ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮುಗಳಖೋಡದಲ್ಲಿ ಗ್ರಾಮದೇವತಾ ಆರಾಧನೆ-ಮುದನೀಡಿದ -ಜನಪದ ಸಂಸ್ಕೃತಿ ಸಂಭ್ರಮ

ಬಾಗಲಕೋಟೆ -ಮುಧೋಳ : ನಿಸರ್ಗವೇ ಜನಪದ ಅಲ್ಲಿ ನೆಲಮೂಲ ಸಂಸ್ಕೃತಿ ಅಡಗಿದೆ ಅಗೆದಷ್ಟು ಸಂಸ್ಕೃತಿ ಸಂಪತ್ತು ದೊರಕುತ್ತದೆ ಎಂದು ಮುಗಳಖೋಡ ಗ್ರಾಮದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಅಭಿಪ್ರಾಯ ಪಟ್ಟರು.
ಅವರು ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಶ್ರೀ ಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಆಶ್ರಯದಲ್ಲಿ ಮತ್ತು ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆ ಹಾಗೂ ಬಸವ ಜನಪದ ಕಲಾ ಸಂಸ್ಥೆಗಳ ಸಹಕಾರದೊಂದಿಗೆ ಗ್ರಾಮ ದೇವತಾರಾಧನೆ ವಾರಾಚರಣೆ ನಿಮಿತ್ಯ ಕಳೆದ ಜನವರಿ 30 ರಿಂದ ಫೆಬ್ರುವರಿ 6 ವರೆಗೆ ನಡೆಸಿದ ಶ್ರೀದೇವಿ ಪಾರಾಯಣ, ಪುರಾಣದ ಮಂಗಲೋತ್ಸವ ಹಾಗೂ ಜನಪದ ಸಂಸ್ಕೃತಿ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡುತ್ತಾ ಸತ್ವಯುತವಾದ ನಮ್ಮ ಜನಪದವನ್ನು ನಾವೆಲ್ಲ ಪೂಜಿಸಬೇಕು. ಜನಪದವೇ ಒಂದು ಶಕ್ತಿ ಎಂದ ಅವರು ತತ್ವವನ್ನೊಳಗೊಂಡ ಜನಪದ ಎಂದೆಂದೂ ಶಾಶ್ವತ ಎಂದರು. ಗುರುಸೇವಾ ಧುರೀಣರಾದ ಶಿರೋಳದ ವರದಿಗಾರ ಎಂ.ಆರ್.ತೆಳಗೇರಿ. ಕಲಾವಿದರಾದ ಬೆಳಗಲಿಯ ರಾಮಣ್ಣ ಖೋತ.ಯಮನಪ್ಪ ಆಲಗೂರ.ಕುಳಲಿಯ ವಿಠಲ ಬನಾಜಗೋಳ.ಈರಪ್ಪ ತಳಪಟ್ಟಿ.ಸೇರಿದಂತೆ ಅನೇಕರನ್ನು ಗೌರವಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಆಶ್ರಮದ ಗೌರವವನ್ನು ಸ್ವೀಕರಿಸಿ ಮಾತನಾಡಿದ ಹಿರಿಯ ಪಾರಿಜಾತ ಕಲಾವಿದ ನಾವಲಗಿಯ ಶ್ರೀಶೈಲ ಪಟ್ಟಣಶೆಟ್ಟಿ ಮಾತನಾಡಿ ಜನಪದ ಕಲೆಗಳು ನಶಿಸಿ ಹೋಗಬಾರದು. ಜನಪದ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸೋಣ ಎಂದು ಹೇಳಿದರು. ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಎಲ್ ಶಾಮಲಾ ಅವರು ನೂರಾರು ತಾಯಂದಿಯರಿಗೆ ಉಡಿ ತುಂಬುವ ಕಾರ್ಯವನ್ನು ನೆರವೇರಿಸಿ ಮಾತನಾಡಿ ಕಾಯಕದೊಂದಿಗೆ ಕೈಲಾಸ ಪತಿಯ ಸ್ಮರಣೆ ಮಾಡೋದು ಒಂದು ಭಾಗ್ಯ ಎಂದರು.‌
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಹಿರಿಯ ಜನಪದ ಕಲಾವಿದೆ ಶ್ರೀಮತಿ ಮುತ್ತವ್ವ ಲಕ್ಷ್ಮೇಶ್ವರ, ಬಸವ ಜಾನಪದ ಕಲಾ ಸಂಸ್ಥೆಯ ಅಧ್ಯಕ್ಷ ರಮೇಶ್ ಸೋಲೋನಿ, ಕುಳಲಿಯ ಪಿ.ಕೆ.ಪಿ.ಎಸ್. ಸದಸ್ಯ ಮುತ್ತಣ್ಣ ಪೋಳ, ಕಲಾವಿದರಾದ ಶ್ರೀಮತಿ ನಿಂಗವ್ವ ಕನ್ನೊಳ್ಳಿ ಶ್ರೀಮತಿ ಅಣ್ಣವ್ವ ಡಂಗಿ ಉಪಸ್ಥಿತರಿದ್ದರು.

ಬಾಗಲಕೋಟೆ ಜಿಲ್ಲೆಯ ಕರಡಿಗುಡ್ಡ.ಯಂಡಿಗೇರಿ. ಹನಮನೇರಿ. ಬೂದಿಹಾಳ.ರಾಂಪೂರ. ಯಲ್ಲಟ್ಟಿ.ಬನಹಟ್ಟಿ.ಅಂಕಲಗಿ ಸೇರಿದಂತೆ ವಿವಿಧ ಭಾಗಗಳಿಂದ ಬಂದ ತಂಡಗಳು ಕಲಾಪ್ರದರ್ಶನ ನೀಡಿದವು. ಮಾಳಿಂಗರಾಯ ದೇವರ ದೇವಸ್ಥಾನದ ಪೂಜ್ಯರಾದ ಕುಮಾರ್ ಗುರುಪ್ರಸಾದ್ ಸ್ವಾಮೀಜಿ ಸ್ವಾಗತಿಸಿದರು. ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಕಾರ್ಯಕರ್ತ ಎಲ್ ಶ್ರೀನಿವಾಸ್ ಪ್ರಸಾದ್ ವಂದಿಸಿದರು.ಬಂದ ಭಕ್ತಸ್ತೋಮಕ್ಕೆ ಪ್ರಸಾದ ವಿತರಣೆಯಾಯಿತು‌ ನಂತರ ಮಂಗಲದೊಂದಿಗೆ ಪುರಾಣವು ಹಾಗೂ ಸಂಸ್ಕೃತಿ ಸಂಭ್ರಮವು ಸಂಪನ್ನಗೊಂಡಿತು.

  • ಕರುನಾಡ ಕಂದ ಪತ್ರಿಕೆ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!