ಬಳ್ಳಾರಿ / ಕಂಪ್ಲಿ : ಪಟ್ಟಣದಲ್ಲಿ ಕರ್ನಾಟಕ ಕ್ಷತ್ರಿಯ ಪರಿಷತ್ ಕಂಪ್ಲಿ ತಾಲ್ಲೂಕು ಘಟಕದಿಂದ ಹಿಂದೂ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆ ಅದ್ದೂರಿಯಿಂದ ಜರುಗಿತು.
ಕಂಪ್ಲಿ ಕೋಟೆಯ ಶ್ರೀ ಪಂಪಾಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದ ನಂತರ ಅಲಂಕೃತ ವಾಹನದಲ್ಲಿ ಬೃಹತ್ ಶಿವಾಜಿ ಮಹಾರಾಜರ ಭಾವಚಿತ್ರವನ್ನು ಪ್ರತಿಷ್ಠಾಪಿಸಿ ಪೂಜೆಯನ್ನು ಸಲ್ಲಿಸಿದ ನಂತರ ಬೃಹತ್ ಮೆರವಣಿಗೆಯನ್ನು ಆರಂಭಿಸಿದರು.
ಅದ್ದೂರಿ ಮೆರವಣಿಗೆಯು ಕೋಟೆಯ ಪ್ರಮುಖ ಬೀದಿಯಲ್ಲಿ ಮತ್ತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಯುವಕರ ಹಿಂದೂ ಪರ, ಶಿವಾಜಿಯ ಘೋಷಣೆಗಳನ್ನು ಕೂಗುತ್ತಾ ವಿಜೃಂಭಣೆಯಿಂದ ಮೆರವಣಿಗೆಯನ್ನು ನಡೆಸಿ ಐತಿಹಾಸಿಕ ಸೋಮಪ್ಪನ ದೇವಸ್ಥಾನದ ಆವರಣದಲ್ಲಿ ಸಮಾರೋಪಗೊಂಡಿತು.
ಅದ್ದೂರಿ ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾ ತಂಡಗಳು ಪ್ರದರ್ಶನ ನೀಡುವ ಮೂಲಕ ಮೆರವಣಿಗೆಗೆ ವಿಶೇಷ ಮೆರಗನ್ನು ನೀಡಿದ್ದವು. ಮೆರವಣಿಗೆಯಲ್ಲಿ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ಪದಾಧಿಕಾರಿಗಳಾದ ಆರೇರ ಗಣೇಶ್, ಪತ್ರಯ್ಯ್ ಸ್ವಾಮಿ, ಸುನೀಲ್ ರಾವು, ರಮೇಶ್ ಶಿಂಧೆ, ಶ್ರೀನಿವಾಸ, ಸುಭಾಷ್ ಹಾಗೂ ಪಟ್ಟಣದ ವಿವಿಧ ಹಿಂದೂ ಪರ ಸಂಘಟನೆಗಳ ಮುಖಂಡರು ಸೇರಿದಂತೆ ನೂರಾರು ಯುವಕರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















