
ಬಳ್ಳಾರಿ / ಕಂಪ್ಲಿ : ತಾಲೂಕಿನ ಮುದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಡಿಪ್ಲೋಮಾ ಪಾಲಿಟೆಕ್ನಿಕಲ್ ಕಾಲೇಜ್ ಮುಂಭಾಗದಲ್ಲಿ ಯಾವುದೇ ಬಸ್ ಗಳು ನಿಲ್ಲಿಸುವುದಿಲ್ಲ ಆ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಸುಮಾರು ಬಹಳ ದೂರದಿಂದ ಬರುವ ವಿದ್ಯಾರ್ಥಿಗಳು ಕಂಪ್ಲಿಯಿಂದ ಹೋಗುವ ಹೊಸಪೇಟೆ ಮಾರ್ಗದ ಕಡೆಗೆ ಹೊಸಪೇಟೆಯಿಂದ ಕಂಪ್ಲಿಗೆ ಬರುವ ಬಸ್ಸುಗಳು ಡಿಪ್ಲೋಮೋ ಕಾಲೇಜು ಮುಂಭಾಗದಲ್ಲಿ ನಿಲ್ಲಿಸಬೇಕೆಂದು ಕಂಪ್ಲಿ ನಗರದ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಬುಧವಾರ ಕಂಪ್ಲಿಯಲ್ಲಿ ಹೊಸ ಬಸ್ ನಿಲ್ದಾಣ ಮುಂಭಾಗದಲ್ಲಿ ಎಬಿಇಪಿ ಕಾರ್ಯಕರ್ತರು ಹಾಗೂ ಡಿಪ್ಲೋಮೋ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಡಿಪ್ಲೋಮೋ ಕಾಲೇಜು ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಿಪ್ಲೋಮಾ ಕಾಲೇಜ್ ವಿದ್ಯಾರ್ಥಿಗಳು ಡಿಪೋ ನಿಯಂತ್ರಣ ಅಧಿಕಾರಿಗೆ ಎಚ್ಚರಿಕೆ ನೀಡಿದರು. ಕೂಡಲೇ ಸರಿಪಡಿಸಲು ಸರ್ಕಾರಕ್ಕೆ ಆಗ್ರಹಿಸಿದರು.
ಕಂಪ್ಲಿ ಬಸ್ ಸ್ಟ್ಯಾಂಡ್ ನಿಯಂತ್ರಣ ಅಧಿಕಾರಿ ಆದಿಶೇಷ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಹೊಸಪೇಟೆಯಿಂದ ಬರುವ ಬಸ್ ಗಳು ಕಂಪ್ಲಿ ಹೊಸಪೇಟೆಗೆ ಹೋಗುವ ಬಸ್ ಗಳು ಡಿಪ್ಲೋಮಾ ಕಾಲೇಜ್ ಮುಂಭಾಗದಲ್ಲಿ ನಿಲ್ಲಿಸಬೇಕು, ವಿದ್ಯಾರ್ಥಿಗಳಿಗೆ ಎಂದು ಎಬಿವಿಪಿ ರಾಜಕಾರಣಿ ಸದಸ್ಯ ಸಪ್ತಗಿರಿ ಮಂಚಿಕಂಠಿ ಅವರು ಮಾತನಾಡಿ ಸಾರಿಗೆ ಇಲಾಖೆ ಅಧಿಕಾರಿಗಳು ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಬಳ್ಳಾರಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ತಾಳ್ವರ ಭರತ್, ವಿದ್ಯಾರ್ಥಿಗಳಾದ ಕಾರ್ತಿಕ್ , ಶಶಾಂಕ್ , ರಾಮು , ಅನು ಮತ್ತು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕಂಪ್ಲಿ ಪೊಲೀಸ್ ಠಾಣೆ ವತಿಯಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ವರದಿ : ಜಿಲಾನಸಾಬ್ ಬಡಿಗೇರ್




















