ಸಿರಿ ಸಂಪತ್ತು ಆರೋಗ್ಯ ಭೋಗ ಭಾಗ್ಯ ಕೊಟ್ಟು ಕಾಪಾಡಲೆಂದು ಆ ಭಗವಂತನಲ್ಲಿ ಬೇಡಿಕೊಳ್ಳುತ್ತೇನೆ ಎಂದರು. ಹಾಗೆಯೇ ಮಕ್ಕಳು ಮತ್ತು ವೃದ್ಧರು ನೂರಾರು ವರ್ಷ ಬಾಳಿ ಎಂದು ಹರಸಿ ಹಾರೈಸಿದರು. ಮುದ್ದು ಮಕ್ಕಳು, ಹಿರಿಯರು ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದು ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಮೆರುಗನ್ನು ತಂದರು.
ವರದಿ ಎಸ್ ವಿ ಗಂಗಾಣಿ.



















