
ಚಿತ್ರ ವೀಕ್ಷಿಸಿದ ಮಕ್ಕಳು, ಪೋಷಕರು : ಚಿತ್ರಮಂದಿರ ಹೌಸ್ಫುಲ್ : ಚಿತ್ರಕ್ಕೆ ಮಕ್ಕಳು ಫಿದಾ
ಬಳ್ಳಾರಿ / ಕಂಪ್ಲಿ : ಪಟ್ಟಣದ ಚಂದ್ರಕಲಾ ಚಿತ್ರಮಂದಿರದಲ್ಲಿ ಶನಿವಾರ ಅದ್ಧೂರಿಯಾಗಿ ಬಿಡುಗಡೆಗೊಂಡ ಮೂರು ರಾಜ್ಯ ಪ್ರಶಸ್ತಿ ಪುರಸ್ಕೃತ ದಂತಪುರಾಣ ಸಿನಿಮಾವನ್ನು ಮಕ್ಕಳು, ಪೋಷಕರು ಮತ್ತು ಜನರು ವೀಕ್ಷಿಸಿದರು.
ಶಾಸಕ ಜೆ.ಎನ್.ಗಣೇಶ್ ಅವರ ಅಧ್ಯಕ್ಷತೆಯಲ್ಲಿ ದಂತಪುರಾಣ ಚಿತ್ರಕ್ಕೆ ಅದ್ಧೂರಿಯಾಗಿ ಸ್ಥಳೀಯ ಮುಖಂಡರು, ಮಕ್ಕಳು ಚಾಲನೆ ನೀಡಿದರು.
ಇಲ್ಲಿನ ಚಿತ್ರಮಂದಿರದಲ್ಲಿ ಶಾಲಾ ಮಕ್ಕಳು, ಪೋಷಕರು ಸೇರಿದಂತೆ ಅನೇಕರು ಚಿತ್ರದಲ್ಲಿ ಮೂಡಿ ಬಂದ ಅದ್ಭುತ ಕ್ಷಣಗಳನ್ನು ನೋಡಿ, ಆನಂದಿಸುವ ಜೊತೆಗೆ ಕೆಲವೊಂದು ಸನ್ನಿವೇಶಕ್ಕೆ ಕಣ್ಣೀರು ಹಾಕಿರುವ ದೃಶ್ಯ ಕಂಡು ಬಂತು.
ವಿಶಾಲ್ ರಾಜ್ ಅವರ ನಿರ್ದೇಶಕ ಹಾಗೂ ನವೀನ್ ಶರ್ಮ ಅವರ ನಿರ್ಮಾಪಕದಲ್ಲಿ ತೆರೆ ಕಂಡ ಅತ್ಯದ್ಬುತ ಚಿತ್ರವನ್ನು ಜನರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಆಗಮಿಸಿ, ಸಿನಿಮಾ ವೀಕ್ಷಿಸಿದರು. ಇಂದಿನ ಚಿತ್ರಮಂದಿರ ಜನರಿಂದ ಹೌಸ್ಫುಲ್ ಆಗಿರುವುದು ಕಂಡು ಬಂತು.
ಈ ಸಂದರ್ಭದಲ್ಲಿ ಚಲನಚಿತ್ರದ ನಿರ್ದೇಶಕ ವಿಶಾಲ್ ರಾಜ್, ನಿರ್ಮಾಪಕ ನವೀನ್ ಶರ್ಮ, ಮುಖಂಡರಾದ ಸಿ.ಆರ್.ಹನುಮಂತ, ಕೆ.ಷಣ್ಮುಕಪ್ಪ, ಗ್ಯಾಸ್ ಮಹೇಶ, ವಾಸುಕುಮಾರ, ಅರ್.ಪಿ.ಶಶಿಕುಮಾರ, ರಾಜಾಭಕ್ಷಿ, ರಾಘವೇಂದ್ರ, ಸಾಧಿಕ್ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















