ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜನರನ್ನು ಆಕರ್ಷಿಸಿದ ಫಲಪುಷ್ಪ ಪ್ರದರ್ಶನ : ರಂಗೋಲಿಯಲ್ಲಿ ಮೂಡಿ ಬಂದ ಮಹನೀಯರ ಚಿತ್ರ : ಸೇವಂತಿಗಿಯಲ್ಲಿ ಗಂಡುಗಲಿ ಕುಮಾರರಾಮನ ಕೋಟೆ

ಬಳ್ಳಾರಿ / ಕಂಪ್ಲಿ : ಕಂಪಲಿ ನಾಡಿನಲ್ಲಿ ಅದ್ಧೂರಿಯಾಗಿ ನಡೆಯುತ್ತಿರುವ ಕಂಪ್ಲಿ ಉತ್ಸವದಲ್ಲಿ ಫಲಪುಷ್ಪ ಪ್ರದರ್ಶನ ಮತ್ತು ಸಿರಿಧಾನ್ಯ ಮೇಳ ಮುಖ್ಯ ಆಕರ್ಷಣೆಯಾಗಿರುವುದು ಕಂಡು ಬಂತು.
ಕಂಪ್ಲಿ ಉತ್ಸವ ಹಿನ್ನಲೆ ಇಲ್ಲಿನ ಸಕ್ಕರೆ ಕಾರ್ಖಾನೆಯ ಮುಖ್ಯ ವೇದಿಕೆಯ ಎದುರುಗಡೆಯ ಆವರಣದಲ್ಲಿ ತೋಟಗಾರಿಕೆ, ಕೃಷಿ, ಆರೋಗ್ಯ ಸೇರಿದಂತೆ ನಾನಾ ಇಲಾಖೆಯ ವಸ್ತು ಪ್ರದರ್ಶನ ನಡೆಯಿತು.


ಸೇವಂತಿಗಿ ಹೂವುಗಳಿಂದ ಗಂಡುಗಲಿ ಕುಮಾರರಾಮನ ಕೋಟೆ ಸ್ಥಾಪಿಸುವ ಜೊತೆಗೆ ಐತಿಹಾಸಿಕ ಸೋಮಪ್ಪ ಮೂರ್ತಿಯನ್ನು ನಿರ್ಮಿಸಲಾಗಿದೆ. ಸಿರಿಧಾನ್ಯಗಳಿಂದ ನಾನಾ ಕಲಾಕೃತಿಯನ್ನು ನಿರ್ಮಿಸಲಾಗಿದೆ.
ಬುಧವಾರ ಸಂಜೆ ತುಂಗಭದ್ರಾ ಆರತಿ ಪ್ರಯುಕ್ತ ವಿಜೃಂಭಣೆಯಿಂದ ಭವ್ಯ ಮೆರವಣಿಗೆ ನಡೆದಿತ್ತು. ಗುರುವಾರದ ಉತ್ಸವದ ನಿಮಿತ್ಯ ಫಲಪುಷ್ಪ ಪ್ರದರ್ಶನ, ಸಿರಿಧಾನ್ಯ ಮೇಳ ಎಲ್ಲರ ಆಕರ್ಷಣೆಯನ್ನು ಹೆಚ್ಚಿಸಿದೆ.
ಇಲ್ಲಿನ ಪ್ರದರ್ಶನದಲ್ಲಿ ನೀರಿನ ಜಲಪಾತ ಹರಿಸುವಂತಹ ನಿಟ್ಟಿನಲ್ಲಿ ಕಲಾಕೃತಿಯೊಂದಿಗೆ ಬಿಂಬಿಸಲಾಗಿದೆ. ಅರಳಿ ಎಲೆಯಲ್ಲಿ ನಾನಾ ಕಲಾಕೃತಿಗಳು ಮೂಡಿವೆ. ತರಕಾರಿಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಒಡಮೂಡಿದ್ದಾರೆ. ಪುಷ್ಪದಲ್ಲಿ ಅಲಂಕಾರಗೊಂಡ ಚಿಟ್ಟೆ ಚಿತ್ರಪಟವಾಗಿದೆ. ಹೀಗೆ ನಾನಾ ತರದಲ್ಲಿ ಫಲಪುಷ್ಟಗಳ ಪ್ರದರ್ಶನ ನಡೆಯಿತು. ಉತ್ಸವಕ್ಕೆ ಹರಿದ ಬಂದ ಸಾಕಷ್ಟು ಜನರು, ವೀಕ್ಷಕರು ಫಲಪುಷ್ಟ ಪ್ರದರ್ಶನ ಹಾಗೂ ಸಿರಿಧಾನ್ಯ, ಆರೋಗ್ಯ ಸೇರಿದಂತೆ ಇತರೆ ಇಲಾಖೆಯ ಪ್ರದರ್ಶನವನ್ನು ಕಣ್ತುಂಬಿಕೊಂಡರು.
ಇಲ್ಲಿನ ವಸ್ತು ಪ್ರದರ್ಶನಕ್ಕೆ ಶಾಸಕ ಜೆ.ಎನ್.ಗಣೇಶ್ ಸೇರಿದಂತೆ ಗಣ್ಯರು ಚಾಲನೆ ನೀಡಿದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!