ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಿಜನಳ್ಳಿ ಸರ್ವ ರೀತಿಯಲ್ಲೂ ಅಭಿವೃದ್ಧಿ ಪಡಿಸಲು ಪ್ರಯತ್ನ : ಬಸವರಾಜ ಮತ್ತಿಮೂಡ್

ಕಲಬುರಗಿ/ಸೇಡಂ : ಬಿಜನಳ್ಳಿ ಗ್ರಾಮದ ಶರಣೆ ಕಲ್ಯಾಣಮ್ಮ – ಹರಳಯ್ಯ ದಂಪತಿಗಳು ಬಸವಣ್ಣನವರಿಗೆ ಅರ್ಪಿಸಿದ ಚೆಮ್ಮಾವುಗೆಯ ಈ ಸುಕ್ಷೇತ್ರ ಸರ್ವ ರೀತಿಯಲ್ಲೂ ಅಭಿವೃದ್ಧಿ ಪಡಿಸಲು ಪ್ರಯತ್ನ ಮಾಡುತ್ತೇನೆ ಎಂದು ಕಲಬುರ್ಗಿ ಗ್ರಾಮಾಂತರ ಕ್ಷೇತ್ರದ ಶಾಸಕರಾದ ಶ್ರೀ ಬಸವರಾಜ ಮತ್ತಿಮೂಡ್ ಹೇಳಿದರು.

ತಾಲೂಕಿನ ಬಿಜನಳ್ಳಿ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಕಲ್ಯಾಣ ನಡಿಗೆ ಮತ್ತು ಹರಳಯ್ಯ ಜ್ಯೋತಿಯಾತ್ರೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಶರಣ ತತ್ವ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಶರಣ ತತ್ವ ಸರ್ವರಿಗೂ ತಲುಪಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷರು, ಕಾರ್ಯಕ್ರಮದ ರೂವಾರಿಗಳಾದ ಶರಣ ಬಸವಕುಮಾರ ಪಾಟೀಲ ರವರು ಮಾತನಾಡಿ ಶರಣರು ನಮಗಾಗಿ ಮಾಡಿದ ತ್ಯಾಗ-ಬಲಿದಾನ ಸ್ಮರಣೆ ಮಾಡಿಕೊಳ್ಳುವ ಕಾರ್ಯಕ್ರಮ ಇದಾಗಿದೆ. ಅವರ ಸಂದೇಶಗಳನ್ನು ಮನೆ-ಮನೆಗೆ, ಮನ-ಮನಕ್ಕೆ ತಲುಪಿಸುವುದು ಇಂದಿನ ನಾಗರಿಕ ಸಮಾಜದ ಆದ್ಯ ಕರ್ತವ್ಯವಾಗಿದೆ. ಈ ಪಾದಯಾತ್ರೆಯ ಸಮಯದಲ್ಲಿ ವಿದ್ಯಾರ್ಥಿಗಳಿಗೆ ದೇಶದ ಸತ್ಪ್ರಜೆಗಳಾಗುವಂತೆ ಮಾರ್ಗದರ್ಶನ ಮಾಡಲಾಗುತ್ತದೆ. ಕೃಷಿ, ಪರಿಸರ, ಆರೋಗ್ಯ, ಸೌಹಾರ್ದತೆ, ಭಾವೈಕ್ಯತೆ, ಸೇವೆ, ಸಹಕಾರ ಮುಂತಾದ ಮಹತ್ವಪೂರ್ಣ ವಿಷಯಗಳ ಕುರಿತು ಉಪನ್ಯಾಸ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಎಲ್ಲರೂ ಎಲ್ಲರನ್ನೂ ಪ್ರೀತಿಸುವ ಮತ್ತು ಗೌರವಿಸುವ ವಿಶ್ವ ಕುಟುಂಬತ್ವದ ಭಾವ ಬೆಳೆಸುವುದು, ‘ದುರ್ಗುಣ ದುಶ್ಚಟಗಳ ಭಿಕ್ಷೆ, ಸದ್ಗುಣ ಸನ್ನಡತೆಯ ದೀಕ್ಷೆ’ಯ ಸಂಕಲ್ಪ ಹೊತ್ತು ದುರ್ಗುಣ ದುಶ್ಚಟಗಳ ಭಿಕ್ಷೆ ಕೇಳುವುದು ಸೇರಿದಂತೆ ಮುಖ್ಯವಾಗಿ ಬಿಜನಳ್ಳಿಯ ಅಭಿವೃದ್ಧಿ ಯಾತ್ರೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಪ್ರತಿದಿನ ಸಾಯಂಕಾಲ ೫ ಗಂಟೆಗೆ ಗ್ರಾಮಸ್ಥರೊಂದಿಗೆ ಗ್ರಾಮದಲ್ಲಿ ‘ಕಲ್ಯಾಣ ನಡಿಗೆ’, ಸಾಯಂಕಾಲ ೬ ಗಂಟೆಗೆ ಸಾರ್ವಜನಿಕ ಸಮಾರಂಭ ಉಪನ್ಯಾಸ ಕಾರ್ಯಕ್ರಮ, ರಾತ್ರಿ ೮ ಗಂಟೆಗೆ ‘ಕಲ್ಯಾಣ ಕ್ರಾಂತಿ’ ನಾಟಕ ಜರುಗಲಿದೆ ಎಂದು ತಿಳಿಸಿದರು.

