ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೆಸ್ಕಾಂ ವಿಭಾಗೀಯ ಕಚೇರಿಯ ಮುಂದೆ ಇಂದು ಅಧಿಕಾರಿಗಳು, ನೌಕರರು, ವಿವಿಧ ಹಂತಗಳ ಎಲ್ಲಾ ಪದಾಧಿಕಾರಿಗಳು, ಪವರ್ ಮೆನ್ ಗಳು ಸೇರಿಕೊಂಡು ಕೇಂದ್ರ ಸರ್ಕಾರವು ವಿದ್ಯುತ್ ಕಾಯ್ದೆ ತಿದ್ದುಪಡಿ (NCCOEE ) ಜಾರಿಗೆ ತರುವ ಹಿನ್ನೆಲೆಯಲ್ಲಿ, ವಿದ್ಯುತ್ ಕ್ಷೇತ್ರದ ಖಾಸಗೀಕರಣ ಕ್ರಮವನ್ನು ವಿರೋಧಿಸಿ ನೌಕರರ ಒಕ್ಕೂಟದಿಂದ ಒಗ್ಗಟ್ಟಾಗಿ ಶಾಂತಿಯುತ ಪ್ರತಿಭಟನೆಯನ್ನು ನಡೆಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಮಿತಿಯ ಸದಸ್ಯರಾದ ಪ್ರಶಾಂತಗೌಡ. ವೈ. ಪಾಟೀಲ್, ಛಲವಾದಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಚಿದಾನಂದ ಎಂ. ಕಾಂಬಳೆ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಎಸ್. ಬೀ.ಶಿರಗೂರ, ಎಸ್. ಆರ್. ಮೇಡೆಗಾರ್, ಪಿ.ಎಂ. ಸಾಗನೂರು ಹಾಗೂ ಎಲ್ಲಾ ಸಂಘ ಸಂಸ್ಥೆಯ ಪದಾಧಿಕಾರಿಗಳು, ಶಾಖಾಧಿಕಾರಿಗಳು, ಎಲ್ಲಾ ಸಿಬ್ಬಂದಿ ವರ್ಗದವರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.



















