ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹಂಪಿಯಲ್ಲಿ ಮಸ್ತ್ ಆಗಿತ್ತು ಕುಸ್ತಿ ಕಾಳಗ, ಪಟ್ಟಕ್ಕಾಗಿ ಪೈಲ್ವಾನರ ಕಾದಾಟ

ವಿಜಯನಗರ/ ಹಂಪಿ :ಭಾರತದಲ್ಲಿ ಕುಸ್ತಿಯು ಮಹಾಭಾರತದ ಕಾಲದಿಂದಲೂ ಜಾರಿಯಲ್ಲಿದ್ದು, ನಮ್ಮ ಬೇರುಗಳನ್ನು ನೆನಪಿಸುವ ಸಾಂಸ್ಕೃತಿಕ ಪರಂಪರೆಯಾಗಿದೆ.
ಹಂಪಿ ಉತ್ಸವದ ಅಂಗವಾಗಿ ನಡೆಯುವ ಕುಸ್ತಿ ಸ್ಪರ್ಧೆಗಳು (ಹಂಪಿ ಕೇಸರಿ) ಪಾರಂಪರಿಕ ಕ್ರೀಡೆಯ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು ಮಲಪನಗುಡಿ ಗ್ರಾಮದ ಬಳಿ ನಡೆದ ಈ ಸ್ಪರ್ಧೆಯಲ್ಲಿ ರಾಜ್ಯದಾದ್ಯಂತದ ನೂರಾರು ಪೈಲ್ವಾನ್‍ರು ಮಣ್ಣಿನ ಅಖಾಡದಲ್ಲಿ ಸೆಣೆಸಾಡಿದರು. ಮಹಿಳಾ ಕುಸ್ತಿ, ಗುಂಡು ಎತ್ತುವ ಸ್ಪರ್ಧೆ ಮತ್ತು ಎತ್ತಿನ ಬಂಡಿ ಗಾಲಿ ಜೋಡಣೆಯಂತಹ ದೇಸಿ ಕ್ರೀಡೆಗಳು ಇಲ್ಲಿ ಪ್ರಮುಖ ಆಕರ್ಷಣೆಯಾಗಿದ್ದವು.

ವಿವಿಧ ವಿಭಾಗಗಳ ಕುಸ್ತಿ ವಿಜೇತರ ಪಟ್ಟಿ :
ಜಿಲ್ಲಾ ಮಟ್ಟದ ಪುರುಷ ಕುಸ್ತಿ ಹಂಪಿ ಕಿಶೋರ – ಮಾರುತಿ ಹರಪನಹಳ್ಳಿ,
ಹಂಪಿ ಕುಮಾರ- ಎಮ್ ಅಂಜಿನಪ್ಪ ಹರಪನಹಳ್ಳಿ,
ಹಂಪಿ ಕೇಸರಿ – ಎನ್ ಪರಶುರಾಮ್ ಹೊಸಪೇಟೆ,
ಹಂಪಿ ಕಂಠೀರವ – ತಿಪ್ಪೇಸ್ವಾಮಿ ಹರಪನಹಳ್ಳಿ,
ಕಲ್ಯಾಣ ಕರ್ನಾಟಕ ಮಹಿಳಾ ಹಂಪಿ ಕಲ್ಯಾಣಿ – ಬಿ ತೇಜಸ್ವಿನಿ ಕಂಪ್ಲಿ ವಿಜೇತರಾದರು.

ಹಂಪಿ ಉತ್ಸವ ಕುಸ್ತಿಯ ವಿಶೇಷತೆಗಳು :
ಹಂಪಿ ಕೇಸರಿ/ಕುಮಾರ ಪಟ್ಟ: ವಿಜೇತ ಪೈಲ್ವಾನ್‍ರಿಗೆ ‘ಹಂಪಿ ಕೇಸರಿ’ ಅಥವಾ ‘ಹಂಪಿ ಕುಮಾರ’ ಎಂಬ ಪ್ರತಿಷ್ಠಿತ ಬಿರುದುಗಳನ್ನು ನೀಡಿ ಗೌರವಿಸಲಾಯಿತು.

ವಿಜಯನಗರ ಸಾಮ್ರಾಜ್ಯದ ಮಲ್ಲಯುದ್ಧದ ಸಂಪ್ರದಾಯವನ್ನು ಪ್ರತಿಬಿಂಬಿಸಿತು.

ಪೈಲ್ವಾನ್‍ರ ಭಾಗವಹಿಸುವಿಕೆ: ರಾಜ್ಯ ಮತ್ತು ರಾಷ್ಟ್ರ ಮಟ್ಟದ ನೂರಾರು ಕುಸ್ತಿಪಟುಗಳು (75ಕ್ಕೂ ಹೆಚ್ಚು) 39 ಪುರುಷ, 36 ಮಹಿಳಾ ಕುಸ್ತಿಪಟುಗಳು ಮಣ್ಣಿನ ಅಖಾಡದಲ್ಲಿ ತಮ್ಮ ಜಾಣ್ಮೆಯ ಪಟ್ಟುಗಳನ್ನು ಪ್ರದರ್ಶಿಸಿದರು.

ಮಹಿಳಾ ಕುಸ್ತಿ: ಮಹಿಳಾ ಪೈಲ್ವಾನ್‍ರು ಹೆಚ್ಚಿನ ಸಂಖ್ಯೆಯಲ್ಲಿ ಈ ಬಾರಿ ಭಾಗವಹಿಸಿ ಕುಸ್ತಿ ಸ್ಪರ್ಧೆಗಳಲ್ಲಿ ರೋಚಕ ಪ್ರದರ್ಶನ ನೀಡುದರು.

ಪ್ರೇಕ್ಷಕರು ಚಪ್ಪಾಳೆ ಮತ್ತು ಸಿಳ್ಳೆಗಳ ಮೂಲಕ ಕುಸ್ತಿಪಟುಗಳನ್ನು ಹುರಿದುಂಬಿಸಿದರು, ಒಟ್ಟಿನಲ್ಲಿ ಹಂಪಿ ಉತ್ಸವ ಗ್ರಾಮೀಣ ಸೊಗಡಿನ ರೋಮಾಂಚಕ ಅನುಭವವನ್ನು ಒದಗಿಸಿತು.

ಈ ಸಂದರ್ಭದಲ್ಲಿ ಹಂಪಿ ಉತ್ಸವ ಗ್ರಾಮೀಣ ಕ್ರೀಡಾ ಸಮಿತಿಯ ಅಧ್ಯಕ್ಷ ಉಮೇಶ್, ಸಂಚಾಲಕ ಯು. ಅಶೋಕ, ಕುಸ್ತಿ ಕ್ರೀಡಾಧಿಕಾರಿಗಳಾದ ವಿನಾಯಕ, ನಾಗರಾಜ್, ಮಮತಾ, ಬೀರಲಿಂಗಪ್ಪ, ಆಜೀಜ್ ಸೇರಿದಂತೆ ದೈಹಿಕ ಶಿಕ್ಷಕರು, ಅಪಾರ ಕ್ರೀಡಾ ಅಭಿಮಾನಿಗಳು ಹಾಜರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!