ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ದೇವಾಲಯಗಳ ಚಕ್ರವರ್ತಿಇಟಗಿ ಶ್ರೀ ಮಹಾ ದೇವ ದೇವಾಲಯ ವಿಶ್ವಕರ್ಮನ ಶಿಲ್ಪಕಲಾ ಚಾತುರ್ಯ ಮೆರುಗು

ಮಧ್ಯಾಹ್ನ ಬಿಸಿಲಿನ ತಾಪ ಹೆಚ್ಚಾಗುತ್ತಿತ್ತು ನೆತ್ತಿಯ ಮೇಲೆ ಸೂರ್ಯನ ಕಿರಣಗಳ ತಾಪ ಹೆಚ್ಚಾಗುತ್ತಿತ್ತು ಹೊಸಪೇಟೆಯ ವಿರೂಪಾಕ್ಷಯ್ಯ ಸ್ವಾಮಿ ಹಾಗೂ ನಾನು ವೆಂಕಟೇಶ್ ಬಡಿಗೇರ್ ಕುಕನೂರಿನ ಮಹಾ ಮಾಯಾ ದೇವಾಲಯ ಹಾಗೂ ದೇವಾಲಯಗಳ ಚಕ್ರವರ್ತಿ ಎಂದೇ ಪ್ರಸಿದ್ಧಿಯಾಗಿರುವ ಇಟಗಿ ಮಹಾದೇವ ದೇವಾಲಯ ನೋಡಬೇಕೆಂಬ ಬಹು ದಿವಸದ ಆಸೆ ನೆರವೇರಿತು ದ್ವಿಚಕ್ರವಾಹನದಲ್ಲಿ ಇಟಗಿ ಮಹಾ ದೇವಾಲಯ ತಲುಪಿತ್ತಿದ್ದಂತೆ ನಮ್ಮೊಳಗಿರುವ ದೈವತ್ವದ ಭಾವ ಮೈಗೂಡಿಸಿಕೊಂಡು ರೋಮಾಂಚನಗೊಂಡಿತು.

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಇಟಗಿ ಶ್ರೀ ಮಹಾದೇವ ದೇವಾಲಯ ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಸೋಮೇಶ್ವರ ಮತ್ತು ಚಂದ್ರಲೇಶ್ವರಿ ಮೂರುಜನ ಮಕ್ಕಳಲ್ಲಿ ಸೋಮೇಶ್ವರ ಜಯಸಿಂಹ 6ನೇ ವಿಕ್ರಮಾದಿತ್ಯ ಅತ್ಯಂತ ಶ್ರೇಷ್ಠನಾದ ಕಲ್ಯಾಣ ಚಾಲುಕ್ಯರ ಅರಸನಾದ 6ನೇ ವಿಕ್ರಮಾದಿತ್ಯ ಕರ್ನಾಟಕದ ಅರ್ಧ ಭಾಗವನ್ನು ಹಳ್ಳಿಗಳನ್ನು ಆಳ್ವಿಕೆ ಮಾಡುತ್ತಿದ್ದರು ಆದ್ದರಿಂದ ಇವರನ್ನು ಚಕ್ರವರ್ತಿ ಎಂದು ಕರೆಯಲಾಗುತ್ತಿತ್ತು.
