ಬಳ್ಳಾರಿ / ಕಂಪ್ಲಿ : ತಾಲೂಕಿನ ಎಮ್ಮಿಗನೂರು ಗ್ರಾಮದ ಶಾಲೆ ರಾಜ್ಯ ಸರಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯಿಂದ ಮಿಷನ್ ಪ್ರಕೃತಿ ಅಭಿಯಾನ ನಿಮಿತ್ತ ಕೈಗೊಂಡ ಚಟುವಟಿಕೆಗಳನ್ನು ಪರಿಗಣಿಸಿ ಗ್ರಾಮದ ಸರಕಾರಿ ಶತಮಾನ ಶಾಲೆಗೆ ಬೆಂಗಳೂರಿನ ವಿಕಾಸ ಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ ಪ್ರಶಸ್ತಿ ಫಲಕ ನೀಡಿ ಗೌರವಿಸಿದರು.
ಶಾಲೆಯ ಮುಖ್ಯಶಿಕ್ಷಕ ಬಿ.ಎಸ್. ಸದ್ಯೋಜಾತಪ್ಪ ಮಾತನಾಡಿ, ಎರಡು ತಿಂಗಳು ನಡೆದ ಮಿಷನ್ ಪ್ರಕೃತಿ ಅಭಿಯಾನದಲ್ಲಿ ಪರಿಸರಕ್ಕೆ ಸಂಬಂಧಿಸಿದ ಹಲವಾರು ಚಟುವಟಿಕೆಗಳನ್ನು ಇಕೋ ಕ್ಲಬ್‌ನಿಂದ ಹಮ್ಮಿಕೊಂಡು ಯಶಸ್ವಿಗೊಳಿಸಲಾಗಿದೆ. ಮಕ್ಕಳಿಗೆ ಸರಿಯಾದ ಮಾಹಿತಿ ನೀಡಿದ ಮಾರ್ಗದರ್ಶಿ ಶಿಕ್ಷಕಿ ಶ್ರುತಿ ಹಾಗೂ ಸಿಬ್ಬಂದಿ, ಎಸ್ ಡಿಎಂಸಿ ಸದಸ್ಯರಿಗೆ ಧನ್ಯವಾದಗಳು ಎಂದರು. ಬಳ್ಳಾರಿ ಡಯಟ್‌ನ ರಂಗಾರೆಡ್ಡಿ, ವಿಜ್ಞಾನ ಶಿಕ್ಷಕಿ ಶ್ರುತಿ, ಶಿಕ್ಷಕ ವೆಂಕಟೇಶ್, ಮಕ್ಕಳಾದ ರೆಹಮಾನ್ ಬಿ., ಮೇಘನಾ, ಅನೀಫ್, ಕೆಂಚಮಾಳಪ್ಪ ಹಾಗೂ ಶಾಲೆ ಶಿಕ್ಷಕರು, ಇಲಾಖೆ ಅಧಿಕಾರಿಗಳು ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















