ಉಪವಾಸ ಸ್ವಯಂ ನಿಯಂತ್ರಣ ಶಿಸ್ತು ತ್ಯಾಗ : ಮೌಲಾನಾ ಸಮದ್ ಸಾಹೇಬ್
ಸಿರುಗುಪ್ಪ – ಪವಿತ್ರ ಮಾಹೆ ರಂಜಾನ್ ಅಲ್ಲಾಹನ ಪ್ರವಾದಿಯವರ ಜಗದ್ಗುರುಗಳ ಧಾರ್ಮಿಕ ಇಸ್ಲಾಂ 5 ಆಧಾರ ಸ್ಥಂಭಗಳ ಮೇಲೆ ನಿರ್ಮಿಸಲಾಗಿದೆ ಈಮಾನ್ ಅಲ್ಲಾಹನ ಮೇಲೆ ವಿಶ್ವಾಸ ಇಡುವುದು ದಿನದಲ್ಲಿ ನಮಾಜ್ 5 ಸಲ ನಿರ್ವಹಿಸುವದು ರಂಜಾನ್ ತಿಂಗಳ ರೋಜಾ ಉಪವಾಸ ಮಾಡುವುದು ಸಂಪಾದನೆ ಗಳಿಕೆಯಲ್ಲಿ ಶೇ. 2.5 ರಷ್ಟು ಬಡವರಿಗೆ ಜಕಾತ್ ಫಿತ್ರ ದಾನ ಧರ್ಮ ನೀಡುವುದು ಆಯುಷ್ಯದಲ್ಲಿ ಒಂದು ಸಲವಾದರೂ ಹಜ್ ಯಾತ್ರೆ ಕೈಗೊಳ್ಳುವುದು ಇಡೀ ರಂಜಾನ್ ಮಾಸ ರೋಜಾ ಉಪವಾಸವು ಪವಿತ್ರ ಗ್ರಂಥ ಖುರಾನ್ ಅವತೀರ್ಣಗೊಳಿಸಿದ ಅಲ್ಲಾಹನಿಗೆ ಸಲ್ಲಿಸುವ ಕೃತಜ್ಞತೆಯಾಗಿದೆ ಎಂದು ಸೌದಾಗರ್ ಜುಮ್ಮ ಸುನ್ನಿ ಮಸ್ಜಿದ್ ಇಮಾಮೊ ಖತೀಬ್ ಖಲೀಫಾ ಮೌಲಾನ ಎಸ್ ಅಬ್ದುಲ್ ಸಮದ್ ಸಾಹಬ್ ನಿಜಾಮಿ ಬಂದಾನವಾಜಿ ಅವರು ಅಭಿಪ್ರಾಯ ಪಟ್ಟರು. ಮಸ್ಜಿದ್ ನಲ್ಲಿ ಕರ್ನಾಟಕ ವಕ್ಫ್ ಬೋರ್ಡ್ ಮಾಜಿ ಬಳ್ಳಾರಿ ಜಿಲ್ಲಾ ಸದಸ್ಯರು ರಾಷ್ಟ್ರೀಯ ಹಬ್ಬಗಳ ಆಚರಣಾ ಶಾಂತಿ ಸಭೆ ಸದಸ್ಯರು ಅಲ್ ಹಾಜ್ ಅಬ್ದುಲ್ ನಬಿ ಚಿಸ್ತಿ ನಿಜಾಮಿ ಮತ್ತು ಇವರ ಮಕ್ಕಳಾದ ಹಾಜಿ ಮೊಹಮ್ಮದ್ ಇಬ್ರಾಹಿಂ, ಮೊಹಮ್ಮದ್ ರಫಿ, ಮೊಹಮ್ಮದ್ ನೌಶಾದ್ ಅಲಿ ಇವರಿಂದ ಆಯೋಜಿಸಿದ ರಂಜಾನ್ ಮಾಸದ ರೋಜಾ ಇಫ್ತಾರ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಇಸ್ಲಾಂನ ರೋಜಾ ಉಪವಾಸದ ಪ್ರಮುಖ ಗುರಿ ಮತ್ತು ಉದ್ದೇಶ ಅಲ್ಲಾಹನ ಸಂಪ್ರೀತಿಯಾಗಿದೆ ನಮ್ಮೆಲ್ಲರಿಗೂ ಸನ್ಮಾರ್ಗ ಮಾರ್ಗದರ್ಶನವನ್ನು ಅನುಗ್ರಹಿಸಲಿ ಎಂದು ಅಲ್ಲಾಹನಲ್ಲಿ ನಮಾಜ್ ನಿರ್ವಹಿಸಿ ಪ್ರಾರ್ಥಿಸುವುದು ಇಸ್ಲಾಂ ಪ್ರಪಂಚದಲ್ಲಿ ಶಾಂತಿ ಸಹನೆ ಸಹೃದಯತೆ ಸೌಹಾರ್ದತೆ ಪರಮಧರ್ಮ ಸಹಿಷ್ಣುತೆಯ ಧರ್ಮವಾಗಿದೆ ಇಸ್ಲಾಂ ಜಗತ್ತಿನ ಸರ್ವಜನಾಂಗದ ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ ಅಲ್ಲಾಹನ ಮೊದಲ ಗೊಂಡ ಕೊನೆಯ ಪ್ರವಾದಿ ಮೊಹಮ್ಮದ್ ಪೈಗಂಬರ್ ರವರ 23 ವರ್ಷಗಳ ಕಾಲ ಅವತೀರ್ಣವಾದ ಪರಿಪೂರ್ಣ ಗ್ರಂಥ ಪವಿತ್ರ ಖುರಾನ್ ಕೇವಲ ಮುಸಲ್ಮಾನರಿಗಾಗಿ ಬಂದಂತಹ ಗ್ರಂಥವಲ್ಲ ಇದು ಸರ್ವಜನರ ಮಾರ್ಗದರ್ಶನಕ್ಕೆ ಬಂದ ಪವಿತ್ರ ಗ್ರಂಥ ಖುರಾನ್ ಒಬ್ಬ ಮನುಷ್ಯ ತಾನು ಹುಟ್ಟಿದ ದಿನದಿಂದ ಸಾಯುವವರೆಗೆ ಯಾವ ರೀತಿಯಲ್ಲಿ ಕೌಟುಂಬಿಕ ಆರ್ಥಿಕ ಮತ್ತು ಸಾಮಾಜಿಕ ಜೀವನ ನಡೆಸಬೇಕು ಎಂಬುದರ ಬಗ್ಗೆ ಖುರಾನ್ ನಲ್ಲಿ ವಿವರಣೆ ಇದೆ ಸಮಾನತೆ ಮಾನವ ಹಕ್ಕು ನ್ಯಾಯ ನೀತಿ ಪಾಲಿಸುವುದು ನಮ್ಮ ನೆರೆಹೊರೆಯವರ ಸಂಬಂಧಿಕರು, ಸಹವರ್ತಿಗಳಿಗೆ ನಿತ್ಯವೂ ಕರುಣೆ ಅನುಕಂಪ ತೋರುವುದು ಎಲ್ಲಾ ವಿವಿಧ ದುಶ್ಕೃತ್ಯಗಳಿಂದ ವಿಮುಖರಾಗಲು ಎಂಬುದು ಪವಿತ್ರ ಗ್ರಂಥ ಖುರಾನ್ ಅಜ್ಞಾಪಿಸುತ್ತದೆ ಖುರಾನ್ ಸನ್ಮಾರ್ಗ ಪ್ರತಿಯೊಬ್ಬರ ಗುರಿಯಾಗಲಿ ಪವಿತ್ರ ಗ್ರಂಥ ಖುರಾನ್ ಅವತೀರ್ಣಗೊಂಡ ರಂಜಾನ್ ತಿಂಗಳಾಗಿದೆ ಅಲ್ಲಾಹನೆ ವರ್ಣಿಸಿದಂತೆ ರಂಜಾನ್ ಮಾಸದಲ್ಲಿ ಹಗಲು ರಾತ್ರಿ ಹೃದಯವನ್ನು ಅಲ್ಲಾಹನ ಸ್ಮರಣೆ ವಿಶೇಷ ತರಾವ್ಹಿ ನಮಾಜ್ ದುವಾ ಗಳ ಸಮೃದ್ಧಗೊಳಿಸುವದು ಪುಣ್ಯಗಳ ಲೆಕ್ಕಾ ಅಲ್ಲಾಹನ ಬಲ್ಲವನಾಗಿದ್ದಾನೆ ರೋಜಾ ಉಪವಾಸ ಸ್ವಯಂ ನಿಯಂತ್ರಣ ಶಿಸ್ತು ತ್ಯಾಗ ಅಂಶಗಳ ಆಶಾಭಾವನೆ ಒಳಪಡುವುದನ್ನು ನೋಡಿ ಕಲೆಯೂವಂತಹದು ರಂಜಾನ್ ತಿಂಗಳಲ್ಲಿ ಸ್ವರ್ಗದ ಬಾಗಿಲು ತೆರೆಯುತ್ತದೆ ನರಕದ ಬಾಗಿಲು ಮುಚ್ಚುತ್ತದೆ ಶೈತಾನನನ್ನು ಕಟ್ಟಿ ಹಾಕಲಾಗುತ್ತದೆ ಎಂಬ ನಂಬಿಕೆಯಿಂದ ಒಳ್ಳೆಯದನ್ನು ಮಾಡಬೇಕು ಅದಕ್ಕಾಗಿ ರೋಜಾ ಉಪವಾಸ ಇಡುತ್ತೇವೆ ನಮ್ಮನ್ನು ನಾವು ದಂಡಿಸಿಕೊಳ್ಳುತ್ತಾ ಮನಸ್ಸಿನ ನಿಯಂತ್ರಣ ದಾನ ತ್ಯಾಗ ಮಾಡುತ್ತೇವೆ ಪ್ರಪಂಚಕ್ಕೆ ರಂಜಾನ್ ಮಾಸ ಶಾಂತಿಯ ಸಂದೇಶ ನೀಡುತ್ತದೆ ಎಂದು ಅವರು ನುಡಿದರು. ರೋಜಾ ಉಪವಾಸ ಮಾಡುತ್ತಿರುವುದು ಇನ್ನೊಬ್ಬರ ಹಸಿವನ್ನು ಅರಿಯುವುದೇ ರಂಜಾನ್ ತಿಂಗಳ ರೋಜಾ ಉಪವಾಸ ಆಚರಿಸುತ್ತಿರುವ ನಾವೆಲ್ಲರೂ ಪ್ರೀತಿ ವಿಶ್ವಾಸದಿಂದ ಬದುಕಬೇಕು ಸರ್ವರಿಗೂ ಮಾಹೆ ರಂಜಾನ್ ಮುಬಾರಕ್ ಪ್ರೀತಿಯ ಶುಭಾಶಯಗಳು ಎಂದು ಸಮಾಜ ಸುಧಾರಕ ಅಲ್ ಹಾಜ್ ಅಬ್ದುಲ್ ನಬಿ ಅವರು ಶುಭ ಹಾರೈಸಿದರು. ಸೌದಾಗರ್ ಮಜೀದ್ ಗೌರವ ಅಧ್ಯಕ್ಷರು ಹಾಜಿ ಹಂಡಿ ಹುಸೇನ್ ಬಾಷು, ಈದ್ಗಾ ಮತ್ತು ಖಬರ ಸ್ಥಾನ್ ಕಮಿಟಿ ಮಾಜಿ ಅಧ್ಯಕ್ಷರು ಹಂಡಿ ಹಾಶೀಮ್, ಡಾ. ಮೊಹಮ್ಮದ್ ಅಲಿ, ಹಾಫೀಜೆ ಖುರಾನ್ ಬಿ ಮೌಲಾನ ಆಲಂ ಬಾಷಾ ಸಾಹಬ್, ಜಾಮ ನಿಜಾಮಿಯಾ ಮಜೀದ್ ಹಾಫೀಜ್ ನಿಸಾರ್ ಅಹಮದ್, ಮೌಜನ್ ಕೆ ಎಂ ಹೊನ್ನೂರ್ ವಲಿ, ಹಂಡಿ ಹುಸೇನ್, ಖತೀಬ್ ಜಹೀರುದ್ದೀನ್ ಬಾಬು, ಹಾಜಿ ಹೋಟೆಲ್ ಅಬ್ದುಲ್ ಗಫೂರ್, ಹಾಜಿ ಖಾಲಿ ಚೀಲ ಹುಸೇನ್ ಸಾಬ್, ಮೊಹಮ್ಮದ್ ನಿಜಾಮುದ್ದೀನ್ , ಮೊಹಮ್ಮದ್ ಹಾಜಿ, ಬಿ ಅಬ್ದುಲ್ ಗನಿ, ದಾದಾ ಖಲಂದರ್, ಮೊಹಮ್ಮದ್ ಗೌಸ್, ಟೈಲರ್ ಮೆಹಬೂಬ್ ಸುಬಾನ್,ಮೊಹಮ್ಮದ್ ಗೌಸ್, ಜಿಲಾನ್, ಶಾಷ ವಲಿ ಮಸೀದಿ ಅಧ್ಯಕ್ಷರು ಮಖಂದಾರ್ ಮೆಹಬೂಬ್ ಬಾಷಾ ಪದಾಧಿಕಾರಿಗಳು ಸದಸ್ಯರು ಆಲೂರು ತಾಲೂಕು ಗೆಜ್ಜೆಹಳ್ಳಿ ಆದೋನಿ ತಾಲೂಕು ವಿವಿಧ ಗ್ರಾಮಗಳ ಸಮುದಾಯದವರು ರೋಜಾ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ



















