
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಡಿ ಪಾಳ್ಯ ಹೋಬಳಿಯ ಬಿ ಬೊಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದೇನಹಳ್ಳಿ ಗ್ರಾಮದಲ್ಲಿ 500 ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದು, ಈ ಗ್ರಾಮಕ್ಕೆ ಹೋಗಲು ಮತ್ತು ಬರಲು ಬಸ್ ವ್ಯವಸ್ಥೆ ಇಲ್ಲ. ಪ್ರತಿದಿನ ಕೆಲಸ, ಶಾಲೆ, ಆಸ್ಪತ್ರೆಗಳು ಮತ್ತು ಇತರ ಅಗತ್ಯ ಕೆಲಸಗಳಿಗಾಗಿ ಗ್ರಾಮದ ಹೊರಗೆ, ನಗರಗಳಿಗೆ ಹೋಗುವವರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.
ಆದ್ದರಿಂದ, ಸಿದ್ದೇನಹಳ್ಳಿ ಗ್ರಾಮಕ್ಕೆ ಬಸ್ ಸೇವೆಯನ್ನು ಪ್ರಾರಂಭಿಸಲು ಸಿದ್ದೇನಹಳ್ಳಿ ಕ್ರಾಸ್ ಬಳಿ ಹೋಗುವ ಎಲ್ಲಾ ಬಸ್ಗಳನ್ನು ನಿಲ್ಲಿಸಲು ಸೂಚಿಸಲು ಮತ್ತು ಗೌರಿಬಿದನೂರಿನಿಂದ ವೆಂಕಟಾಪುರ ಮಾರ್ಗಕ್ಕೆ ಮತ್ತು ಗೌರಿಬಿದನೂರಿನಿಂದ ಗುಂಡ್ಲಹಳ್ಳಿ ಮಾರ್ಗಕ್ಕೆ ಹೋಗುವ ಎಲ್ಲಾ ಬಸ್ಗಳು ಸಿದ್ದೇನಹಳ್ಳಿ ಗ್ರಾಮಕ್ಕೆ ಬಂದು ಹೋಗಲು ಬಸ್ ಸೇವೆಯನ್ನು ಒದಗಿಸಲು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ವಕೀಲರಾದ ಕಿರಣ್ ಕೆ. ಟಿ ರವರು ಮನವಿಯನ್ನು ಸಲ್ಲಿಸಿರುತ್ತಾರೆ.
ಹಾಗೂ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಈ ಕುರಿತು ಶೀಘ್ರವಾಗಿ ಕ್ರಮ ಕೈಗೊಂಡು ಗ್ರಾಮದ ಜನತೆಗೆ ಅನುಕೂಲ ಮಾಡಿಕೊಡಬೇಕಾಗಿ
ವಕೀಲರಾದ ಕಿರಣ್ ಕೆ. ಟಿ. ಅವರು ಈ ಮೂಲಕ ಒತ್ತಾಯಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ



















