ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರ್ನಾಟಕ ಕಾವಲು ಪಡೆ ಗುಂಡ್ಲುಪೇಟೆ ತಾಲ್ಲೂಕು ಘಟಕದ ವತಿಯಿಂದ ಸಹಾಯಹಸ್ತ

ಚಾಮರಾಜನಗರ/ ಗುಂಡ್ಲುಪೇಟೆ :
ಕರ್ನಾಟಕ ಕಾವಲು ಪಡೆ ಗುಂಡ್ಲುಪೇಟೆ ತಾಲ್ಲೂಕು ಘಟಕದ ವತಿಯಿಂದ ಇಂದು ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಹೋಬಳಿಯ ವರದರಾಜ ಸ್ವಾಮಿ ದೇವಸ್ಥಾನದ ನಾಲ್ಕನೇ ಬೀದಿಯಲ್ಲಿ ವಾಸವಾಗಿರುವ ಪೂಜಾ ಎನ್ನುವ ಮಹಿಳೆಯ ಆರೋಗ್ಯದಲ್ಲಿ ಏರು ಪೇರು ಆಗಿ ತನ್ನ ಎರಡು ಕಾಲು ಕಳೆದುಕೊಂಡ ಸಹೋದರಿಗೆ ಸಂಘಟನೆ ವತಿಯಿಂದ ರೇಷನ್ ಕಿಟ್ ವಿತರಿಸುವ ಮುಖಾಂತರ ಸಹಾಯಹಸ್ತ ನೀಡಲಾಯಿತು.
ಈ ಸಂದರ್ಭದಲ್ಲಿ ಕಾವಲು ಪಡೆಯ ಗುಂಡ್ಲುಪೇಟೆ ತಾಲ್ಲೂಕು ಅಧ್ಯಕ್ಷರಾದ ಎ.ಅಬ್ದುಲ್ ಮಾಲಿಕ್ ಮಾತನಾಡಿ ಪೂಜಾ ಅನ್ನುವ ಸಹೋದರಿಯು ತನ್ನ ಎರಡು ಕಾಲುಗಳನ್ನು ಕಳೆದುಕೊಂಡು ತನ್ನ ಪತಿಯು ಕೂಡಾ ಬಸ್ ಅಪಘಾತದಲ್ಲಿ ಕಾಲು ಕಳೆದುಕೊಂಡಿರುವ ಪರಿಣಾಮ ಮನೆಯು ಇಲ್ಲದೇ ಜೀವನ ನಡೆಸುವುದಕ್ಕೆ ಆಗದೇ ತನ್ನ ಪಟ್ಟ ಮಕ್ಕಳೊಂದಿಗೆ ಕಷ್ಟಪಡುತ್ತಿದ್ದಾರೆ, ಇವರಿಗೆ ಜನಪ್ರತಿನಿಥಿಗಳು ಸಹಾಯಹಸ್ತ ಚಾಚಬೇಕೆಂದು ಮನವಿ ಮಾಡಿದರು.
ಇದೇ ವೇಳೆ ಜಿಲ್ಲಾ ಕಾರ್ಯಧ್ಯಕ್ಷರಾದ ಅಬ್ದುಲ್ ರಷೀದ್ ಮಾತನಾಡಿ ಎಲ್ಲರೂ ಈ ಸಹೋದರಿಗೆ ಸಹಾಯ ಮಾಡಿ ಎಂದರು. ತಾಲ್ಲೂಕು ಸಂಚಾಲಕರಾದ ಮುಕ್ತಿ ಕಾಲೋನಿ ಶಿವಕುಮಾರ್ ಮಾತನಾಡಿ ಧನ ಸಹಾಯ ಮಾಡಿದರು.
ಸಮಾಜ ಸೇವಕರಾದ ಮಂಟೇಲಿಂಗಾಚಾರಿ ಮಾತನಾಡಿ ಕಾವಲು ಪಡೆಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು,ತಾಲ್ಲೂಕು ಕಾರ್ಯದರ್ಶಿ ಎಸ್.ಮುಬಾರಕ್, ಸಂಚಾಲಕರಾದ ಮಿಮಿಕ್ರಿರಾಜು, ಅಬ್ದುಲ್ ಅಯ್ಯೂಬ್ ಖಾನ್ ಹಾಜರಿದ್ದರು.

ವರದಿ ಗುಂಡ್ಲುಪೇಟೆ ಕುಮಾರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!