ಬಾಗಲಕೋಟೆ/ ಹುನಗುಂದ ಅನಿವಾಸಿ ಕನ್ನಡಿಗರ ಒಕ್ಕೂಟನಾವಿಕ’ (NAVika) ಸಂಸ್ಥೆಯ 2026-27ನೇ ಸಾಲಿನ ಕಾರ್ಯ ಯೋಜನೆಗಳ ಘೋಷಣೆ ಕುರಿತ ಪತ್ರಿಕಾಗೋಷ್ಠಿ ಬೆಂಗಳೂರಿನ ಪ್ರೆಸ್ ಕ್ಲಬ್ಬಿನಲ್ಲಿ ಜರುಗಲಿದೆ.
ಅಮೆರಿಕಾದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಹೆಮ್ಮೆಯ ಸಂಘಟನೆಯಾದ ‘ನಾವಿಕ’ (ನಾವೂ ವಿಶ್ವ ಕನ್ನಡಿಗರು) ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪಸರಿಸುವ ಕಾಯಕದಲ್ಲಿ ತೊಡಗಿದೆ.
ವಿಶ್ವದಾದ್ಯಂತ ಇರುವ ಕನ್ನಡಿಗರನ್ನು ಒಗ್ಗೂಡಿಸಿ, ಸಾಹಿತ್ಯಿಕ ಚಟುವಟಿಕೆಗಳ ಜೊತೆಗೆ ಯುವಜನತೆಯ ಅಭಿವೃದ್ಧಿ ಹಾಗೂ ಸಾಮಾಜಿಕ ಸಬಲೀಕರಣಕ್ಕಾಗಿ ನಾವಿಕ ಸಂಸ್ಥೆಯು ಹತ್ತಾರು ಜನೋಪಕಾರಿ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಇದೀಗ ಸಂಸ್ಥೆಯು 2026 ಮತ್ತು 2027ನೇ ಸಾಲಿನ ತನ್ನ ನೂತನ ಧ್ಯೇಯೋದ್ದೇಶಗಳು ಮತ್ತು ಕಾರ್ಯತಂತ್ರಗಳನ್ನು ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಪ್ರಕಟಿಸಲು ನಿರ್ಧರಿಸಿದೆ.
ಅಧ್ಯಕ್ಷತೆಯನ್ನು ನಾವಿಕ ಒಕ್ಕೂಟದ ಅಧ್ಯಕ್ಷೈಡಾ. ಅನ್ನಪೂರ್ಣ ಭಟ್, ಮುಖ್ಯ ಅತಿಥಿಗಳಗಳಾಗಿ ಮಾಜಿ ಸಚಿವ ಎಸ್. ಆರ್. ಪಾಟೀಲ್ ಭಾಗವಹಿಸಲಿದ್ದಾರೆ ಈ ಪತ್ರಿಕಾಗೋಷ್ಠಿಗೆ ಕನ್ನಡ ಚಿತ್ರರಂಗದ ಖ್ಯಾತ ಶ್ರೀಮತಿ ಪ್ರೇಮಾ ಸೇರಿದಂತೆ ಖ್ಯಾತ ಗಣ್ಯರು ಉಪಸ್ಥಿತರಿರುವರು.
ತಮ್ಮ ಪತ್ರಿಕೆ/ವಾಹಿನಿಯ ವರದಿಗಾರರು ಹಾಗೂ ಛಾಯಾಗ್ರಾಹಕರು ಈ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿರಬೇಕೆಂದು ಇರಬೇಕೆಂದು USA ನಾವಿಕ ಅಧ್ಯಕ್ಷೆ ಡಾ. ಅನ್ನಪೂರ್ಣ ಭಟ್ ಹಾಗೂ ನಾವಿಕ ಯುಎಸ್ಎ ಕರ್ನಾಟಕ ಸರ್ಕಾರಿ ಸಂಪರ್ಕ ಸಮಿತಿ ಅಧ್ಯಕ್ಷ ಗೌರಿಶಂಕರ ರಂಗನಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ




















