ಗುಜರಾತ್: ಬ್ಲಡ್ ಸೆಂಟರ್ GMERS ವೈದ್ಯಕೀಯ ಕಾಲೇಜು ಮತ್ತು ಜನರಲ್ ಆಸ್ಪತ್ರೆ, ಜುನಾಗಢ್ ಇವರ ವತಿಯಿಂದ ರಕ್ತದಾನ ಶಿಬಿರವನ್ನು ಏರ್ಪಡಿಸಿದ್ದು ಈ ಸಂಧರ್ಭದಲ್ಲಿ ಶ್ರೀ ಕಿಶನ್ ಅರಬಿಂದಬಾಯಿ ಮಖೇಚಾ ಅವರು ಸಾಮಾಜಿಕ ಸೇವಾ ಕಾರ್ಯದ ಭಾಗವಾಗಿ ತಮ್ಮ ಸ್ವಯಂ ರಕ್ತವನ್ನು ದಾನ ಮಾಡಿದರು.
ಈ ಪ್ರಯುಕ್ತ ಗುಜರಾತ್ ಸ್ಟೇಟ್ ಕೌನ್ಸಿಲ್ ಫಾರ್ ಬ್ಲಡ್ ಟ್ರಾನ್ಸ್‌ಫ್ಯೂಷನ್, ಅಹಮದಾಬಾದ್ ಇವರಿಂದ ಅಗೌರವ ಪ್ರಮಾಣ ಪತ್ರ ಪಡೆದಿರುವುದಕ್ಕೆ ಇಂಡಿಯನ್ ದಿವ್ಯಾಂಗ್ ಎಂಪವರ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರು ಅಭಿನಂದಿಸಿದ್ದಾರೆ.
ಶ್ರೀ ಕಿಶನ್ ಎ ಮಖೇಚಾ ಅವರು ಇಂಡಿಯನ್ ದಿವ್ಯಾಂಗ ಎಂಪವರ್ಮೆಂಟ್ ಅಸೋಸಿಯೇಶನ್ ಇದರ ಜಂಟಿ ಕಾರ್ಯದರ್ಶಿಯಾಗಿದ್ದಾರೆ, ಈ ಸಂತೋಷದಾಯಕ ದೃಶ್ಯದಲ್ಲಿ ಶ್ರೀ ಕಿಶನ್ ಅವರ ಸ್ವಯಂಪ್ರೇರಿತ ರಕ್ತದಾನಕ್ಕಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವಲ್ಲದೆ ಅವರು ಮಾನವ ಜೀವನ ಮತ್ತು ಕಲ್ಯಾಣಕ್ಕಾಗಿ ಸಾಟಿಯಿಲ್ಲದ ರೀತಿಯಲ್ಲಿ ರಕ್ತದಾನ ಮಾಡುವ ಮೂಲಕ ಮಾನವೀಯತೆಯ ಉದಾತ್ತ ಕಾರ್ಯವನ್ನು ಮಾಡಿದ್ದಾರೆ. ಸಮಾಜದಲ್ಲಿ ರಕ್ತದಾನದ ಬೆಳಕು ಸದಾ ಉರಿಯುತ್ತಿರಲಿ ಹಾಗೂ ಶ್ರೀ ಕಿಶನ್ ಅವರು ಸ್ವಯಂ ಪ್ರೇರಿತ ರಕ್ತದಾನವನ್ನು ಪ್ರೋತ್ಸಾಹಿಸುವಲ್ಲಿ ಪ್ರೇರಣೆಯಾಗಲಿದ್ದು ಮತ್ತು ಈ ಸಂದೇಶವನ್ನು ಸಮಾಜದಲ್ಲಿ ಪಸರಿಸುವ ಮತ್ತು ಅನೇಕ ರಕ್ತದಾನಿಗಳನ್ನು ತಯಾರು ಮಾಡುವ ಭರವಸೆಯೊಂದಿಗೆ ಅವರ ಮಹಾನ್ ಸೇವೆಯನ್ನು ಮತ್ತೊಮ್ಮೆ ಶ್ಲಾಘಿಸಲು ನಾವು ಸಂತೋಷಪಡುತ್ತೇವೆ ಎಂದು ಶ್ರೀ ಕೊಡಕ್ಕಲ್ ಶಿವಪ್ರಸಾದ್ ಹೇಳಿದ್ದಾರೆ.
- ಕರುನಾಡ ಕಂದ ಪತ್ರಿಕೆ




















