ಬೆಂಗಳೂರು: ಮಾತಿನ ಮನೆಯ ವಿದುಷಿ ಎಂ ಎಸ್ ಸಂಜನ ರಾವ್ ಅವರಿಂದ ಅಮೃತ ಗಾನ ಗಾಯನ ಕಾರ್ಯಕ್ರಮವು ಇತ್ತೀಚೆಗೆ ಚಾಮರಾಜಪೇಟೆಯ ಕಚೇರಿಯಲ್ಲಿ ಯಶಸ್ವಿಯಾಗಿ ನಡೆಯಿತು.
ಗೋಡ್ಖಿಂಡಿ ಮನೆತನದ ಶಿಷ್ಯೆಯಾಗಿ ಸಂಜನಾ ಅವರು ತಮ್ಮ ಗುರುಗಳಾದ ವಿದ್ವಾನ್ ಕಿರಣ್ ಗೋಡ್ಖಿಂಡಿಯವರ ಸಮ್ಮುಖದಲ್ಲಿ ಅದ್ಭುತವಾದ ಗಾಯನದಿಂದ ಎಲ್ಲರನ್ನೂ ಸೆಳೆದಿದ್ದರು.
ಇವರೊಂದಿಗೆ ವಾದ್ಯ ಸಹಕಾರದಲ್ಲಿ ವಿದ್ವಾನ್ ಪ್ರಹ್ಲಾದ್ ದೇಶಪಾಂಡೆ, ವಿದ್ವಾನ್ ಪ್ರಬೋದ್ ಶ್ಯಾಂ ಆನೂರು ಹಾಗೂ ವಿದ್ವಾನ್ ಮೋದಕ್ ಇದ್ದರು.
ವಿದ್ವಾನ್ ಕಿರಣ್ ಗೋಡ್ಖಿಂಡಿಯವರು ಸಂಜನಾ ಅವರಿಗೆ ಹಾಗೂ ೧೨೫ರ ಸನಿಹದಲ್ಲಿರುವ ಮಾತಿನ ಮನೆಗೆ ಶುಭ ಹಾರೈಸಿದರು.
ಕೊನೆಯಲ್ಲಿ ವಿದ್ವಾನ್ ಗೋಡ್ಖಿಂಡಿಯವರೂ ಸೇರಿದಂತೆ ಎಲ್ಲ ಕಲಾವಿದರನ್ನೂ ಮಾತಿನ ಮನೆ ಪರವಾಗಿ ರಾ ಸು ವೆಂಕಟೇಶ, ಸತ್ಯಪ್ರಸಾದ್ NAL ಗೌರವಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶೈಲಸುತೆ ರಂಜಿತಾ ನಿರ್ವಹಿಸಿದರು.
ವರದಿ: ಕೊಡಕ್ಕಲ್ ಶಿವಪ್ರಸಾದ್




















