ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿಜೃಂಭಣೆಯಿಂದ ಜರುಗಿದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಭವ್ಯವಾದ ಅಶ್ವಾರೂಢ ಪುತ್ಥಳಿ ಅನಾವರಣ ಕಾರ್ಯಕ್ರಮ

ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹತ್ಯಾಳ ಗ್ರಾಮದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಭವ್ಯವಾದ ಅಶ್ವಾರೂಢ ಪುತ್ಥಳಿ ಅನಾವರಣ ಕಾರ್ಯಕ್ರಮ ಜರುಗಿತು.
ಪುತ್ಥಳಿ ಅನಾವರಣದ ಉದ್ಘಾಟಕರು ಷ.ಬ್ರ.ಡಾ. ಚನ್ನವೀರ ಶಿವಾಚಾರ್ಯರು ಹಿರೇಮಠ ಸುಕ್ಷೇತ್ರ ಹಾರಕೂಡ ಇವರ ಅಮೃತಹಸ್ತದಿಂದ ನೆರವೇರಿತು.
ಈ ಭವ್ಯ ಕಾರ್ಯಕ್ರಮದ ಅಧ್ಯಕ್ಷರಾಗಿ ಬಸವಕಲ್ಯಾಣ ಶಾಸಕರಾದ ಮಾನ್ಯ ಶ್ರೀ ಶರಣು ಸಲಗರ ರವರು ಭಾಗಿಯಾಗಿದ್ದರು.
ಪ್ರಮುಖ ಅತಿಥಿಗಳಾಗಿ ಶ್ರೀ ಬಾಬು ಹೊನ್ನಾನಾಯಕ ಕಾಡಾ ಅಧ್ಯಕ್ಷರು, ಶ್ರೀ ಪದ್ಮಾಕರ ಪಾಟೀಲ ಮಾಜಿ ಜಿ.ಪಂ. ಅಧ್ಯಕ್ಷರು ಬೀದರ, ಶ್ರೀ ಅಂಗದರಾವ ಜಗತಾಪ ಮರಾಠಾ ಸಮಾಜ ಮುಖಂಡರು ಬಸವಕಲ್ಯಾಣ, ಶ್ರೀ ಅನಿಲ ಭುಸಾರೆ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರು ಬೀದರ, ಶ್ರೀ ಜ್ಞಾನೇಶ್ವರ ಮುಳೆ ಬಿ.ಜೆ.ಪಿ. ತಾಲೂಕು ಅಧ್ಯಕ್ಷರು ಬಸವಕಲ್ಯಾಣ, ಶ್ರಿ ತಾತೇರಾವ ಪಾಟೀಲ ಮಾಜಿ ಗ್ರಾಂ.ಪಂ. ಅಧ್ಯಕ್ಷರು ಇಸ್ಲಾಂಪೂರ, ಶ್ರೀ ಓಂಪ್ರಕಾಶ ಪಾಟೀಲ , ರಾಜಕುಮಾರ ಸಿರಗಾಪೂರ, ಸಿದ್ರಾಮಪ್ಪ ಗುದಗೆ, ಸದಾನಂದ ಪಾಟೀಲ, ವಿಕಾಸ ಪಾಟೀಲ, ಸಿದ್ದು ಬಿರಾದಾರ, ಗ್ರಾಮದ ಮುಖಂಡರುಗಳಾದ ದಶರಥ ಪಾಟೀಲ, ಶಶಿಕಾಂತ ಪಾಟೀಲ, ಹಣಮಂತ ಮೂಲಗೆ ಸೇರಿದಂತೆ, ಮಂಠಾಳ ವೃತ್ತ ನಿರೀಕ್ಷಕರಾದ ಅಮೂಲ ಕಾಳೇ, ಮುಡಬಿ ಪಿ.ಎಸ್.ಐ. ಜೈಶ್ರೀ ಹೊಡಲ್‌ ಸೇರಿದಂತೆ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ವರದಿ : ಶ್ರೀನಿವಾಸ ಬಿರಾದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!