ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸರ್ಕಾರಿ ಶಾಲೆಗೆ ಸೌಕರ್ಯ ಒದಗಿಸಿದ ಸಿದ್ಧರಬೆಟ್ಟ ರೋಟರಿ ಸಂಸ್ಥೆ

ಕೊರಟಗೆರೆ : ಇಂದು ತಾಲ್ಲೂಕಿನ ಹೊಳವನಹಳ್ಳಿ ಮಾಧ್ಯಮಿಕ ವಿಭಾಗದ ಕರ್ನಾಟಕ ಪಬ್ಲಿಕ್ ಶಾಲೆಗೆ
ಬಾಳೆಹೊನ್ನೂರು ಸುಕ್ಷೇತ್ರ ಸಿದ್ದರಬೆಟ್ಟದ ಪೀಠಾಧ್ಯಕ್ಷರಾದಂತಹ ಪರಮ ಪೂಜ್ಯ ,ಖಾಸಾ ಶಾಖಾ ಮಠದ ಶ್ರೀ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ಹಾಗೂ ಕೊರಟಗೆರೆಯ ಬಾಲಾಜಿ ಟೆಕ್ಸ್ ಟೈಲ್ಸ್ ನ ಮಾಲೀಕರು, ರೋಟರಿ ಸಿದ್ದರಬೆಟ್ಟ ಸಂಸ್ಥೆಯ ಅಧ್ಯಕ್ಷರು ಶ್ರೀಯುತ ದರ್ಶನ್ ಬಾಲಾಜಿ ಹಾಗೂ ಅವರ ಧರ್ಮ ಪತ್ನಿ ಶ್ರೀಮತಿ ರೀತು ರವರು ಹಾಗೂ ಯೂಥ್ ಫಾರ್ ಸೇವಾ ಸಂಸ್ಥೆಯ ಮಂಜುನಾಥ್ ರವರು ಮತ್ತು ರೋಟರಿ ಸಿದ್ದರ ಬೆಟ್ಟ ಸಂಸ್ಥೆಯ ಕಾರ್ಯದರ್ಶಿ ರವಿಕುಮಾರ್ ರವರು, ಖಜಾಂಚಿ ಸಚಿನ್ ರವರು, ಗಂಗಾಧರ ಶಾಸ್ತ್ರೀ, ರಾಮಯ್ಯ ಮೇಷ್ಟ್ರು ,ಪ್ರಸನ್ನಕುಮಾರ್, ಮಂಜಣ್ಣ ಇವರುಗಳು ಆಗಮಿಸಿ ರೋಟರಿ ಕ್ಲಬ್‌ಗಳು ಸರ್ಕಾರಿ ಶಾಲೆಗಳು ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಡಿಜಿಟಲ್ ಕಲಿಕಾ ಉಪಕರಣಗಳನ್ನು ಒದಗಿಸುತ್ತವೆ. ಇದು ಕಂಪ್ಯೂಟರ್ ಪ್ರಯೋಗಾಲಯ ಸ್ಥಾಪನೆ, ಆನ್‌ಲೈನ್ ತರಗತಿಗಳು, ಮತ್ತು ಸ್ಮಾರ್ಟ್ ಬೋರ್ಡ್ ಮೂಲಕ ಬೋಧನೆಯನ್ನು ಸುಲಭಗೊಳಿಸುತ್ತದೆ. ಯೂಥ್ ಫಾರ್ ಸೇವಾ ಸಂಸ್ಥೆಯ ವತಿಯಿಂದ ನಮ್ಮ ಶಾಲೆಗೆ ಉಚಿತವಾಗಿ ನೀಡಲಾದ ಬೃಹತ್ ಮೊತ್ತದ 12 ಕಂಪ್ಯೂಟರ್ ಗಳು, 1 ಸ್ಮಾರ್ಟ್ ಟಿವಿ, ಶುದ್ಧ ಕುಡಿಯುವ ನೀರಿನ ಟ್ಯಾಂಕರ್, ಕ್ರೀಡಾ ಸಾಮಗ್ರಿಗಳು, ಗ್ರಂಥಾಲಯ ಪುಸ್ತಕಗಳು, ಮಕ್ಕಳಿಗೆ ಬರೆಯಲು ನೋಟ್ ಪುಸ್ತಕ , ಪರೀಕ್ಷೆ ಬರೆಯುವ ರೈಟಿಂಗ್ ಪ್ಲೈವುಡ್ ಮತ್ತು ಕಂಪ್ಯೂಟರ್ ಶಿಕ್ಷಕರು, ಮುಂತಾದವುಗಳನ್ನು ಉಚಿತವಾಗಿ ನೀಡಿದ್ದು ಅವುಗಳ ಉದ್ಘಾಟನೆಯನ್ನು ನೆರವೇರಿಸಿ ಕೊಟ್ಟಿರುತ್ತಾರೆ. ಈ ಸಂದರ್ಭದಲ್ಲಿ ಪ್ರಾಂಶುಪಾಲ ಸೀತಾಲಕ್ಷ್ಮಿ,ಉಪ ಪ್ರಾಂಶುಪಾಲರಾದ ಲಾಲಾ ನಾಯಕ್, ಮಾಧ್ಯಮಿಕ ವಿಭಾಗದ ನೂತನ ಮುಂಬಡ್ತಿ ಮುಖ್ಯ ಶಿಕ್ಷಕರಾದ ಶ್ರೀಯುತ ರಾಜಣ್ಣ ನವರು, ಶಾಲಾ ಶಿಕ್ಷಕರುಗಳಾದ ಶ್ರೀ ಪ್ರಶಾಂತ್ ಕುಮಾರ್, ಆಶಾರಾಣಿ, ದಾಸಪ್ಪ, ಶಶಿಕುಮಾರ್, ಅನಿತಲಕ್ಷ್ಮಿ, kps ಶಾಲೆಯ ಉಪಾಧ್ಯಕ್ಷರು , ಪದಾಧಿಕಾರಿಗಳು, ಇತರ ಎಲ್ಲಾ ಶಿಕ್ಷಕರುಗಳು ಉಪಸ್ಥಿತರಿದ್ದರು.

ವರದಿ :ಪ್ರಸನ್ನಕುಮಾರ್. ಎಸ್, ಕೊರಟಗೆರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!