ಪೂಜ್ಯ ಶಂಕರಲಿಂಗ ಸ್ವಾಮೀಜಿ ಧುಮ್ಮನಸೂರ್ ರವರು ಮಾತನಾಡಿ ಈ ಪಾದಯಾತ್ರೆ ಸಮಾನತೆಯ ಸಾರುವ ಐತಿಹಾಸಿಕ ನಡಿಗೆಯಾಗಿದೆ. ಎಲ್ಲರೂ ಒಗ್ಗಟ್ಟಾಗಿ ಲಿಂಗಾಯತ ಧರ್ಮ ಕಟ್ಟಬೇಕು ಎಂದರು.

ಸಾನಿಧ್ಯ ವಹಿಸಿದ್ದ ಪರಮ ಪೂಜ್ಯ ಬಸವಪ್ರಭು ಸ್ವಾಮೀಜಿ ಗುಣತೀರ್ಥವಾಡಿ ಬಸವಕಲ್ಯಾಣ ರವರು ಮಾತನಾಡಿ ಲಿಂಗಾಯತ ಧರ್ಮೀಯರ ಪವಿತ್ರ ಕ್ಷೇತ್ರ ಬಿಜನಳ್ಳಿ ಗ್ರಾಮವಾಗಿದೆ. ಲಿಂಗಾಯತ ಧರ್ಮಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಹರಳಯ್ಯ ದಂಪತಿಗಳು ಇಡೀ ಮನುಕುಲಕ್ಕೆ ಮಾದರಿ. ಶರಣರ ವಚನ ಸಾಹಿತ್ಯ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂದಿನ ನಾಗರಿಕರು ಸದಾ ಕಾಲ ಶ್ರಮಿಸಬೇಕು. ಮೌಲ್ಯಾಧಾರಿತ ಮಾನವೀಯತೆಯ ಸಂದೇಶ ಸಾರುವ ಕೆಲಸ ಈ ನಡಿಗೆ ಮುಖ್ಯ ಉದ್ದೇಶವಾಗಿದೆ.
ವಚನ ಸಾಹಿತ್ಯದಲ್ಲಿ ಅನುಭವದ ಸಾಹಿತ್ಯವಿದೆ. ದಯವೇ ಧರ್ಮದ ಮೂಲ ಆಶಯವಿದೆ.
ಬಸವಣ್ಣನವರ ಕಾಯಕ ತತ್ವ ಇಡೀ ಜಾಗತಿಕ ಮಟ್ಟಕ್ಕೆ ಪ್ರೇರೇಪಣೆಯಾಗಿದೆ.
ಇತಿಹಾಸ ಮರುಸೃಷ್ಟಿಸುವ ಐತಿಹಾಸಿಕ ನಡಿಗೆ ಈ ಹರಳಯ್ಯಾ ಜ್ಯೋತಿಯಾತ್ರೆಯಾಗಿದೆ ಎಂದರು.

