
ಬಳ್ಳಾರಿ / ಕಂಪ್ಲಿ : ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಮಜಾಲೀಸ್ ಟಿಪ್ಪು ಸುಲ್ತಾನ್ ಸಂಘಟನೆಯ ತಾಲ್ಲೂಕು ಘಟಕವನ್ನು ಪ್ರಾರಂಭಿಸಲಾಯಿತು. ಕಂಪ್ಲಿ ತಾಲೂಕು ಮಜಾಲೀಸ್ ಟಿಪ್ಪು ಸುಲ್ತಾನ್ ಸಂಘಟನೆಯ ಕಂಪ್ಲಿ ತಾಲೂಕು ಅಧ್ಯಕ್ಷರಾಗಿ ಎಂ. ಮೆಹಬೂಬ್ ಅವರನ್ನು ಸರ್ವಾನುಮತಿಯಿಂದ ಆಯ್ಕೆ ಮಾಡಿ ವಿಜಯನಗರ ಜಿಲ್ಲಾ ಘಟಕ ಅಧ್ಯಕ್ಷರ ಇರ್ಫಾನ್ ರವರು ಘೋಷಣೆ ಮಾಡಿ ಆದೇಶ ಪತ್ರ ನೀಡಿ ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ಸೋಮಲಾಪುರ ಗ್ರಾಮ ಘಟಕಗಳ ನೇಮಕ ಹಾಗೂ ಸಂಘ ರಚನೆ ಮಾಡಿ ಆದೇಶ ಪತ್ರ ನೀಡಲಾಯಿತು.
ವಿಜಯನಗರ ಜಿಲ್ಲಾ ಘಟಕ ಅಧ್ಯಕ್ಷರ ಇರ್ಫಾನ್ ಕಟಿಗಿ ಮಾತನಾಡಿ ಸಮಾಜಮುಖಿ ಕಾರ್ಯಗಳಲ್ಲಿ ನಮ್ಮ ಸಂಘಟನೆ ತೊಡಗಿಸಿಕೊಂಡಿದೆ.
ಶಿಕ್ಷಣ ಮತ್ತು ಸಾಕ್ಷರತೆ ವಿದ್ಯಾಭ್ಯಾಸಕ್ಕೆ ನೆರವು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಆರೋಗ್ಯ ಮತ್ತು ವೈದ್ಯಕೀಯ ಸೇವೆ,
ನಿಯಮಿತವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸುವುದು. ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಸಬಲೀಕರಣಕ್ಕೆ ಒತ್ತು ನೀಡುವದು, ಮಹಿಳೆಯರಿಗೆ ಸ್ವಯಂ ಉದ್ಯೋಗ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
ಸಮುದಾಯ ಸೇವೆ ಮತ್ತು ಅಭಿವೃದ್ಧಿ
ದೀನದಲಿತರ ಸೇವಾ ಕಾರ್ಯಗಳನ್ನು ನಿರ್ವಹಿಸಲಾಗುವುದು ಎಂದರು.
ನೂತನ ಕಂಪ್ಲಿ ತಾಲೂಕು ಅಧ್ಯಕ್ಷ ಎಂ. ಮೆಹಬೂಬ್ ಮಾತನಾಡಿ ಸಮಾಜಗಾಗಿ ಏಳಿಗೆ ಮತ್ತು ಸಮಾಜಸೇವೆ, ಅನ್ಯಾಯ ವಿರುದ್ದ ಹೋರಾಟ ಹಾಗೂ ಸಂಘಟನೆ ಬಲವನ್ನು ಮಾಡಿ ಸಮಾಜಕ್ಕೆ ಒಳ್ಳೆ ಕಾರ್ಯಗಳನ್ನು ನಿರ್ವಹಿಸುತ್ತೇನೆ ಎಂದರು.
ಸೋಮಲಾಪುರ ಗ್ರಾಮ ಘಟಕದ ಅಧ್ಯಕ್ಷರಾಗಿ ಮೆಹಬೂಬ್, ಉಪಾಧ್ಯಕ್ಷರಾಗಿ ಇಮಾಮ್ ಹುಸೈನ್,
ಪ್ರದಾನ ಕಾರ್ಯದರ್ಶಿಯಾಗಿ ಮೊಹಮ್ಮದ್ ರಫೀಕ್,
ಕಾರ್ಯದರ್ಶಿಯಾಗಿ ರಾಜಾಭಕ್ಷಿ
ಖಜಾಂಚಿ ಎಂ. ಮೌಲಾಸಾಬ್,
ಇತರರನ್ನು ಸದ್ಯಸರಾಗಿ ನೇಮಿಸಲಾಯಿತು.
ವರದಿ : ಜಿಲಾನಸಾಬ್ ಬಡಿಗೇರ್



















