ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪ್ರಪಂಚ, ಪಾರಮಾರ್ಥ ಒಂದೇ ನಾಣ್ಯದ ಎರಡು ಮುಖಗಳು : ನಿತ್ಯಾನಂದ ಮಹಾಸ್ವಾಮಿಗಳು

ಜಮಖಂಡಿ: ಸತ್ಸಂಗದಲ್ಲಿ ತೊಡಗಿ, ಸಜ್ಜನರ ಮಧ್ಯೆ ಇದ್ದು, ಕಾಯಕದಲ್ಲಿ ನಿರತರಾಗಿ ಸತ್ಯದ ಕಡೆಗೆ ಅಪೇಕ್ಷೆ ಹೊಂದಿದರೆ ಪ್ರಪಂಚ ಅಥವಾ ಪಾರಮಾರ್ಥದಲ್ಲಿದ್ದರೂ ಒಂದೇ ಪ್ರಪಂಚ ಮತ್ತು ಪಾರಮಾರ್ಥ ಒಂದೇ ನಾಣ್ಯದ ಎರಡು ಮುಖಗಳು ಎಂದು ಮುಧೋಳ ತಾಲ್ಲೂಕಿನ ರೂಗಿ ಗ್ರಾಮದ ಅಡವಿ ಆಶ್ರಮದ ನಿತ್ಯಾನಂದ ಮಹಾಸ್ವಾಮಿಗಳು ಹೇಳಿದರು.
ತಾಲ್ಲೂಕಿನ ಹುಲ್ಯಾಳ ಗ್ರಾಮದ ಶ್ರೀಗುರುದೇವಾಶ್ರಮದ ಶ್ರೀಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ಪ್ರತಿ ತಿಂಗಳ ನಾಲ್ಕನೇ ಭಾನುವಾರ ಹಮ್ಮಿಕೊಳ್ಳುವ ಮಾಸಿಕ ಕಾರ್ಯಕ್ರಮ ‘ಶ್ರೀಗುರುದೇವ ಸತ್ಸಂಗ’ದ ಸಾನ್ನಿಧ್ಯ ವಹಿಸಿ ‘ಪ್ರಪಂಚದೊಂದಿಗೆ ಪಾರಮಾರ್ಥ’ ವಿಷಯ ಕುರಿತು ಫೆ.೨೨ರ ಸಂಜೆ ಅವರು ಆಶೀರ್ವಚನ ನೀಡಿದರು.
ಮೊದಲು ನಿನ್ನನ್ನು ನೀನು ತಿಳಿದುಕೊಳ್ಳಬೇಕು. ಮೊದಲು ನಿನ್ನನ್ನು ನೀನು ತಿದ್ದಿಕೊಂಡರೆ ಜಗತ್ತಿನ ಒಬ್ಬ ಮೂರ್ಖನನ್ನು ತಿದ್ದಿದ ಪುಣ್ಯ ಬರುತ್ತದೆ. ಅದಕ್ಕಾಗಿ ಬೆಳಿಗ್ಗೆ ಏಳುವಾಗ ಭಗವಂತನನ್ನು ಸ್ಮರಿಸಬೇಕು. ಅಧ್ಯಾತ್ಮದ ಮಾರ್ಗ ತೋರಿದ ಗುರುವಿಗೆ ರಾತ್ರಿ ಮಲಗುವಾಗ ನಮಸ್ಕಾರ ಹೇಳಬೇಕು ಎಂದರು.
ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿ, ಅಧ್ಯಾತ್ಮದ ಕೊರತೆಯಿಂದಾಗಿ ಕುಟುಂಬಗಳು ಛಿದ್ರವಾಗುತ್ತಿವೆ. ವಿವಾಹ ವಿಚ್ಛೇದನಗಳು ಹೆಚ್ಚುತ್ತಿವೆ. ಆದ್ದರಿಂದ ಪ್ರಪಂಚದಲ್ಲಿರುವ ಪ್ರತಿ ಸತಿ-ಪತಿಗಳಲ್ಲಿ ಒಬ್ಬರಿಗಾದರೂ ಆಧ್ಯಾತ್ಮದ ಜ್ಞಾನವಿರಬೇಕು ಎಂದು ಆಶೀರ್ವಚನ ನೀಡಿದರು.
ನಮ್ಮನ್ನು ನಾವು ತಿಳಿದುಕೊಳ್ಳದೆ ದುಃಖಿತರಾಗಿದ್ದೇವೆ. ನಾನೇ ಆತ್ಮ ಸ್ವರೂಪ ಎಂಬ ಜ್ಞಾನದ ಅರಿವಾದರೆ ಸಮಾಧಾನ ಶಾಂತಿ ನೆಲೆಸುತ್ತದೆ. ಅದಕ್ಕಾಗಿ ದೇವರಲ್ಲಿ ಭಕ್ತಿ, ತಂದೆ-ತಾಯಿ, ಅತೆ-ಮಾವ, ಬಂಧು-ಭಾಂಧವರಲ್ಲಿ ನಂಬಿಕೆ ವಿಶ್ವಾಸ ಇಡಬೇಕು ಎಂದರು.
ನಿಂಬಾಳ ಗುರುದೇವಾಶ್ರಮದ ಗಣೇಶಲಿಂಗ ಮಹಾಸ್ವಾಮಿಗಳು, ಹುಲ್ಯಾಳ ನಿಜಗುಣಶಾಸ್ತ್ರಿ ಮಮದಾಪುರ ಆಶೀರ್ವಚನ ನೀಡಿದರು.
ಯಲ್ಲಪ್ಪ ಶಿವಾಪುರ ಮಾತನಾಡಿದರು. ಋಷಿಕೇಶದ ಸ್ವರ್ಗಾಶ್ರಮದ ಗಂಗಾನಂದ ಮಹಾರಾಜರು, ಸಿದ್ದಾಪುರ ಅಡವಿಸಿದ್ಧೇಶ್ವರ ಮಠದ ಮಾತೋಶ್ರೀ ಅಕ್ಕಮಹಾದೇವಿ ಸಾನ್ನಿಧ್ಯ ವಹಿಸಿದ್ದರು.
ನಿರ್ಮಾಣ ಹಂತದಲ್ಲಿರುವ ವೇದಾಂತಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಮಂದಿರಕ್ಕೆ ರೂ.೧ ಲಕ್ಷ ಹಾಗೂ ಸತ್ಸಂಗದ ಮಹಾಪ್ರಸಾದದ ದಾಸೋಹ ಸೇವೆಗೈದ ವಿಮಲಾ ಕುಬಕಡ್ಡಿ, ಸಂಗಮೇಶ ಕುಬಕಡ್ಡಿ ದಂಪತಿಯನ್ನು ಶ್ರೀಗುರುದೇವಾಶ್ರಮದ ಪರವಾಗಿ ಸನ್ಮಾನಿಸಲಾಯಿತು.
ಗುರುಬಸಗೌಡ ಪಾಟೀಲ, ಶಿವಾಜಿ ಜಾಧವ, ಪರಮೇಶ್ವರ ತೇಲಿ, ಸಿದ್ದು ಉಪ್ಪಲದಿನ್ನಿ ಸಂಗೀತ ಸೇವೆ ಸಲ್ಲಿಸಿದರು. ಸಂಗಮೇಶ ತೆಲಸಂಗ ನಿರೂಪಿಸಿದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!