ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪುರ ಗ್ರಾಮದ ರೆಡ್ಡಿ ಸಮುದಾಯದ ಹಿರಿಯರಾದ, ಮಲ್ಲಪ್ಪ ಸಂಗಪ್ಪ ಹದ್ಲಿ (೭೦) ವಯೋ ಸಹಜ ಕಾಯಲೆಯಿಂದ ಬೆಂಗಳೂರಿನ ಅವರ ಮನೆಯಲ್ಲಿ ದಿನಾಂಕ 17.2.2026ರಂದು ಮಂಗಳವಾರ ಮುಂಜಾನೆ 10 ಗಂಟೆಗೆ ನಿಧನರಾಗಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ ಬಿಎಂಟಿಸಿ ನೌಕರ ಮುತ್ತು ಹದ್ಲಿ ಮೃತರ ಪುತ್ರರಾಗಿದ್ದಾರೆ.
ಮೃತರು ಪತ್ನಿ, ಸಹೋದರ, ಸಹೋದರಿ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ದಿನಾಂಕ 18 02 2026 ಬುಧವಾರ ದಂದು ಮುಂಜಾನೆ 11:00 ಗಂಟೆಗೆ ತಿಮ್ಮಾಪುರ ಗ್ರಾಮದಲ್ಲಿ ಜರುಗಲಿದೆ.
ಸಂತಾಪ ಮೃತರ ನಿಧನಕ್ಕೆ ಅಮರಾವತಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ತಿಮ್ಮಾಪುರದ ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ




















