ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ತಾಲೂಕು ಅಧ್ಯಕ್ಷರಾಗಿ ಮರಿಯಪ್ಪ ಪದಗ್ರಹಣ

ಬಳ್ಳಾರಿ / ಕಂಪ್ಲಿ : ಪಟ್ಟಣದ ಅತಿಥಿ ಗೃಹದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾಜ ಸೇವಾ ಕಾರ್ಯಕರ್ತರ ವೇದಿಕೆಯ ಸಂಘಟನಾ ಸಭೆ ಹಾಗೂ ತಾಲೂಕು ಘಟಕದ ಆಯ್ಕೆ ಸಮಾರಂಭ ನಡೆಯಿತು.
ವೇದಿಕೆಯ ರಾಜ್ಯ ಕಾರ್ಯದರ್ಶಿ ಡಾ.ರಾಜಕುಮಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾತಂತ್ರ್ಯ, ಸಹೋದರತೆ, ಸಮಾನತೆಗಾಗಿ ಮತ್ತು ಜನರ ಧ್ವನಿಯಾಗಿ ಕೆಲಸ ಮಾಡುವ ಧ್ಯೇಯ ಹೊಂದಿದೆ. ನೂತನ ಪದಾಧಿಕಾರಿಗಳು ವೇದಿಕೆಯ ಏಳಿಗೆಗೆ ಹಾಗೂ ಜನಪರ ಸೇವಾ ಕಾರ್ಯ ಮಾಡಲು ಮುಂದಾಗಬೇಕು ಎಂದರು.
ನಂತರ ಮುಖಂಡ ವೀರಭದ್ರಗೌಡ ಮಾತನಾಡಿ, ಹುಟ್ಟು ಸಾವಿನ ಮಧ್ಯದಲ್ಲಿರುವ ಜೀವನದಲ್ಲಿ ಏನಾದರೊಂದು ಸಾಧನೆ ಮಾಡಿದರೆ ಮಾತ್ರ ಸಾಧನೆಗಳು ಅವಿಸ್ಮರಣೆಯಾಗಿ ಉಳಿಯಲು ಸಾಧ್ಯ. ವೇದಿಕೆಯ ಧ್ಯೇಯ ಉದ್ದೇಶಗಳು ಕಟ್ಟಕಡೆಯ ಮನುಷ್ಯನಿಗೆ ಸೌಲಭ್ಯಗಳೊಂದಿಗೆ ಒದಗಿಸಿ ಕೊಡುವ ಜೊತೆಗೆ ಜನರ ಸಂಕಷ್ಟವನ್ನು ಆಲಿಸಿ, ಹೋರಾಟದ ಮೂಲಕ ಪರಿಸರಿಸಬೇಕಾಗಿದೆ. ಎಲ್ಲರೂ ಒಗ್ಗೂಡಿ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಸಮಾಜಕ್ಕೆ ನ್ಯಾಯ ಒದಗಿಸಿಕೊಡಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಪಿಎಸ್‌ಐ ಬಸವರಾಜ, ಮುಖಂಡರಾದ ಬಿ.ರಮೇಶ ಉಪ್ಪಾರ, ಷಣ್ಮುಕಪ್ಪ, ಎನ್.ಬಸವರಾಜ ಸೇರಿದಂತೆ ಇತರರು ಇದ್ದರು.
ಆಯ್ಕೆ: ಸಮಾಜ ಸೇವಾ ಕಾರ್ಯಕರ್ತರ ವೇದಿಕೆಯ ಕಂಪ್ಲಿ ತಾಲೂಕು ಘಟಕಕ್ಕೆ ಆಯ್ಕೆಗೊಂಡ ನೂತನ ಪದಾಧಿಕಾರಿಗಳು ಪದಗ್ರಹಣ ಮಾಡಿದರು, ಹೆಚ್.ಮರಿಯಪ್ಪ (ಅಧ್ಯಕ್ಷ), ಹೆಚ್.ಗೋಪಾಲ (ಪ್ರಧಾನ ಕಾರ್ಯದರ್ಶಿ), ರಿಯಾಜ್ ಅಹ್ಮದ್ (ಕಾರ್ಯದರ್ಶಿ) ಇವರು ಆಯ್ಕೆಗೊಂಡರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!