ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿನೋಬನಗರದ ಪ್ರಸಿದ್ಧ ಶಿವಾಲಯ ಸನ್ನಿಧಿಯಲ್ಲಿ ಶಿವರಾತ್ರಿಯಂದು ವಿಶೇಷ ದರ್ಶನಕ್ಕೆ ಅವಕಾಶ

ಶಿವಮೊಗ್ಗ : ಜಾತಿ ಮತ ಪಂಥಗಳನ್ನು ಮೀರಿದ ವಿನೋಬ ನಗರದ ಶ್ರೀ ಶಿವಾಲಯ ದೇವಸ್ಥಾನ ಸರ್ವರಿಗೂ ಶಿವಲಿಂಗವನ್ನು ಸ್ಪರ್ಶಿಸಿ ಪೂಜೆ ಸಲ್ಲಿಸಲು ಮುಕ್ತ ಅವಕಾಶವನ್ನು ನೀಡಿರುವ ಸರ್ವ ಸಮನ್ವಯ ಕೇಂದ್ರ ವಿನೋಬನಗದ ಶ್ರೀ ಶಿವಾಲಯ ದೇವಸ್ಥಾನ,ನಗರದ ಪ್ರಮುಖ ಧಾರ್ಮಿಕ ತಾಣಗಳ ಪೈಕಿ ವಿಶಿಷ್ಟವಾಗಿ ಗುರುತಿಸಿಕೊಂಡಿರುವ ಶ್ರೀ ಶಿವಾಲಯ ದೇವಸ್ಥಾನ ಶಿವ ಭಕ್ತರ ಪಾಲಿಗೆ ಶ್ರದ್ಧೆಯ ತಾಣವಾಗಿದೆ.
ಕಳೆದ 31ವರ್ಷಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಭಕ್ತರನ್ನು ತನ್ನತ್ತ ಸೆಳೆಯುತ್ತಿರುವ ವಿನೋಬನಗರ ಶ್ರೀ ಶಿವಾಲಯದಲ್ಲಿ ಜತಿ ಮತ ಭೇದವಿಲ್ಲದೆ ಎಲ್ಲಾ ಜಾತಿ ಜನಾಂಗದ ಭಕ್ತರು ಪ್ರತಿ ನಿತ್ಯ ದರ್ಶನವನ್ನು ಪಡೆಯುತ್ತಾರೆ, ಸೋಮವಾರ, ಹುಣ್ಣಿಮೆ, ಅಮಾವಾಸ್ಯೆ, ಹಬ್ಬದ ದಿನಗಳಲ್ಲಿ ಹಾಗೂ ಶ್ರಾವಣ, ಕಾರ್ತಿಕ ಮಾಸದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ.

ಈ ಎಲ್ಲಾ ದಿನಗಳಲ್ಲಿ ಶಿವನಿಗೆ ಮಾಡಲಾಗುವ ವಿಶೇಷ ಅಲಂಕಾರಗಳು ಶಿವಮೊಗ್ಗದ ಎಲ್ಲಾ ಭಕ್ತರ ಗಮನವನ್ನು ಸೆಳೆದಿದೆ, ಅಭಿಷೇಕ ಮಾಡಿಸಲು ಇಚ್ಚಿಸುವ ಎಲ್ಲಾ ಜಾತಿ ವರ್ಗದ ಭಕ್ತರಿಗೂ ಗರ್ಭಗುಡಿಯ ಶಿವಲಿಂಗ ಮೂರ್ತಿ ಯನ್ನು ಸ್ಪರ್ಶಿಸಿ ಪೂಜೆ ಸಲ್ಲಿಸಲು ಅವಕಾಶವಿದೆ, ಕಾಶಿಯಲ್ಲಿಯೂ ಇಂತಹ ಆಚರಣ ಪದ್ಧತಿ ಇದೆ, ಶಿವಲಿಂಗವನ್ನು ಸ್ಪರ್ಶಿಸುವುದರಿಂದ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ, ಪಂಚೆ ತೊಟ್ಟು ಶರ್ಟು ತೆಗೆದು ಸಾಮಾನ್ಯರು ಕೂಡ ಶಿವಲಿಂಗವನ್ನು ಸ್ಪರ್ಶಿಸಿ ಪೂಜೆ ಸಲ್ಲಿಸಬಹುದು.
ಇಲ್ಲಿ ಪ್ರತಿ ಸೋಮವಾರ ಭಕ್ತರಿಗೆ ಪ್ರಸಾದ ವಿನಿಯೋಗ ಇರುತ್ತದೆ, ಸೋಮವಾರ ಭಕ್ತರು ಬೇಡಿ ನಿಂತು ಹೂ ಅಪ್ಪಣೆಯನ್ನು ಪಡೆಯುತ್ತಾರೆ, ವಿಶೇಷ ದಿನಗಳಲ್ಲಿ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಜನಾಂಗದವರು ಸಹ ಬಂಧು ಪೂಜೆ ಸಲ್ಲಿಸುವುದು ಹಾಗೂ ಶಿವರಾತ್ರಿ ದಿನ 15ರಿಂದ 20 ಸಾವಿರ ಶಿವಭಕ್ತರು ಆಗಮಿಸಿ ದೇವರ ದರ್ಶನವನ್ನು ಪಡೆಯುವುದು ವಿಶೇಷವಾಗಿದೆ. ಮಹಾ ಶಿವರಾತ್ರಿ ನಿಮಿತ್ತ ವಿಶೇಷ ಪೂಜಾ ಕಾರ್ಯಕ್ರಮಗಳು ಫೆ. 15ರ ಭಾನುವಾರ ಬೆಳಿಗ್ಗೆ 5ಗಂಟೆಗೆ ರುದ್ರಾಭಿಷೇಕದೊಂದಿಗೆ ಪ್ರಾರಂಭವಾಗುವ ಮೂಲಕ ಸಾರ್ವಜನಿಕರ ಧರ್ಶನಕ್ಕೆ ಅಂದು ರಾತ್ರಿ 12ರವರೆಗೆ ಅವಕಾಶವಿದ್ದು, ಪ್ರಸಾದ ವಿನಯೋಗ ಕೂಡ ನಡೆಯಲಿದೆ.
ಫೆ. 16ರ ಸೋಮವಾರ ಸ್ವಾಮಿಗೆ ವಿಶೇಷ ರುದ್ರಾಭಿಷೇಕದೊಂದಿಗೆ ಶಿವರಾತ್ರಿಯನ್ನು ಸಂಪನ್ನಗೊಳಿಸಲಾಗುವುದು.

ವರದಿ: ಕೊಡಕ್ಕಲ್ ಶಿವಪ್ರಸಾದ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!