ಸಮಾರಂಭದಲ್ಲಿ ಶರಣ ಮಾಹಾಂತಪ್ಪ ಸಂಗಾವಿ,
ಶರಣ ಅಪ್ಪರಾವ ಅಕೋಣೆ, ಶರಣ ಕಾಶಿರಾಯ ನಂದೂರಕರ್, ಶರಣ ಸಾಹಿತಿ ಸಂಗಮೇಶ ಎನ್. ಜವಾದಿ, ಶರಣ ರಾಜು ಕೋಟೆ, ರವೀಂದ್ರ ಶಾಬಾದಿ,ವೀರಣ್ಣಾ ಕೊಲರಳ್ಳಿ, ಶಂಕ್ರಪ್ಪ ಪಾಟೀಲ, ನಳಿನಿ ಮಹಾಗಾಂವಕರ್, ಸೋಮಶೇಖರ ಮಾಲಿ ಪಾಟೀಲ್, ಶಾಂತಲಿಂಗ ಪಾಟೀಲ ಕೊಳಕೂರ್, ಪಂಡಿತ ಬಾಳೊರೆ, ಭಗವಂತರಾವ ಪಾಟೀಲ, ರಮೇಶ ಸಲಗರ್, ವೈಜಿನಾಥ ಸಜ್ಜನಶೆಟ್ಟಿ , ಕರಬಸಪ್ಪ ಕಟಗಿ, ಭೀಮಶಾ ಹಜ್ಜರಗಿ, ಬಾಬುರಾವ್ ಪಾಟೀಲ ಚಿತ್ತಕೊಟಾ, ಶ್ರಾವಣಕುಮಾರ ಹಮ್ಮಿಲಪೂರಕರ್
ಸೇರಿದಂತೆ ಚಿಟಗುಪ್ಪಾ , ಕೊಡಂಬಲ, ಕಲಬುರ್ಗಿ, ಬೀದರ್, ಬೆಳಗಾವಿ , ಚಿತ್ರದುರ್ಗ, ಬಳ್ಳಾರಿ ಜಿಲ್ಲೆಯ ಹಾಗೂ ತೆಲಂಗಾಣ ರಾಜ್ಯದ ಬಸವಾಭಿಮಾನಿಗಳು ಹಾಜರಿದ್ದರು.

” ಕಲ್ಯಾಣ ನಡಿಗೆ ಪಾದಯಾತ್ರೆಯು ದೈಹಿಕ ಆರೋಗ್ಯ, ಮಾನಸಿಕ ಶಾಂತಿ ಮತ್ತು ಆಧ್ಯಾತ್ಮಿಕ ಉನ್ನತಿಗೆ ಅತ್ಯಂತ ಪ್ರಮುಖವಾದ ಮಾರ್ಗವಾಗಿದೆ. ಇದು ದೇಹವನ್ನು ದಂಡಿಸಿ ಮನಸ್ಸಿಗೆ ಸಂತೃಪ್ತಿ ನೀಡುವುದಲ್ಲದೆ, ಪ್ರಕೃತಿಯೊಂದಿಗೆ ಬೆರೆಯುವ ಈ ಚಟುವಟಿಕೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ, ತಾಳ್ಮೆಯನ್ನು ಕಲಿಸುತ್ತದೆ ಮತ್ತು ಜೀವನದ ಸಕಾರಾತ್ಮಕ ದೃಷ್ಟಿಕೋನವನ್ನು ಮೂಡಿಸುತ್ತದೆ “.

– ಸಂಗಮೇಶ ಎನ್ ಜವಾದಿ


ಪ್ರಮುಖರು ಕಲ್ಯಾಣ ಕರ್ನಾಟಕ ಪ್ರತಿಷ್ಠಾನ.

– ಕರುನಾಡ ಕಂದ ಪತ್ರಿಕೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!