ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿದ್ಯಾರ್ಥಿಗಳಲ್ಲಿ ಹಣ ಉಳಿತಾಯ,ಹೂಡಿಕೆ, ನಿರ್ವಹಣೆ ಜ್ಞಾನ ಅಗತ್ಯ : ಡಾ.ಮಹಾಂತೇಶ ಕಡಪಟ್ಟಿ

ವಿ.ಮ. ಕಾಲೇಜನಲ್ಲಿ ಹಣದ ಉಳಿತಾಯ, ಹೂಡಿಕೆಯ ವಿಶೇಷ ಉಪನ್ಯಾಸ : ಎಸ್‌ಬಿಐ ಬ್ಯಾಂಕ್ ಅಧಿಕಾರಿಗಳಿಂದ ವಿದ್ಯಾರ್ಥಿಗಳಿಗೆ ಮಾಹಿತಿ

ಬಾಗಲಕೋಟೆ/ ಹುನಗುಂದ: ವಿದ್ಯಾರ್ಥಿಗಳು ಹಣ ಉಳಿತಾಯ,ಹೂಡಿಕೆ ಹಾಗೂ ನಿರ್ವಹಣೆಯ ಬಗ್ಗೆ ಸಮರ್ಪಕ ಜ್ಞಾನವನ್ನು ಗಳಿಸಿಕೊಂಡಾಗ ಮಾತ್ರ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ವಿ.ಮ.ವಿ.ವ ಸಂಘದ ಗೌರವ ಕಾರ್ಯದರ್ಶಿ ಡಾ.ಮಹಾಂತೇಶ ಎಸ್. ಕಡಪಟ್ಟಿಯವರು ಹೇಳಿದರು.

ಪಟ್ಟಣದ ವಿ.ಎಂ.ಕೆ.ಎಸ್.ಆರ್. ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿ.ಎಸ್. ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದ ಐ.ಕ್ಯೂ.ಎ.ಸಿ, ವಾಣಿಜ್ಯ ವೇದಿಕೆ,ಎನ್.ಎಸ್.ಎಸ್.ಎನ್.ಸಿ.ಸಿ. ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ಸಹಯೋಗದಲ್ಲಿ ಹಣದ ಉಳಿತಾಯ, ಹೂಡಿಕೆ ಹಾಗೂ ನಿರ್ವಹಣೆ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಜೊತೆಗೆ ಆಧುನಿಕ ಹಣಕಾಸು ನಿರ್ವಹಣೆಯ ತಂತ್ರಜ್ಞಾನದ ತಳುವಳಿಕೆ ಮೂಡಿಸುವುದು ಅತೀ ಅವಶ್ಯವಾಗಿದೆ. ವಿದ್ಯಾರ್ಥಿಗಳು ಮೊಬೈಲ್‌ಗಳಲ್ಲಿ ಬರುತ್ತಿರುವ ವಂಚನಾತ್ಮಕ ಸುದ್ದಿಗಳಿಗೆ ಬಲಿಯಾಗಿ, ಹಣ ಕಳೆದುಕೊಳ್ಳಬಾರದೆಂದು ವಿದ್ಯಾರ್ಥಿಗಳಿಗೆ ಎಚ್ಚರಿಸಿದರು.

ಎಸ್.ಬಿ.ಐ ಹುನಗುಂದ ಶಾಖಾ ವ್ಯವಸ್ಥಾಪಕ ಮೋಹನ ಮಾತನಾಡಿ ಈಗಿನಿಂದಲೇ ಉಳಿತಾಯದ ಕಲ್ಪನೆ ಬೆಳೆಸಿಕೊಂಡರೇ ಆ ಹಣ ಮುಂದಿನ ತಮ್ಮ ಭಾವಿ ಜೀವನದಲ್ಲಿ ಅನುಕೂಲವಾಗಲಿದೆ ಎಂದರು.

ಎಸ್.ಬಿ.ಐ ನ ಹಿರಿಯ ಅಧಿಕಾರಿ ರವಿ ಜೋಶಿ ಮಾತನಾಡಿ ಎಸ್.ಬಿ.ಐ ಶಾಖೆಯಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು ಪ್ರತಿವರ್ಷ ಸ್ಪರ್ಧಾತ್ಮಕ ಪರೀಕ್ಷೆಗಳ ಮುಖಾಂತರ ತುಂಬಿಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳು ಈ ವಿಷಯಕ್ಕೆ ಹೆಚ್ಚಿನ ಒತ್ತು ಕೊಡಬೇಕೆಂದರು.

ಸಂಸ್ಥೆಯ ನಿರ್ದೇಶಕರಾದ ಬಿ.ಎಸ್. ಕೆಂದೂರ,ದೇಸಾಯಪ್ಪ ಹವಾಲ್ದಾರ, ರಾಚಪ್ಪ ರಾಜಮನಿ, ಐ.ಕ್ಯೂ.ಎ.ಸಿ ಸಂಯೋಜಕ ಡಾ.ಎಲ್.ಎನ್. ಕುಲಕರ್ಣಿ, ಕಾಲೇಜು ಒಕ್ಕೂಟದ ಕಾರ್ಯಾಧ್ಯಕ್ಷ ಡಾ. ಭೀಮಾಶಂಕರ ಹಲಸಂಗಿ, ವಾಣಿಜ್ಯ ವಿಭಾಗದ ಮುಖ್ಯಸ್ಥ ಬಿ.ಎ.ಕಂಠಿ, ಪದವಿ ಪೂರ್ವ ಪ್ರಾಚಾರ್ಯ ಹೆಚ್.ಎಸ್.ಬೋಳಿಶೆಟ್ಟರ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಸುರೇಖಾ ಪಿ. ಹೂಗಾರ ವೇದಿಕೆಯಲ್ಲಿದ್ದರು.
ಕು.ದೀಪಾ ದಾದ್ಮಿ,ಕು. ರೇಷ್ಮಾ ಮನ್ನಾಪೂರ ಹಾಗೂ ಸಂಗಡಿಗರು ಪ್ರಾರ್ಥಿಸಿದರು.
ದೈಹಿಕ ನಿರ್ದೇಶಕ ಎಸ್.ಬಿ.ಚಳಗೇರಿ ಸ್ವಾಗತಿಸಿದರು,
ಡಾ.ಎಸ್.ಆರ್. ನಾಗಣ್ಣವರ ನಿರೂಪಿಸಿದರು,ಪ್ರೊ. ಬಿ.ಎ. ಕಂಠಿ ವಂದಿಸಿದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!