ದೇವಾಲಯದ ರಂಗನ ನಕ್ಷತ್ರದಂತೆ ಕಂಗೊಳಿಸುತ್ತದೆ, 140 ಅಡಿ ಉದ್ದ 45 ಅಗಲ ಹೊಂದಿರುವ ಈ ದೇವಾಲಯ 6ನೇ ವಿಕ್ರಮಾದಿತ್ಯನ ಮಹಾಸೇನಾ ದಂಡನಾಯಕನಾದ ಮಹಾದೇವ ಕಟ್ಟಿಸಿದ್ದಾನೆ ಮಹಾದೇವ ಯಲಬುರ್ಗಾ ನರೇಗಲ್ಲ ಕೋಪನಗರ ಇಟಗಿ ಸ್ಥಳವನ್ನು ತನ್ನ ಆಳ್ವಿಕೆಯಲ್ಲಿ ಇರುವ ಸಂದರ್ಭದಲ್ಲಿ ಕಟ್ಟಿಸಲಾಗಿದೆ ಕಲ ಇತಿಹಾಸಕಾರ ಹೆನ್ರೀ ಕೌಸೆನ್ ಅಭಿಪ್ರಾಯದಂತೆ ಈ ಸ್ಮಾರಕವನ್ನು ಹಳೇಬೀಡಿನ ನಂತರ ಕನ್ನಡ ದೇಶದಲ್ಲಿ ಅತ್ಯುತ್ತಮ ಇಟ್ಟಿಗಿ ಶ್ರೀ ಮಹಾದೇವ ದೇವಾಲಯ ಎಂದು ಹಾಡಿ ಹೊಗಳಿದ್ದಾರೆ ಪಂಪ ಮಹಾಕವಿ ಕೂಡ ಒಂದು ದೇವಾಲಯ ನಿರ್ಮಾಣ ಮಾಡಬೇಕಾದರೆ ನೀವು ಮೊದಲು ಇಟಗಿ ಶ್ರೀ ಮಹಾದೇವ ದೇವಾಲಯವನ್ನು ಒಮ್ಮೆ ಭೇಟಿ ನೀಡಿ ಎಂದು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ ಈ ದೇವಾಲಯ ಆರುಭಾಗಗಳಾಗಿ ವಿಂಗಡಿಸಬಹುದು.
1.ಗರ್ಭಾಲಯ
2.ಸುಖನಾಸಿ
3.ಮಕರ ತೋರಣ
4.ರಂಗ ಸಜ್ಜಿಕೆ
5.ನವರಂಗ ಮಂಟಪ
6.ಮುಖಮಂಟಪ.
ದಕ್ಷಿಣ ಭಾರತದ ದ್ರಾವಿಡ ಶೈಲಿ ಉತ್ತರ ಭಾರತ ನಾಗರ ಶೈಲಿ ಎರಡರ ಮಿಶ್ರಣವೇ ವೇಸರ ಶೈಲಿಯಾಗಿದೆ ಗರ್ಭದಲ್ಲಿ ದೇವಾಲಯಗಳ ಚಕ್ರವರ್ತಿ ಎಂದೆನಿಸಿಕೊಂಡ ಶಿವನ ವಿಗ್ರಹ ಸ್ಥಾಪಿಸಲಾಗಿದ್ದು ಸುಖನಾಸಿ ಇಲ್ಲಿ ಜಪ ತಪ ಧ್ಯಾನ ಇಷ್ಟಾರ್ಥ ಪ್ರೇರಣೆಗೆ ಧ್ಯಾನಗೈಯ್ಯಲು ಇರುವಂತದ್ದು ದೇವಾಲಯದ ಮುಖ ತೋರಣವಾಗಿರುವ ಮಕರ ತೋರಣ ಅತ್ಯಂತ ಸೂಕ್ಷ್ಮ ಕೆತ್ತನೆ ಬಂದಂತಹ ಪ್ರವಾಸಿಗರಿಗೆ ನೋಡುಗರಿಗೆ ಅದ್ಭುತವಾದ ಶಿಲ್ಪ ಚಾತುರ್ಯವಾಗಿದೆ ಅಕ್ಕ ಪಕ್ಕದಲ್ಲಿ ಪಂಚ ಪಟ್ಟಿಗೆಗಳಿಂದ ಕೂಡಿದ್ದು ಆ ಪೆಟ್ಟಿಕೆಗಳು ಗೊಂಬೆ ಹೂ ತೋರಣ ನವರಸಗಳ ಬಿಂಬಿತವಾದ ಗೊಂಬೆಗಳು ವೀಣೆ ನುಡಿಸುವ ಶಾಂತ ರಸ ಜಾಗಟೆ ಚಿತ್ರಪಟ ವೀರರಸ ಅತ್ಯಂತ ಸೂಕ್ಷ್ಮ ಕೆತ್ತನೆಗಳ ಕಣ್ಮನ ತುಂಬಿ ಬರುತ್ತದೆ ಕಲ್ಯಾಣ ಚಾಲುಕ್ಯರ ಆರಾಧ್ಯ ದೈವ ಗಜಲಕ್ಷ್ಮಿ ಸುಂದರ ಶಿಲ್ಪ ಮನಸೂರೆಗೊಳ್ಳುತ್ತದೆ ಅತ್ಯಂತ ಕುಸುರಿ ಬಳಪದ ಕಲ್ಲುಗಳಿಂದ ಕೆತ್ತಲ್ಪಟ್ಟಿದೆ ಮಕರ ತೋರಣ ವಿಶೇಷವೇನೆಂದರೆ ನಾಲ್ಕು ಪ್ರಾಣಿ ಒಂದು ಪಕ್ಷಿಯ ಚಿತ್ರವನ್ನು ನೋಡಬಹುದು ಮೊಸಳೆ ಬಾಯಿಯಿಂದ ಆನೆ ಸೊಂಡಿಲು ಬಂದು ಹೊರಟು ವ್ಯಾಘ್ರನ ಕಾಲುಗಳನ್ನು ಹೊಂದಿದೆ ದೇಹ ನಂದಿಯ ತರಹ ಬಂದಿದೆ ಬಾಲ ನವಿಲು ಸ್ವರೂಪ ಬಾಯಿಂದ ಹೊರಟು ತೋರಣ ಹಾವಿನ ತರಹ ಶಿವ ಪಾರ್ವತಿಯ ಚಿತ್ರ ಅತ್ಯಂತ ಸೂಕ್ಷ್ಮ ಕೆತ್ತನೆ ಗೆ ಸಾಕ್ಷಿಯಾಗಿದೆ 9 ಅಡಿ ಉದ್ದ 4 ಅಡಿ ಅಗಲ ಒಳಗೊಂಡಿದೆ
98 ಸಾಲುಗಳ ಒಂದು ಶಾಸನ ಕಾಣಬಹುದಾಗಿದೆ ಅದರಲ್ಲಿ ಶಕಪುರುಷ ವಿಕ್ರಮಶಕೆ ಎಂದು ಗುರುತಿಸಲಾಗಿದೆ ಒಂದು ಲಕ್ಷ ಪ್ರದೇಶಗಳನ್ನು ಆಳ್ವಿಕೆ ಮಾಡಿದ ವಿಕ್ರಮಾದಿತ್ಯ ಚಕ್ರವರ್ತಿ ಎಂದೇ ಗುರುತಿಸಲಾಗಿದೆ ಶಿವ ಪಂಚಾಂಗ ಪೂಜಾ ವಿಧಾನವನ್ನು ಅನುಸರಿಸುತ್ತಿದ್ದರು.
ನವರಂಗದಲ್ಲಿ ಅಷ್ಟಕೋಷ್ಟಕ ಅಷ್ಟಲಕ್ಷ್ಮಿ ವಿಗ್ರಹ ಹಾಗೂ ಸಪ್ತಮಾತ್ರಕೆ ಪಟಕೆಗಳು ಇದ್ದವು ಎಂದು ತಿಳಿದು ಬರುತ್ತದೆ.
ಪಂಚಪಟಿಕೆಗಳು ಒಂದೇ ಕಲ್ಲಿನಲ್ಲಿ ಕೆತ್ತಲ್ಪಟ್ಟಿದೆ ದ್ವಾರಪಟ್ಟಿಕೆ ರಕ್ತಪಟ್ಟಿಕೆ ಕಂಬಪಟ್ಟಿಕೆ ಕುಂಭಪಟ್ಟಿಕೆ ಲತಾ ಸುರಳಿಪಟ್ಟಿಕೆ ಈ ರೀತಿ ಹೆಸರುಗಳಿಂದ ಕರೆಯಲ್ಪಡುತ್ತದೆ. ಯುಗಾದಿ ಅಮಾವಾಸ್ಯೆ ಮುಂಜಾನೆಯ ಸಂದರ್ಭದಲ್ಲಿ 15 20 ಸೆಕೆಂಡುಗಳಲ್ಲಿ ಸೂರ್ಯನ ಕಿರಣಗಳು ಶಿವನ ಮೂರ್ತಿಗೆ ಲೇಪನಗೊಂಡು ಅದ್ಭುತವಾಗಿ ಕಂಗೊಳಿಸುತ್ತದೆ. ಶ್ರಾವಣ ಮಾಸ ಅಭಿಷೇಕ ಭಜನೆ ಶಿವರಾತ್ರಿ ತ್ರಿಕಾಲ ಪೂಜೆ ಎಳ್ಳು ಅಮಾವಾಸ್ಯೆ ಡಿಸೆಂಬರ್ 30 ಮೂಲ ನಕ್ಷತ್ರದಲ್ಲಿ ರಥೋತ್ಸವ ಜರಗುತ್ತದೆ ಇದೊಂದು ರಾಷ್ಟ್ರೀಯ ಸ್ಮಾರಕವಾಗಿದ್ದು ಸುತ್ತಲು13 ಸಣ್ಣ ದೇವಾಲಯಗಳನ್ನು ಹೊಂದಿದೆ
ಒಟ್ಟು 64 ಕಂಬಗಳನ್ನು ಆವೃತಗೊಂಡಿದೆ.

ಈ ದೇವಾಲಯವನ್ನು ಸಂದೇಶದಾಗ ಅತ್ಯಂತ ಭಕ್ತಿ ಭಾವ ರೋಮಾಂಚನಕಾರಿ ಅನುಭವ ಉಂಟಾಗುತ್ತದೆ
ಈ ನಾಡಿನ ಸೊಗಡಿನೊಂದಿಗೆ ಸಮ್ಮಿಲನ ಗೊಂಡಿರುವ ಶಿಲ್ಪ ಚಾತುರ್ಯ ದಿವ್ಯವಾದ ಅನುಭವವನ್ನುಂಟು ಮಾಡುತ್ತದೆ ಬಹು ಮುಖ್ಯವಾಗಿ ಸೂಕ್ಷ್ಮ ಕಿತ್ತನೆ ಮತ್ತು ಆ ಕೆತ್ತನೆಯ ಹೊರ ಮೈ ಶಿಲೆಯ ಬೆರಳು ಮೂಲಕ ಪರೀಕ್ಷಿಸಬಹುದು ಈ ದೇವಾಲಯದ ಪ್ರತಿ ಕಂಬಗಳಲ್ಲಿ ಅತ್ಯಂತ ಸೂಕ್ಷ್ಮವಾದ ಶಿಲ್ಪ ಚಾತುರ್ಯ ವೈಜ್ಞಾನಿಕ ಹಾಗೂ ತಾಂತ್ರಿಕ ಬೌದ್ಧಿಕ ಭಾವಗಳು ಕೆಲಸ ಮಾಡಿವೆ ಎಂದು ನಮಗೆ ಭಾಸವಾಗದೆ ಇರಲಾರದು ಕ್ಷೇತ್ರ ಪ್ರವಾಸ ಅತ್ಯಂತ ಆನಂದದ ಸಂಭ್ರಮದ ಸುಂದರ ಕ್ಷಣಗಳಾಗಿದೆ ಆತ್ಮೀಯ ಮಿತ್ರರೇ ಕೆಲವೊಂದು ಕ್ಷೇತ್ರಗಳನ್ನು ನಾವು ನೋಡಿದಾಗ ಅಲ್ಲಿ ನಮಗಾಗುವ ಭಾವಗಳು ಭಕ್ತಿಯ ತನ್ಮಯತೆ ಭಾವ ಪರವಶತೆ ರೋಮಾಂಚನಕಾರಿಯಾದದು ನೋಡುವ ಕಣ್ಗಳಿಗೆ ಕೇಳುವ ಕಿವಿಗಳಿಗೆ ಅತೀವ ಆನಂದ ಆಧ್ಯಾತ್ಮಿಕ ಭಾವಗಳು ನಮ್ಮಲ್ಲಿ ಆತ್ಮತೃಪ್ತಿ ಸಂತೃಪ್ತಿ ಭಾವ ತುಂಬಿಕೊಳ್ಳುತ್ತದೆ ಜೀವನದಲ್ಲಿ ಇಂತಹ ಅದ್ಭುತವಾಗಿರುವ ಕ್ಷೇತ್ರ ದರ್ಶನ ಮಾಡಲೇಬೇಕು ಮಾನವನಾಗಿ ಹುಟ್ಟಿದ ಮೇಲೆ ಏನೇನು ಕಂಡೆ ಎಂದಾಗ ಇಂತಹ ಶಿಲ್ಪ ನೈಪುಣ್ಯತೆ ಸೋಜಿಗತೆ ಉಂಟುಮಾಡುತ್ತದೆ. ನಮ್ಮ ಸುತ್ತಮುತ್ತ ಕರ್ನಾಟಕದ ಹಲವಾರು ಪ್ರದೇಶಗಳು ಅತ್ಯದ್ಭುತವಾದ ಐತಿಹಾಸಿಕ ಸಾಂಸ್ಕೃತಿಕ ದೈವತ್ವದ ಆಧ್ಯಾತ್ಮಿಕ ಭಾವಗಳನ್ನು ಒಡಲಲ್ಲಿ ತುಂಬಿಕೊಂಡು ತನ್ನ ಅದ್ಭುತವಾದ ಕಲಾ ನೈಪುಣ್ಯತೆ ನಮಗೆ ಗೋಚರಿಸುತ್ತದೆ.
ಚೌಕಾಕಾರದ ಸುರುಳಿಯಕಾರದ ಕಂಬಗಳ ಕಲಾಕೃತಿ ಶಿಲ್ಪಗಳ ವೈವಿಧ್ಯಮಯ ಕಲೆ ನಮ್ಮನ್ನು ಸದಾ ಸ್ಮರಿಸುವಂತೆ ಮಾಡುತ್ತದೆ ಜೀವನದಲ್ಲಿ ದೇವಾಲಯಗಳ ಚಕ್ರವರ್ತಿ ಎಂದೇ ಪ್ರಸಿದ್ಧಿಯಾಗಿರುವ ಇಟಗಿ ಮಹಾ ದೇವ ದೇವಾಲಯ ನೋಡಲೇಬೇಕಾದ ಅತ್ಯಂತ ಸುಂದರ ಶಿಲ್ಪ ಚಾತುರ್ಯ ನಮ್ಮನ್ನು ಮೆರಗುಗೊಳಿಸುತ್ತದೆ ಬೆರಗುಗೊಳಿಸುತ್ತದೆ ಎಂದು ಕನ್ನಡ ಉಪನ್ಯಾಸಕರಾದ ವೆಂಕಟೇಶ್ ಬಡಿಗೇರವರು ವಿಶ್ಲೇಷಿಸಿದ್ದಾರೆ.

  • ಶ್ರೀ ವೆಂಕಟೇಶ್ ಬಡಿಗೇರ್
    ಉತ್ತಮ ಉಪನ್ಯಾಸಕ ಪ್ರಶಸ್ತಿ ಪುರಸ್ಕೃತರು
    ಕನ್ನಡ ಉಪನ್ಯಾಸಕರು,
    ಶ್ರೀ ಅಕ್ಷಯ ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯ ಹೊಸಪೇಟೆ.
    ಮೊಬೈಲ್ 9448330535
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!