ಫೆಬ್ರುವರಿ 14ರಂದು ಹಾವೇರಿಯಲ್ಲಿ ನಡೆಯಲಿರುವ ಐತಿಹಾಸಿಕ ಭೂ ಗ್ಯಾರಂಟಿ ಸಾಧನಾ ಸಮಾವೇಶದ ಹಿನ್ನೆಲೆದಲ್ಲಿ, ಇಂದು ದಿನಾಂಕ 12-02-2026, ಬೆಳಿಗ್ಗೆ 11:00 ಗಂಟೆಗೆ, ಹಾವೇರಿ ನಗರ ಪಿ.ಬಿ. ರಸ್ತೆ ಅಜ್ಜಯನ ಗುಡಿ ಹತ್ತಿರ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆ ನಡೆಯಿತು.
ಈ ಮಹತ್ವದ ಪೂರ್ವಭಾವಿ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಶಿವಾನಂದ ಪಾಟೀಲ ಅವರ ನೇತೃತ್ವದಲ್ಲಿ ಕರೆಯಲಾಗಿದ್ದು, ಸಮಾವೇಶದ ಸಿದ್ಧತೆ, ಸಂಘಟನೆ ಹಾಗೂ ಯಶಸ್ಸಿಗೆ ಅಗತ್ಯವಾದ ಮಾರ್ಗಸೂಚಿಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು.
ಸಭೆಯಲ್ಲಿ ಪ್ರಮುಖವಾಗಿ ಹೆಸ್ಕಾಂ ನಿಗಮದ ಅಧ್ಯಕ್ಷರು, ಜನಪ್ರಿಯ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಸೈಯದ್ ಅಜಿಮಪೀರ ಖಾದ್ರಿರವರು ,ಕರ್ನಾಟಕ ಸರ್ಕಾರದ, ಹಾವೇರಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀ ಸಂಜೀವ ಕುಮಾರ ನೀರಲಗಿ ಶ್ರೀ ಶಂಕರ ಮೆಹರವಾಡೆ (ವಕೀಲರು), ಹಾವೇರಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಹಾವೇರಿ ಜಿಲ್ಲಾಧಿಕಾರಿಗಳಾದ ಶ್ರೀ ಮಹಾಂತೇಶ ದಾನಮ್ಮನವರು, ಕೆಪಿಸಿಸಿ ಜಿಲ್ಲಾ ವಕ್ತಾರರಾದ ಡಾ. ಸಂಜಯಗಾಂಧಿ, ಪು. ಸಂಜೀವಣ್ಣನವರು, ಶೇಖಪ್ಪ ಡಿ. ಮಾದರ – ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಎಸ್ಸಿ ಘಟಕ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಸಭೆಯಲ್ಲಿ ಫೆಬ್ರುವರಿ 14ರಂದು ನಡೆಯುವ ಸಾಧನಾ ಸಮಾವೇಶವನ್ನು ಐತಿಹಾಸಿಕ ಯಶಸ್ಸು ಮಾಡಬೇಕೆಂಬ ದೃಢ ಸಂಕಲ್ಪವನ್ನು ಎಲ್ಲಾ ನಾಯಕರು ವ್ಯಕ್ತಪಡಿಸಿದರು.
ವರದಿ ಬಸವರಾಜ ಎಸ್. ಎನ್.



















